1:34 AM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲದು; ಬದಲಿಗೆ ಧರ್ಮದಲ್ಲಿರುವ ತಾರತಮ್ಯ ನಿವಾರಿಸಲಿ: ಪದ್ಮರಾಜ್ ಆರ್. ಪೂಜಾರಿ

06/07/2024, 22:48

ಮಂಗಳೂರು(reporterkarnataka.com): ಸ್ವಾಮೀಜಿಗಳು ಹಿಂದೂ ಸಮಾಜದಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಗಮನ ಹರಿಸಲಿ. ಅದು ಬಿಟ್ಟು
ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಉಡುಪಿಯ ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಪ್ರತಿಕ್ರಿಯಿಸಿರುವ ಬಗ್ಗೆ ತಿರುಗೇಟು ನೀಡಿದರು.
ಧಾರ್ಮಿಕ ಕ್ಷೇತ್ರದಲ್ಲಿರುವ ಸ್ವಾಮೀಜಿಗಳು ರಾಜಕೀಯ ಮಾತನಾಡುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ನಾವು ಎಂದಿಗೂ ಹಿಂದೂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ. ನನಗೂ ಈ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ಮತ ಹಾಕಿದ್ದಾರೆ. ನಾವುಗಳು ಕೂಡ ಹಿಂದೂಗಳು. ಪೇಜಾವರ ಶ್ರೀಗಳು ತಮ್ಮ ವ್ಯಾಪ್ತಿಯನ್ನು ಅರಿತು ಅದರ ಕಡೆಗೆ ಗಮನ ಹರಿಸಿದರೆ ಉತ್ತಮ ಎಂದು ಹೇಳಿದರು.
ಆಸೆ-ಆಮೀಷಗಳನ್ನು ತೋರಿಸಿ ಜನರಿಂದ ಮತ ಪಡೆದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮ ಮಂದಿರ ಪೂರ್ಣಗೊಳ್ಳುವ ಮೊದಲೇ ಜನರಲ್ಲಿ ದೇವರ ಹೆಸರನ್ನು ಹೇಳಿ ತರಾತುರಿಯಲ್ಲಿ ಮಂದಿರವನ್ನು ಉದ್ಘಾಟಿಸಿ ಜನರಲ್ಲಿ ಆಸೆ-ಆಮೀಷವನ್ನು ತೋರಿಸಿದವರು ಯಾರು? ಇದು ರಾಜಕೀಯವಲ್ಲವೇ? ಇದರಲ್ಲಿ ರಾಜಕೀಯ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ದೇಶದಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ, ನೀಟ್ ಪರೀಕ್ಷೆಯ ಸೋರಿಕೆಯಿಂದಾಗಿ ಬಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವುದಿಲ್ಲ. ಇವರಿಗೆ ಬಡವರ ಕಾಳಜಿ ಇಲ್ಲ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಮಟ್ಟದಲ್ಲಿ ಸಿಇಟಿ ಪರೀಕ್ಷೆಯನ್ನು ಜಾರಿಗೆ ತಂದು ಬಡ ಮಕ್ಕಳೂ ಇಂಜಿನಿಯರ್, ಡಾಕ್ಟರ್‌ಗಳಾಗುವಂತೆ ಮಾಡಿದರು. ಆದರೆ ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ತಂದು ಬಡವರಿಗೆ ಅನ್ಯಾಯ ಮಾಡಿದೆ. ಇದರ ಬಗ್ಗೆ ಯಾಕೆ ಶ್ರೀಗಳು ಪ್ರಶ್ನಿಸುವುದಿಲ್ಲ? ಸಣ್ಣ ಸಣ್ಣ ವಿಚಾರಕ್ಕೆ ಪ್ರತಿಭಟಿಸುವ ಬಿಜೆಪಿ ವಿದ್ಯಾರ್ಥಿ ಸಂಘಟನೆಗಳು ನೀಟ್ ಹಗರಣದ ಬಗ್ಗೆ ಯಾಕೆ ಇಲ್ಲಿಯ ತನಕ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಹಿಂದುತ್ವದ ಗುತ್ತಿಗೆ ಕೊಟ್ಟ ಹಾಗೆ ಮಾತನಾಡುತ್ತಿದ್ದಾರೆ. ಯಾರು ಇದನ್ನು ವಿರೋಧಿಸುತ್ತಾರೆ, ಅವರನ್ನು ಧಮನಿಸುವ ಕೆಲಸ ಮಾಡುತ್ತಾರೆ. ಕಳೆದ 10 ವರ್ಷದಲ್ಲಿ ಬಿಜೆಪಿ ವಿರೋಧ ಪಕ್ಷವನ್ನು ಧಮನಿಸುವ ಕೆಲಸವನ್ನು ಮಾಡಿದೆ. ಅದನ್ನು ಅರಿತ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಪ್ರತಿಭಟನೆ ಮಾಡುವ ಬಿಜೆಪಿ ಸರ್ಕಾರ 2013ರಲ್ಲಿ ಕ್ರೂಡ್ ಆಯಿಲ್‌ಗೆ 142 ಡಾಲರ್ ಇದ್ದರೂ ಆಗ ಪ್ರಧಾನಿಗಳಾದ ಡಾ. ಮನಮೋಹನ್‌ಸಿಂಗ್ ಅವರು 62 ರೂ.ಗೆ ಪ್ರೆಟ್ರೋಲ್-ಡೀಸೆಲ್ ನೀಡಿದ್ದಾರೆ. 2013 ರ ನಂತರ ಮೋದಿ ಸರ್ಕಾರ ಬಂದಿದ್ದು, ಕೋವಿಡ್ ಸಂದರ್ಭದಲ್ಲಿ 1 ಬ್ಯಾರಲ್ ಕ್ರೂಡ್ ಆಯಿಲ್‌ಗೆ 23 ಡಾಲರ್ ಇತ್ತು. ಈಗಲೂ 80-82 ಡಾಲರ್ ಇದೆ ಆದರೂ ಒಂದು ದಿನವಾದರೂ 60-62 ರೂ.ಗೆ ಪೆಟ್ರೋಲ್-ಡೀಸೆಲ್ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಅಣ್ಣ ೩.೫ ಎಕ್ಕರೆ ಜಾಗವನ್ನು ನೀಡಿದ್ದು, ಅದನ್ನು ಮೂಡಾದವರು ನಿವೇಶ ನಿರ್ಮಾಣ ಮಾಡಲು ಪಡೆದಿದ್ದು, ಅದಕ್ಕೆ ಇವರು ಹಣವನ್ನು ಪಡೆದಿಲ್ಲ. ಆದುದರಿಂದ ಅವರಿಗೆ ಬೇರೆ ನಿವೇಶನ ನೀಡಿದ್ದಾರೆ ಎಂದು ಪದ್ಮರಾಜ್ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು