9:07 AM Tuesday26 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ತಾಯಿ ಪ್ರೀತಿ ಬಹು ದೊಡ್ಡದು: ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ಪುತ್ರ ವಿನೋದ್ ರಾಜ್

26/12/2023, 20:48

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಮಸ್ಕಿ ಬೆಂಗಳೂರು

info.reporterkarnataka@gmail.com

ಸಮಾಜದಲ್ಲಿ ತಾಯಿ ಪ್ರೀತಿ ಬಹಳ ಮಹತ್ವದ್ದು ತಾಯಿ ತನ್ನ ಮಗುವನ್ನು ಅತ್ಯುತ್ತಮವಾಗಿ ಬೆಳೆಸಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಆ ತಾಯಿಯ ನೆನಪು ಮರೆಯುವುದು ಬಹಳ ಕಷ್ಟ ಎಂದು ಚಲನಚಿತ್ರ ನಟ ವಿನೋದ್ ರಾಜ್ ತಮ್ಮ ತಾಯಿಯ ಲೀಲಾವತಿಯ ನೆನಪು ಮಾಡಿಕೊಂಡು ಕಣ್ಣೀರಿಟ್ಟರು.
ಪ್ರತಿಯೊಬ್ಬರು ತಾಯಿಯನ್ನು ಪ್ರೀತಿಸಿ ತಾಯಿಯ ಸೇವೆ ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಸಂದೇಶ ನೀಡಿದರು.
ಅವರು ರಾಜ್ಯ ಕರ್ನಾಟಕ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಸಾರ್ವಜನಿಕರಿಗೆ ಸಂದೇಶ ನೀಡಿದರು. ತಾಯಿ ಲೀಲಾವತಿ ಭಾವಚಿತ್ರಕ್ಕೆ ಪುಷ್ಪ ನೀಡುವುದರ ಮೂಲಕ ಪೂಜಾ ಸಲ್ಲಿಸಿದರು.
ಬೆಂಗಳೂರು ನಿವೃತ್ತ ಹೈಕೋರ್ಟ್ ಜಡ್ಜ್ ಗೋಪಾಲ್ ಸರ್ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರಿಗೆ ದೊಡ್ಡ ಗೌರವವಿದೆ ಪ್ರಾಣಿ ಪಕ್ಷಿಗಳಿಗೂ ಇರುವ ಸೌಜನ್ಯವು ಪತ್ರಕರ್ತರನ್ನು ಯಾರು ಕೀಳಾಗಿ ನೋಡಬಾರದು ಮೊನ್ನೆ ನಡೆದ ಬೆಳಗಾವಿ ಚರಿಗಾಳದ ಅಧಿವೇಶನದಲ್ಲಿ ಸಚಿವ ಕೆಎಸ್ ಮುನಿಯಪ್ಪ ಮನವಿ ಪತ್ರ ಸ್ವೀಕರಿಸ ಸಂದರ್ಭದಲ್ಲಿ ತಮ್ಮ ಬೇಗ ಕೊಡಿ ನಾವು ಹೋಗಬೇಕು ನಿಂದು ಏನಿದೆ ಅದನ್ನು ಮಾತನಾಡಿ ಎಂದು ಮಾತನಾಡಿದ ಒಂದು ವಿಡಿಯೋ ನೋಡಿ ಹೈ ಕೋರ್ಟ್ ಜಡ್ಜ್ ಇದು ಸಚಿವರೆ ತರವಲ್ಲ ನಿಮ್ಮ ಸಚಿವ ಸ್ಥಾನ ಜನರಕೊಟ್ಟ ಭಿಕ್ಷೆ ಅದನ್ನು ಅರ್ಥ ಮಾಡಿಕೊಳ್ಳಿ ಪತ್ರಕರ್ತರನ್ನು ಕೀಳಾಗಿ ನೋಡಬೇಡಿ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ. ಪತ್ರಕರ್ತರ ಸಮಸ್ಯೆ ಸರಕಾರಕ್ಕೆ ಮುಟ್ಟಿಸುವೆ. ಖಂಡಿತ ಈ ಕಾರ್ಯ ಮಾಡಿಕೊಡಲು ಎಂದು ಭರವಸೆ ನೀಡಿದರು.
ನಾಡಿನ ಅರೆ ಗುರು ಚರಮೂರ್ತಿಗಳು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಾಸ್ತಾವಿಕವನ್ನು ನುಡಿಯನ್ನು ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ. ರಾಜ್ಯದಲ್ಲಿ ಪತ್ರಕರ್ತರ ಬದುಕು ಗಂಭೀರ ಸ್ಥಿತಿಯಲ್ಲಿದೆ. ಎಷ್ಟೋ ಬಾರಿ ಮನವಿ ಪತ್ರ ಕೊಟ್ಟರು ಎಷ್ಟು ಹೋರಾಟ ಮಾಡಿದರು ಸರ್ಕಾರ ಗಮನ ಹರಿಸುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಪತ್ರಕರ್ತರಿಗೆ ಅಕಾಡೆಶನ್ ಕಾರ್ಡ್ ಪತ್ರಕರ್ತರಿಗೆ ಮಾಶಾಸನ ಪತ್ರಕರ್ತರಿಗೆ ಭದ್ರತಾ ಅಡಿಯಲ್ಲಿ ಸಿಗುವ ಸೌಲಭ್ಯ ಜೀವ ವಿಮೆ ಹಾಗೂ ಇನ್ನೂ ನೂರಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಪತ್ರಕರ್ತರಿಗೆ ಜಿಲ್ಲೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಓಡಾಡುವ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಮಂಗಳಮುಖಿಯರಿಗೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ಹಾಗೂ ಗೌರವದನ ಮಾಡುವುದರ ಜೊತೆಗೆ ಸ್ವಾಗತ ಅದೇ ರೀತಿ ಪತ್ರಕರ್ತರಿಗೂ ಗೌರವ ಸುಂದರ ಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.


