5:20 AM Monday15 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ತೈವಾನ್ ಎಕ್ಸಲೆನ್ಸ್ ತಂತ್ರಜ್ಞಾನ, ಸಂಸ್ಕೃತಿ ಮತ್ತು ನಾವೀನ್ಯಗಳ ರೋಮಾಂಚನಕಾರಿ ಪ್ರದರ್ಶಕ್ಕೆ ಚಾಲನೆ: ಬಾಲಿವುಡ್ ನಟಿ ನೇಹಾ ಶರ್ಮಾ ಉದ್ಘಾಟನೆ

15/11/2024, 20:41

ಬೆಂಗಳೂರು(reporterkarnataka.com): ತೈವಾನ್‍ನ ನವ ನವೀನ ಕಂಪನಿಗಳಿಗೆ ಪ್ರತಿಷ್ಠಿತ ಮನ್ನಣೆ ಎನಿಸಿರುವ ತೈವಾನ್ ಎಕ್ಸಲೆನ್ಸ್ ಇಂದು ಬೆಂಗಳೂರಿನ ಲುಲು ಮಾಲ್‍ನಲ್ಲಿ ತನ್ನ ಬಹು ನಿರೀಕ್ಷಿತ ವೈಬ್ರಂಟ್ ಇನ್ನೋವೇಶನ್ಸ್ ಮತ್ತು ಬ್ರಾಂಡ್ ಅನುಭವಗಳಿಗೆ ಚಾಲನೆ ನೀಡಿದೆ.
ಚೆನ್ನೈನ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಮಹಾನಿರ್ದೇಶಕ ಶ್ರೀ ರಿಚರ್ಡ್ ಚೆನ್, ತೈಪೆ ವಲ್ರ್ಡ್ ಟ್ರೇಡ್ ಸೆಂಟರ್ ಲೈಸನ್ ಆಫೀಸ್ ಚೆನ್ನೈನ ನಿರ್ದೇಶಕ ಶ್ರೀ ಜೂಲ್ಸ್ ಶಿಹ್ ಮತ್ತು ಬಾಲಿವುಡ್ ನಟಿ ನೇಹಾ ಶರ್ಮಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವು ತಂತ್ರಜ್ಞಾನ, ಸಂಸ್ಕೃತಿ ಮತ್ತು ಸೃಜನಶೀಲತೆಯ ಅತ್ಯಾಕರ್ಷಕ ಸಮ್ಮಿಳನದ ಖಾತರಿ ನೀಡುತ್ತದೆ.

ನವೆಂಬರ್ 15ರಿಂದ 17 ರವರೆಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ತೈವಾನ್‍ನ ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳು ಮತ್ತು ಸಾಂಸ್ಕೃತಿಕ ಅನುಭವಗಳನ್ನು ಬೆಂಗಳೂರು ಮಹಾನಗರಕ್ಕೆ ಪರಿಚಯಿಸಲಾಗುತ್ತದೆ. ಮೊದಲ ದಿನವು ಡಿಜಿಟಲ್ ಸಂವಹನಗಳಿಂದ ಹಿಡಿದು ಬಬಲ್ ಟೀ, ಕ್ರೇಪ್ಸ್‍ನಂಥ ತೈವಾನ್ ಜನತೆಯ ಅಚ್ಚುಮೆಚ್ಚಿನ ಪಾಪ್- ಅಪ್ ಕೆಫೆಯವರೆಗಿನ ರೋಮಾಂಚಕ ಕೊಡುಗೆಗಳೊಂದಿಗೆ ಪ್ರಾರಂಭವಾಯಿತು. ಸಂದರ್ಶಕರು ಲೈವ್ ಗೇಮಿಂಗ್ ವಲಯಗಳು, ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ವಿಶೇಷವಾದ ಚಟುವಟಿಕೆಗಳನ್ನು ಆನಂದಿಸಿದರು, ತೈವಾನ್‍ನ ಅತ್ಯುತ್ತಮ ಆವಿಷ್ಕಾರಗಳ ಕ್ರಿಯಾತ್ಮಕ ಪ್ರದರ್ಶನಕ್ಕೆ ಇದು ವೇದಿಕೆಯಾಯಿತು.
ಪ್ರಮುಖ ಬ್ರಾಂಡ್‍ಗಳಾದ ಏಸರ್, ಆಸೂಸ್, ಬೀನ್‍ಬಾನ್, ಬೆಂಕ್, ಡಿ-ಲಿಂಕ್, ಜಿ-ಸ್ಕಿಲ್, ಗಿಗಾಬೈಟ್, ಐಬಲ್, ಐಪಿಇವಿಓ, ಎಂಬ್ರಾನ್ ಫಿಲ್ಟ್ರಾ, ಎಂಎಸ್‍ಐ, ಥರ್ಮಲ್‍ಟೇಕ್, ಟ್ರಾನ್ಸೆಂಡ್, ವ್ಯಾಗೊ, ವಿಕ್ಟರ್, ವಿಐಐಎಂ ಮತ್ತು ಝಿಕ್ಸೆಲ್‍ಗಳು ತಮ್ಮಲ್ಲಿ ತಯಾರಾದ ತಂತ್ರಜ್ಞಾನ ಮತ್ತು ವಿನ್ಯಾಸದ ಅದ್ಭುತ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ.
ಚೆನ್ನೈನಲ್ಲಿರುವ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಮಹಾನಿರ್ದೇಶಕ ರಿಚರ್ಡ್ ಚೆನ್ ಅವರು ತಮ್ಮ ಉತ್ಸಾಹವನ್ನು ಹಂಚಿಕೊಂಡು, “ಸದಾ ಎದುರು ನೋಡುತ್ತಿರುವ ನಗರಕ್ಕೆ ಈ ವಿಶಿಷ್ಟ ಅನುಭವವನ್ನು ತರಲು ನಾವು ಉತ್ಸುಕರಾಗಿದ್ದೇವೆ. ಈ ಘಟನೆಯು ತೈವಾನ್‍ನ ತಂತ್ರಜ್ಞಾನದ ನಾಯಕತ್ವದ ಪ್ರದರ್ಶನಕ್ಕಿಂತ ಹೆಚ್ಚು; ಇದು ತೈವಾನ್ ಮತ್ತು ಭಾರತದ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯನ್ನು ಸಂಭ್ರಮಿಸುತ್ತಿದೆ. ಒಟ್ಟಾಗಿ, ನಮ್ಮ ದೇಶಗಳು ಐತಿಹಾಸಿಕ ಮೈಲಿಗಲ್ಲುಗಳನ್ನು ಸಾಧಿಸಿವೆ, ದ್ವಿಪಕ್ಷೀಯ ವ್ಯಾಪಾರವು ಇತ್ತೀಚೆಗೆ 10 ಶತಕೋಟಿ ಡಾಲರ್‍ಗಳನ್ನು ಮೀರಿದೆ. ತೈವಾನ್‍ನ ಜಾಗತಿಕವಾಗಿ ಗುರುತಿಸಲ್ಪಟ್ಟ ಪರಿಣತಿಯು ಅನೇಕ ಕ್ಷೇತ್ರಗಳನ್ನು ವ್ಯಾಪಿಸಿದ್ದು, ಇದು ತಂತ್ರಜ್ಞಾನದ ಶಕ್ತಿಯಾಗಿ ಅದರ ತ್ವರಿತ ಏರಿಕೆಯನ್ನು ಮುಂದುವರಿಸುತ್ತಿರುವುದರಿಂದ ಭಾರತಕ್ಕೆ ನಮ್ಮನ್ನು ನೈಸರ್ಗಿಕ ಪಾಲುದಾರರನ್ನಾಗಿ ಮಾಡುತ್ತದೆ” ಎಂದು ಬಣ್ಣಿಸಿದರು.
