ಇತ್ತೀಚಿನ ಸುದ್ದಿ
ಸ್ವಾತಂತ್ರ್ಯ ಸಂಭ್ರಮ: ಪೋಲಿಸ್ ಸಿಬ್ಬಂದಿಯ ಮನೆಯಂಗಳದಲ್ಲಿಯೇ ರಾಷ್ಟ್ರ ಧ್ವಜ ಹಾರಾಟ
15/08/2021, 15:05
ಮಂಗಳೂರು(reporterkarnataka.com): ಮಂಗಳೂರು ಕದ್ರಿ ಪೋಲಿಸ್ ಠಾಣೆಯ ಸಿಬ್ಬಂದಿ ಪಡೀಲ್ ದರ್ಬಾರ್ ಗುಡ್ಡೆಯ ಕೀರ್ತಿ ಡಿ.ಕೆ ಅವರು ಈ ಬಾರಿಯೂ ಅವರ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜರೋಹಣ ಮಾಡುವುದರ ಮೂಲಕ ದೇಶದ ಅತೀ ದೊಡ್ಡ ಹಬ್ಬವನ್ನು ಆಚರಿಸಿದರು.
ಮನೆ ಮನೆಯಲ್ಲಿಯೂ ಸ್ವಾತಂತ್ರ್ಯ ಸಂಭ್ರಮವನ್ನು ಹೀಗೆ ಆಚರಿಸಬಹುದು. ಭಾರತದ ಐಕ್ಯತೆಯ ಹಾಗೂ ದೇಶದ ಸಾರ್ವಭೌಮತ್ವದ ಪ್ರತೀಕವಾದ ದೇಶದ ಧ್ವಜ ನಮ್ಮಲ್ಲಿ ದೇಶಪ್ರೇಮವನ್ನು ಮೂಡಿಸುತ್ತದೆ. ಭಾರತೀಯತೆಯನ್ನು ಜಾಗೃತಗೊಳಿಸುತ್ತದೆ.
ಮುಂದಿನ ಪೀಳಿಗೆಗೂ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯ ಮಾದರಿಯಾಗಬಹುದು