ಪತ್ರಕರ್ತರ ಮಕ್ಕಳು ಪ್ರತಿಭಾವಂತ ವಿದ್ಯಾರ್ಥಿ ಸನ್ಮಾನಿಸಲಾಯಿತು. ವಿವೇದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಎಲ್ಲಾ ತಾಲೂಕು ಅಧ್ಯಕ್ಷರಿಗೂ ಜಿಲ್ಲಾಧ್ಯಕ್ಷರಿಗೂ ಸಂಪಾದಕರಿಗೂ ವಿಶೇಷ ಸಾಧಕರು ಸನ್ಮಾನಿಸಲಾಯಿತು. ವಿಶೇಷವಾಗಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಪುತ್ರಿ ಅನಿತಾ ಸಾಲಿಮಠ ಅವರನ್ನು ವಿದ್ಯಾರ್ಥಿಯಾಗಿ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಹಾಗೆ ಎಲ್ಲ ಎಲ್ಲಾ ಸಂಪಾದಕರೊಡನೆ ಎರಡನೇ ಬಾರಿ ರಾಜ್ಯ ಪ್ರಶಸ್ತಿ ನೀಡಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಉಪಾಧ್ಯಕ್ಷ ವಿಸ್ಮಯವಾಣಿ ಸಂಪಾದಕ ಡಾ. ವಾಸುದೇವ್, ಮಾಧ್ಯಮ ಸಲಹೆಗಾರ ಲಕ್ಷ್ಮಣರಾವ್ ಜಗಳೂರು ಭಾನುಪ್ರಕಾಶ್, ರಾಜ್ಯಾದ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನವರು ಅಭಿನಂದಿಸಿದರು. ಹೀಗೆ ರಾಜ್ಯದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು ಹೊಸಪೇಟೆ ಮರಿಯಮ್ಮನಹಳ್ಳಿಯಿಂದ ಕಲಾ ಕಲಾ ರಂಗಭೂಮಿ ಕಲಾವಿದರಿಂದ ಹಾಗೂ ವಿಶೇಷವಾಗಿ ಜಾನಪದ ನೃತ್ಯ ಬಹಳ ನೋಡುಗರನ್ನು ಆಕರ್ಷಣವಾಗಿ ಕಂಡುಬಂದಿದ್ದು.
ಇತ್ತೀಚೆಗೆ ಮರಣ ಹೊಂದಿದ ಚಲನಚಿತ್ರ ನಟಿ ಲೀಲಾವತಿ ಅಮ್ಮನವರಿಗೆ ಸರ್ಕಾರ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಯ ಪತ್ರಕರ್ತ ಸದಸ್ಯರು ಸಾಹಿತಿಗಳು ಹೋರಾಟಗಾರರು, ರಂಗಭೂಮಿ ಕಲಾವಿದರು ಸೇರಿದಂತೆ ಎಲ್ಲ ಸನ್ಮಾನಿತ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು