5:23 PM Thursday28 - August 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ

ಇತ್ತೀಚಿನ ಸುದ್ದಿ

ಧರ್ಮ ಚಾವಡಿ ಸ್ವಾಮೀಜಿಯ ಆತ್ಮಹತ್ಯೆಗೆ ಕಾರಣ ಏನು ? ವ್ಯಾವಹಾರಿಕವಾಗಿ ಅವರು ಜಿಗುಪ್ಸೆಗೊಂಡಿದ್ದರೇ?

22/07/2022, 22:01

ಮಂಗಳೂರು(reporterkarnataka.com):

ಕಂದಾವರ ಪಂಚಾಯಿತಿಯ ಕೊಳಂಬೆ ಗ್ರಾಮದ ತಲಕಲ ಶೆಟ್ಟಿಪಾಲ್ ನ ‘ಧರ್ಮ ಚಾವಡಿ’ ಮಠದ ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ (50) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಸುತ್ತ ಸಂಶಯದ ಹುತ್ತ ಬೆಳೆಯಲಾರಂಭಿಸಿದೆ. ವ್ಯಾವಹಾರಿಕವಾಗಿ ಜಿಗುಪ್ಸೆಗೊಂಡು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸ್ವಾಮೀಜಿ ಶುಕ್ರವಾರ ಮುಂಜಾನೆ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೋಟೆಲ್ ಉದ್ಯಮ ನಡೆಸುತ್ತಿದ್ದ ಅವರು

ಸುಮಾರು 5 ವರ್ಷದ ಹಿಂದೆ ಸಾಂಸರಿಕ ಜೀವನವನ್ನು ತ್ಯಜಿಸಿದ ಅವರು ಸನ್ಯಾಸಿ ದೀಕ್ಷೆ ಪಡೆದುಕೊಂಡಿದ್ದರು. ಬಳಿಕ ಅವರು ತಲಕಲದಲ್ಲಿನ ತಮ್ಮ ವಿಶಾಲವಾದ ಜಾಗದಲ್ಲಿ ಧರ್ಮ ಚಾವಡಿ ಸ್ಥಾಪಿಸಿ, ಮಠದಲ್ಲೇ ವಾಸಿಸುತ್ತಿದ್ದರು.

ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ಬಳಿಕ ಸ್ವಾಮೀಜಿಯವರು ಕೋಣೆಯೊಳಗಡೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕಳೆದ ವರ್ಷ ಧರ್ಮ ಚಾವಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಅದ್ದೂರಿಯ ಪೂಜಾ ಕಾರ್ಯ

ನಡೆಸಿದ್ದರು. ಮಠಕ್ಕೆ ಬರುವ ಭಕ್ತರಿಗೆ ಭವಿಷ್ಯ 

ಕೂಡ ಹೇಳುತ್ತಿದ್ದರು. ಇದರಿಂದ ಅವರು ಸಾಕಷ್ಟು

ಜನಪ್ರಿಯರಾಗಿದ್ದರು. ಧರ್ಮ ಚಾವಡಿಯ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಇದೆ ಎನ್ನಲಾಗಿದೆ. ವ್ಯವಹಾರಿಕವಾಗಿ ಜುಗುಪ್ಸೆ ಗೊಂಡು ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಸ್ವಾಮೀಜಿ ಆತ್ಮಹತ್ಯೆ ಬಗ್ಗೆ ಅವರ ಪೂರ್ವಾಶ್ರಮದ

ಪತ್ನಿ ಪ್ರಭಾ ಶೆಟ್ಟಿ ಬಜಪೆ ಪೋಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು