ಇತ್ತೀಚಿನ ಸುದ್ದಿ
ತಹಶೀಲ್ದಾರ್ ಆಗಿದ್ದಾಗ ಸರಕಾರಿ ಭೂಮಿ ಅಕ್ರಮ ಪರಭಾರೆ: ಸೀಬರ್ಡ್ ನೌಕಾನೆಲೆ ಭೂಸ್ವಾಧೀನ ಅಧಿಕಾರಿ ಬಂಧನ
25/08/2023, 11:26

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಾವಿರಾರು ಎಕರೆ ಸರಕಾರಿ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದ ಮೇಲೆ ಕಡೂರಿನ ನಿಕಟಪೂರ್ವ ತಹಶೀಲ್ದಾರ್ ಉಮೇಶ್ ಅವರನ್ನು ಬಂಧಿಸಲಾಗಿದೆ.
ಕಡೂರು ಪೊಲೀಸರು ಉಮೇಶ್ ಅವರನ್ನು ಬೆಂಗಳೂರಿನಲ್ಲಿ ಸೆರೆ ಹಿಡಿದಿದ್ದಾರೆ. ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪ ಉಮೇಶ್ ಅವರ ಮೇಲಿದೆ. ಕಡೂರಿನಲ್ಲಿ ತಹಸೀಲ್ದಾರ್ ಆಗಿರುವಾಗ ಉಮೇಶ್ ಅವರು
ಮೀಸಲು ಅರಣ್ಯವನ್ನು 8 ಜನರಿಗೆ ಪರಭಾರೆ ಮಾಡಿದ್ದರು.
ಸುಮಾರು 3500 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು.
ಕಡೂರು ಠಾಣೆಯಲ್ಲಿ ಉಮೇಶ್ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು.
ಇಂದು ಬೆಂಗಳೂರಿನಲ್ಲಿ ಕಡೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಮೇಶ್ ಅವರು ಪ್ರಮೋಷನ್ ಆಗಿ ಕಾರವಾರ ಸೀಬರ್ಡ್ ನೌಕನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಈ ಕುರಿತು ತನಿಖೆಗೆ 15 ತಹಶೀಲ್ದಾರ್ ಗಳ ತಂಡ ರಚಿಸಲಾಗಿದೆ.