ಇತ್ತೀಚಿನ ವರ್ಷಗಳಲ್ಲಿ, ತೈವಾನ್ ಎಕ್ಸಲೆನ್ಸ್ ಭಾರತೀಯ ವ್ಯವಹಾರಗಳೊಂದಿಗೆ ಯಶಸ್ವಿ ಪಾಲುದಾರಿಕೆಯನ್ನು ಬೆಳೆಸಲು ಮತ್ತು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮಿಷನ್‍ನಂತಹ ಉಪಕ್ರಮಗಳನ್ನು ಬೆಂಬಲಿಸಲು ಭಾರತದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಭಾರತೀಯ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಜಾಗತಿಕವಾಗಿ ತನ್ನ ಪ್ರಶಸ್ತಿ ವಿಜೇತ ಬ್ರ್ಯಾಂಡ್‍ಗಳನ್ನು ಪ್ರದರ್ಶಿಸಲು ತೈವಾನ್ ಎಕ್ಸಲೆನ್ಸ್‍ನ ಪ್ರಯತ್ನಗಳಲ್ಲಿ ಟಿಇ ವೈಬ್ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ತೈಪೆ ವಲ್ರ್ಡ್ ಟ್ರೇಡ್ ಸೆಂಟರ್ ಲೈಸನ್ ಆಫೀಸ್ ಚೆನ್ನೈನ ನಿರ್ದೇಶಕರಾದ ಜೂಲ್ಸ್ ಶಿಹ್ ಸಹ ತಮ್ಮ ಸಂತಸ ಹಂಚಿಕೊಂಡು, “ಟಿಇ ವೈಬ್ ಒಂದು ಟೆಕ್ ಪ್ರದರ್ಶನಕ್ಕಿಂತ ಹೆಚ್ಚಿನದ್ದಾಗಿದ್ದು, ಇದು ಟೆಕ್ ಉತ್ಸಾಹಿಗಳು, ಸಂಸ್ಕೃತಿ ಅಭಿಮಾನಿಗಳು ಮತ್ತು ಹೊಸತನವನ್ನು ಹತ್ತಿರದಿಂದ ಅನುಭವಿಸಲು ಉತ್ಸುಕರಾಗಿರುವ ಎಲ್ಲರನ್ನೂ ಕ್ರಿಯಾತ್ಮಕವಾಗಿ ಒಟ್ಟುಗೂಡಿಸುವ ಸ್ಥಳವಾಗಿದೆ. ತೈವಾನ್‍ನ ಉನ್ನತ ಬ್ರ್ಯಾಂಡ್‍ಗಳನ್ನು ತರಲು ನಾವು ಹೆಮ್ಮೆಪಡುತ್ತೇವೆ, ಗೇಮಿಂಗ್, ಜೀವನಶೈಲಿ ಮತ್ತು ಹೆಚ್ಚಿನವುಗಳಲ್ಲಿ ಅತ್ಯಾಧುನಿಕ ಗ್ಯಾಜೆಟ್‍ಗಳೊಂದಿಗೆ ಹ್ಯಾಂಡ್ಸ್-ಆನ್ ಸಂವಹನಗಳನ್ನು ನೀಡುತ್ತೇವೆ. ಈ ಕಾರ್ಯಕ್ರಮ ತೈವಾನ್‍ನ ತಂತ್ರಜ್ಞಾನ ಮತ್ತು ಸೃಜನಶೀಲತೆಯ ಉತ್ಸಾಹವನ್ನು ಬೆಂಗಳೂರಿನ ಶಕ್ತಿಯೊಂದಿಗೆ ಒಂದುಗೂಡಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಟಿಇ ವೈಬ್ ಅತ್ಯುತ್ತಮವಾದ ‘ಮೇಡ್ ಇನ್ ತೈವಾನ್’ ಅನ್ನು ಹೈಲೈಟ್ ಮಾಡುತ್ತದೆ, ಇದು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಕೃಷ್ಟತೆಗೆ ತೈವಾನ್‍ನ ಸಮರ್ಪಣೆಯನ್ನು ಪ್ರದರ್ಶಿಸುವ ಆಕರ್ಷಕ ಅನುಭವಗಳ ಶ್ರೇಣಿಯನ್ನು ನೀಡುತ್ತದೆ.
ಈವೆಂಟ್‍ನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶಕ್ಕಾಗಿ, ನವೆಂಬರ್ 15-17 ರವರೆಗೆ ಲುಲು ಮಾಲ್, ರಾಜಾಜಿ ನಗರ, ಬೆಂಗಳೂರು, ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ www.tevibe.inಗೆ ಭೇಟಿ ನೀಡಿ.

ಇತ್ತೀಚಿನ ಸುದ್ದಿ

ಜಾಹೀರಾತು