9:59 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಸ್ವಾಮೀ… ನಮ್ ಪ್ರಧಾನಿ ಪ್ರಾಮಾಣಿಕರಾದ್ರೆ ಸಾಲದು: ನಮ್ಮ ಅಕಾಡೆಮಿ ಅಧ್ಯಕ್ಷರು, ಎಂಎಲ್ ಎಗಳು, ಕಾರ್ಪೊರೇಟರ್ ಗಳು ಪ್ರಾಮಾಣಿಕರಾಗಬೇಕು !

03/08/2021, 16:28

ಮಂಗಳೂರು(repoeterkarnataka.com): ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿರುವಾಗ ಈ ಭಾಷಾ ಅಕಾಡೆಮಿಗಳ ಅಧ್ಯಕ್ಷರು ಎಲ್ಲಿಗೆ ಟೂರ್ ಹೋದ್ರು ಎಂಬ ಪ್ರಶ್ನೆ ಜನರನ್ನು ಕಾಡ ತೊಡಗಿದೆ. ಯಾಕೆಂದ್ರೆ ಮೂರು ಅಕಾಡೆಮಿಗಳ ಅಧ್ಯಕ್ಷರು ಈ ಅವಧಿಯಲ್ಲಿ ಪ್ರಯಾಣ ಭತ್ತೆಯನ್ನು ಪಡೆದು ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ ವಿಚಾರ ಬೆಳಕಿಗೆ ಬಂದಿದೆ.

ಕೊರೊನಾ ಹಿನ್ನೆಲೆಯಲ್ಲಿ 2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಲಾಕ್‌ಡೌನ್‌ ಹೇರಲಾಗಿತ್ತು. ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಸಭೆ-ಸಮಾರಂಭಗಳಿಗೆ ಅವಕಾಶ ಇರಲಿಲ್ಲ. ಜನರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಕರ್ಫ್ಯೂ ಹೇರಲಾಗಿತ್ತು. ಆದರೆ  ಕರಾವಳಿಯ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆ ಅಕಾಡಮಿಯ ಅಧ್ಯಕ್ಷರು ಈ ಅವಧಿಯ ಪ್ರಯಾಣ ಭತ್ತೆ ಸ್ವೀಕರಿಸಿರುವ ಅಂಶವನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ, ಸಾಹಿತಿ ಡಾ.ಅರವಿಂದ ಚಂದ್ರಕಾಂತ ಶ್ಯಾನಭಾಗ ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ತಂದಿದ್ದಾರೆ.

ಲಾಕ್‌ಡೌನ್, ಕರ್ಫ್ಯೂ ಸಂದರ್ಭದಲ್ಲಿ ಅಕಾಡಮಿಗಳಿಗೆ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಬಿಡಿ, ಅಕಾಡೆಮಿಗಳ

ಕಚೇರಿ ತೆರೆಯಲು ಕೂಡ ಅವಕಾಶ ಇರಲಿಲ್ಲ. ವಾಹನಗಳ ಓಡಾಟಕ್ಕೂ ನಿರ್ಬಂಧ ಇತ್ತು. ಆದರೆ ನಮ್ಮ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆ ಅಕಾಡೆಮಿಗಳ ಅಧ್ಯಕ್ಷರು ಫುಲ್ ಬ್ಯುಸಿಯಾಗಿದ್ದರು. ಆದರೆ ಇವರು ಬ್ಯುಸಿ ಇದ್ದದ್ದು ತಮ್ಮ ತಮ್ಮ ಅಕಾಡೆಮಿಗಳ ಅಭಿವೃದ್ಧಿ ವಿಷಯದಲ್ಲಿ ಅಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಪ್ರಯಾಣ ಭತ್ತೆಯನ್ನು ಪಡೆಯುವುದು ಹೇಗೆ ಎನ್ನುವ ಕುರಿತು ಬ್ಯುಸಿಯಾಗಿದ್ದರು. ಈ ಮೂರು ಅಕಾಡೆಮಿಗಳ ಅಧ್ಯಕ್ಷರು ಮನೆಯಲ್ಲೇ ಕೂತು ಸಾಹಿತ್ಯಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಮೊತ್ತದ ಪ್ರಯಾಣ ಭತ್ತೆಯನ್ನು ಪಡೆದಿದ್ದಾರೆ. ಅರ್ಥಾತ್ ಜನರ ತೆರಿಗೆಯ ಹಣವನ್ನು ದುರುಪಯೋಗ ಮಾಡಿದ್ದಾರೆ. ಇದರ ಕುರಿತು ಡಾ. ಶ್ಯಾನಬೊಗ ಅವರು ದಾಖಲೆ ಸಮೇತ ಮಾಹಿತಿ ಹೊರಗೆಡಹಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಾಗಿ ವೆಬಿನಾರ್, ಫೇಸ್‌ಬುಕ್ ಲೈವ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಸಂವಾದಗಳು ನಡೆಸಲಾಗಿದೆ. ಹೀಗಿರುವಾಗ ಈ ಅಕಾಡಮಿಗಳ ಅಧ್ಯಕ್ಷರು ಎಲ್ಲೂ ಪ್ರಯಾಣಿಸದೆ ತಿಂಗಳಿಗೆ ಬರೋಬ್ಬರಿ 30 ಸಾವಿರ ರೂ.ಗಳಂತೆ ಎರಡೂವರೆ ತಿಂಗಳಿಗೆ 75 ಸಾವಿರ ರೂ. ವೆಚ್ಚವನ್ನು ತೋರಿಸಿ ವಿವಿಧ ಟ್ರಾವೆಲ್ಸ್ ಸಂಸ್ಥೆಗಳ ಹೆಸರಿನಲ್ಲಿ ಪ್ರಯಾಣ ಭತ್ತೆಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಡಾ. ಶ್ಯಾನಭಾಗ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಸಿಗಬೇಕಾದರೆ ನಮ್ಮ ಪ್ರಧಾನ ಮಂತ್ರಿಯವರು ಮಾತ್ರ ಪ್ರಾಮಾಣಿಕರಾದ್ರೆ ಸಾಲದು. ನಮ್ಮ ಎಂಪಿ, ಎಂಎಲ್ ಎ, ಕಾರ್ಪೊರೇಟರ್ ಗಳು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಸರಕಾರಿ ಅಧಿಕಾರಿಗಳು ಕೂಡ ಪ್ರಾಮಾಣಿಕರಾಗಿರಬೇಕು. ಪರ್ಸಂಟೆಜ್ ಕಾಮಗಾರಿ ಮೂಲಕ ದೇಶದ ಅಭಿವೃದ್ಧಿ ಮಾಡಬಾರದು.

ಇತ್ತೀಚಿನ ಸುದ್ದಿ

ಜಾಹೀರಾತು