10:44 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಟೈಲರ್ ಗಳಿಗೆ ಸರಕಾರ ಘೋಷಿಸಿದ ಪ್ಯಾಕೇಜ್ ಗೆ ಅಧಿಕಾರಿಗಳ ಅಡ್ಡಗಾಲು: ಸಹಿ ಹಾಕಲು ಲೈಸೆನ್ಸ್ ಕೇಳುತ್ತಾರಂತೆ !!

12/06/2021, 20:29

ಮಂಗಳೂರು(reporterkarnataka news): ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಟೈಲರ್ ವೃತ್ತಿ ಬಾಂಧವರಿಗೆ ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು, ಕಷ್ಟದಲ್ಲಿರುವ ಟೈಲರ್ ಗಳು ಪೇಚಿಗೆ ಸಿಲುಕಿದ್ದಾರೆ.

ಟೈಲರ್‌ಗಳು ತಾವು  ಅಸಂಘಟಿತ ಕಾರ್ಮಿಕರು ಎಂದು ರುಜುವಾತು ಪಡಿಸಲು  ಸರಕಾರ ಸೂಚಿಸಿದ ಅಧಿಕಾರಿಗಳ  ಬಳಿ ಸಹಿ  ಹಾಕಲು ಹೋದಾಗ  ನೀವು ಲೈಸೆನ್ಸ್ ಮಾಡಿದ್ದೀರಾ ಅಂತ ಕೇಳುತ್ತಾರೆ. ನಾವು ಮನೆಯಲ್ಲಿಯೇ ಕೆಲಸ ಮಾಡುವುದು ಅಂತ ಪರಿ -ಪರಿಯಾಗಿ  ಹೇಳಿದರೂ ಸಹಿ  ಹಾಕದೆ  ವಾಪಸ್ಸು ಕಳುಹಿಸುತ್ತಾರೆ. ಇದರಿಂದಾಗಿ ಟೈಲರ್‌ಗಳು ಸರಕಾರ ಘೋಷಿಸಿದ ಪ್ಯಾಕೇಜ್ ಪಡೆಯಲು ತೊಂದರೆಯಾಗುತ್ತಿದ್ದು ಈ ಗೊಂದಲವನ್ನು ನಿವಾರಿಸುವಂತೆ ಕೆಎಸ್‌ಟಿಎ ರಾಜ್ಯಾಧ್ಯಕ್ಷ ಆನಂದ ಕೆ.ಎಸ್. ಸರಕಾರವನ್ನು ಒತ್ತಾಯಿಸಿದರು. 

ನಗರದ ಗೋರಿಗುಡ್ಡೆಯಲ್ಲಿರುವ ಟೈಲರ್ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. 

ಕೋವಿಡ್‌ನಿಂದಾಗಿ ಟೈಲರ್‌ಗಳು ಅಂಗಡಿ ಬಾಗಿಲು ತೆರೆಯದೇ ಮನೆಯಲ್ಲಿಯೇ ಉಳಿಯುವಂತಾಗಿದೆ. ಇಂತಹ  ಕಷ್ಟದ ಸಮಯದಲ್ಲಿ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ ಮೊತ್ತ  2 ಸಾವಿರ ರೂಪಾಯಿಯನ್ನು  ಪಡೆಯಲು  ಎಪಿಎಲ್  ಮತ್ತು ಬಿಪಿಎಲ್  ಎಂಬ ಮಾನದಂಡವನ್ನು  ನಿಗದಿ ಪಡಿಸಿರುವುದು ಟೈಲರ್ ವೃತ್ತಿ ಬಾಂಧವರಲ್ಲಿ ತಾರತಮ್ಯ ಮಾಡಿದಂತಾಗಿದೆ. ದಯಾಮಾಡಿ ಸರಕಾರ ಈ  ನಿಯಮವನ್ನು ಕೈ  ಬಿಟ್ಟು ಎಲ್ಲಾ ಟೈಲರ್ ಗಳಿಗೂ ಪ್ಯಾಕೇಜ್ ಮೊತ್ತ ನೀಡುವಂತೆ ಅವರು ಒತ್ತಾಯಿಸಿದರು. 

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ (ಕೆಎಸ್‌ಟಿಎ)  ಕಳೆದ  21 ವರ್ಷದಿಂದ  ಟೈಲರ್ ವೃತ್ತಿಯವರ ಶ್ರೇಯೋಭಿವೃದ್ದಿಗಾಗಿ  ಕೆಲಸ ಮಾಡುತ್ತಿದೆ.  ಸಂಘವನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಘಟನೆಯ ಗುರುತು ಕಾರ್ಡ್ ತೋರಿಸಿದರೆ ಅಧಿಕಾರಿಗಳು  ಸಹಿ ಹಾಕಿ ಟೈಲರ್‌ಗಳು ಪ್ಯಾಕೇಜ್ ಮೊತ್ತ ಪಡೆಯಲು ಪರಿಗಣಿಸಬೇಕು,   ಈ ಬಗ್ಗೆ ಸರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಅಂಬೇಡ್ಕರ್ ಸಹಾಯ ಹಸ್ತ  ಯೋಜನೆಯಲ್ಲಿ  ಸ್ಮಾರ್ಟ್  ಕಾರ್ಡ್ ಮಾಡಲಾಗಿದೆ. 2018ರಲ್ಲಿ ಅರ್ಜಿ ಕೊಟ್ಟವರಿಗೆ ಇನ್ನೂ ಕಾರ್ಡ್ ಬಂದಿಲ್ಲ. ಬಂದಿರುವ ಕಾರ್ಡ್‌ಗಳಲ್ಲಿ ಹೆಚ್ಚಿನವರ  ವೃತ್ತಿ ಬದಲಾವಣೆಯಾಗಿದೆ.  ಟೈಲರ್ ವೃತ್ತಿ ಮಾಡುತ್ತಿರುವವರಿಗೆ  ಚಿಂದಿ  ಆಯುವವರು  ಎಂದು ಮುದ್ರಿತವಾಗಿದ್ದರೆ  ಹಮಾಲಿಗಳು ಎಂದು ಮುದ್ರಿತವಾಗ ಬೇಕಾದ ಕಾರ್ಡ್ ಗಳಲ್ಲಿ ಟೈಲರ್‌ಗಳು  ಎಂದು ತಪ್ಪಾಗಿ ಮುದ್ರಿಸಲಾಗಿದೆ. ಈ  ವ್ಯತ್ಯಾಸಗಳನ್ನು  ಆದಷ್ಟು ಬೇಗ  ಸರಿಪಡಿಸಿ ಕೊಡುವ   ಆಶ್ವಾಸನೆ  ಕೊಟ್ಟಿದ್ದರೂ    ಈವರೆಗೆ ಸರಿಯಾಗಲಿಲ್ಲ. ಇದರಿಂದಲೂ ಟೈಲರ್ ಗಳು ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಿದೆ ಎಂದು ವಿವರಿಸಿದರು.  

ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ ಮಾತನಾಡಿ ಸರಕಾರ ಟೈಲರ್‌ಗಳಿಗೆ ಘೋಷಿಸಿರುವ ಪ್ಯಾಕೇಜ್ ಮೊತ್ತವನ್ನು 2 ಸಾವಿರದಿಂದ 4 ಸಾವಿರಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕೆಎಸ್‌ಟಿಎ ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ನಗರ ಸಮಿತಿ ಮಾಜಿ ಅಧ್ಯಕ್ಷೆ ಕುಸುಮ ದೇವಾಡಿಗ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು