8:29 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಟಿ20 ಕ್ರಿಕೆಟ್ ಟೂರ್ನಿ: ಸೋಲು ಮರೆತು IND-NZ ಪಂದ್ಯಕ್ಕೆ ಹುರಿದುಂಬಿಸಿದ ಅಭಿಮಾನಿಗಳು; ಮತ್ತೆ ಗರ್ಜಿಸಿ ಹ್ಯಾಷ್ ಟ್ಯಾಗ್! 

26/10/2021, 21:24

ಬೆಂಗಳೂರು(reporterkarnataka.com): ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಪಾಕಿಸ್ತಾನದ ಎದುರು ಭಾರತ ಮೊದಲ ಸೋಲು ಅನುಭವಿಸಿತ್ತು. ಇದು ಕ್ರಿಕೆಟ್ ಪ್ರಿಯರಿಗೆ ಭಾರಿ ನೋವುಂಟಾಗಿತ್ತು. ಈಗ ಅದರಿಂದ ಚೇತರಿಕೊಂಡಿದ್ದು # ಮತ್ತೆ ಘರ್ಜಿಸಿ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಭಾರತ ತಂಡವನ್ನು ಹುರಿದುಂಬಿಸಿದ್ದಾರೆ. 

ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಈ ಕುರಿತು ಕ್ರಿಕೆಟಿಗರು ಹಾಗು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ. 

‘ಭಾರತ ಮತ್ತಷ್ಟು ಗಟ್ಟಿಯಾಗಿ ಹೊರಮೊಮ್ಮಲಿದೆ’ ಎಂದು ಕ್ರಿಕೆಟಿಗ ವ್ರಿದ್ಧಿಮಾನ್ ಸಾಹ ಅಭಿಪ್ರಾಯಪಟ್ಟಿದ್ದಾರೆ. 

‘ಮತ್ತೊಮ್ಮೆ ನಿಮ್ಮ ಆರ್ಭಟವನ್ನು ತೋರಿಸಿ ಗಟ್ಟಿಯಾಗಿ #ಮತ್ತೆ ಘರ್ಜಿಸಿ ಆದ್ರೆ ಮೊನ್ನೆಯ ಸಪ್ಪೆಯಾದ ಘರ್ಜನೆ ಮಾತ್ರ ಮಾಡಬ್ಯಾಡ್ರಿ. ಹುಲಿಯ ಬೇಟೆ ತಪ್ಪಿದ ಮಾತ್ರಕ್ಕೆ ಉಪವಾಸ ಇರಲ್ಲ ಮತ್ತೊಂದು ದಿನ ಭರ್ಜರಿ ಬೇಟೆ ಇದ್ದೇ ಇರತ್ತೆ’ ರಾಜನಂದಿನಿ  ಎನ್ನುವವರು ಕೂ ಮಾಡಿದ್ದಾರೆ. 

:ಪಾಕ್ ವಿರುದ್ಧದ ಸೋಲನ್ನ ಮರೆಸುವ ಪ್ರೊಸೆಸ್ ಶುರುವಾಗ್ಲಿ’ ಎಂದು ಸುನೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲುವು ಸಾಧಿಸುತ್ತದೆಯೇ ಎನ್ನುವ ಕ್ರಿಕೆಟ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಸಾಕಷ್ಟು ಮಂದಿ ಗೆಲುವು ಪಕ್ಕಾ ಎಂದು ಓಟ್ ಮಾಡಿದ್ದಾರೆ. 

‘ಭಾರತ ತಂಡದಲ್ಲಿ ಯಾವುದೇ ಸಮಸ್ಯೆಯಿಲ್ಲ ತಂಡ ಸದೃಢವಾಗಿದೆ ಆದರೆ, ಮೊನ್ನೆಯ ಪಂದ್ಯ ಕೆಲವು ಚಿಕ್ಕಪುಟ್ಟ ತಪ್ಪುಗಳಿಂದ ಸೋತಿರಬಹುದು ಆದರೆ, ಪುನಃ ಭಾರತ ತಂಡ ಫೀನಿಕ್ಸ್ ನಂತೆ ಎದ್ದು ಬರಲಿದೆ ಎಂಬ ವಿಸ್ವಾಸವಿದೆ’ ಎಂದು ಕಾರ್ತಿಕ್ ಎನ್ನುವವರು ಕೂ ಮಾಡಿದ್ದಾರೆ. 

‘ಮುಂಬರಲಿರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಕ್ರಿಕೆಟ್ ಪ್ರಿಯರ ಹಾರೈಕೆಯೊಂದಿಗೆ! ಭಾರತ ಗೆಲ್ಲುವ ಮೂಲಕ ಪುಟಿದೇಳಲಿದೆ!’ ಎಂದು ನರೇಶ್ ಎನ್ನುವವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು