11:14 PM Friday6 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಸ್ವಾಮಿ, ಇದು ಕಾರು ರೇಸ್ ಅಲ್ಲ, ವಿರಾಜಪೇಟೆ ಬಳಿ ನಡೆದ ಲೈವ್ ಆಕ್ಸಿಡೆಂಟ್; ಓವರ್ ಸ್ಪೀಡಿಗೆ 4 ವಾಹನಗಳು ಅಪಘಾತ!

30/06/2025, 10:44

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಒಂದು ಇನ್ನೋವಾ ಕಾರು ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಕಾಫಿ ತೋಟದಲ್ಲಿ ಪಲ್ಟಿ, ಈ ಅವಘದ ಸಂಭವಿಸಿ ಸ್ವಲ್ಪ ಹೊತ್ತಿನಲ್ಲೇ ಅದೇ ತಿರುವುನಲ್ಲಿ ಮೂರು ಕಾರುಗಳು ಒಂದರ ಹಿಂದೆ ಒಂದು ವೇಗವಾಗಿ ಬಂದು ಡಿಕ್ಕಿ. ಹೌದು ಇದು ಯಾವುದೇ ಕಾರ್ ರೇಸ್ ನ ಚಿತ್ರಣವಲ್ಲ ಬದಲಾಗಿ ಕೇರಳಿಗರ ಓವರ್ ಸ್ಪೀಡ್ ಚಾಲನೆಯಿಂದ ಕಂಡು ಬಂದ ಬೆಚ್ಚಿ ಬೀಳಿಸುವ ಅಪಘಾತ ದ ದೃಶ್ಯ..!!!



ವಿರಾಜಪೇಟೆಯ ಆರ್ಜಿ ಗ್ರಾಮದ ಪೆರಂಬಾಡಿ ಕೊರಗಜ್ಜ ದೇವಾಲಯದ ಸಮೀಪ ಕಳೆದ ರಾತ್ರಿ ಇಲ್ಲಿನ ತಿರುವಿನಲ್ಲಿ ನಾಲ್ಕು ವಾಹನಗಳು ಅಪಘಾತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಕೇರಳ ನೊಂದಣಿ ಹೊಂದಿದ ವಾಹನಗಳು ವೇಗವಾಗಿ ಇಲ್ಲಿ ಚಲಿಸುವುದರಿಂದ, ಹಾಗೂ ವಾಹನಗಳಿಗೆ ಅಳವಡಿಸಲಾಗಿರುವ ಹೈ ಭೀಮ್ ಲೈಟ್ಗಳಿಂದ ಹಿಂಭಾಗದಲ್ಲಿ ಬರುವ ವಾಹನಗಳಿಗೆ ಮುಂದೆ ರಸ್ತೆ ಕಾಣದೆ ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.ಸದ್ಯ ನಾಲ್ಕು ಕಾರುಗಳಲ್ಲಿ ಇದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು