ಇತ್ತೀಚಿನ ಸುದ್ದಿ
ಸೂಯೆಜ್ ಕಂಪನಿಯ ಸಿಎಸ್ ಆರ್ ನಿಧಿ: 150 ಶಾಲಾ ಮಕ್ಕಳಿಗೆ ಶಾಸಕ ಡಾ. ಭರತ್ ಶೆಟ್ಟಿ ಉಚಿತ ಬ್ಯಾಗ್ ವಿತರಣೆ
23/06/2023, 12:41

ಸುರತ್ಕಲ್(reporterkarnataka.com): ಜಲಸಿರಿ ಯೋಜನೆಯ ಕಾಮಗಾರಿ ನಡೆಸುವ ಸೂಯೆಜ್ ಕಂಪೆನಿ ಯವರ ಸಿಎಸ್ ಆರ್ ನಿಧಿಯಿಂದ 150 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಗಳನ್ನು ಶಾಸಕ ಡಾ. ಭರತ್ ಶೆಟ್ಟಿ ವಿತರಿಸಿದರು.
ಪಚ್ಚನಾಡಿ ವಾರ್ಡ್ ನ ಆಶ್ರಯ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಜಿಲ್ಲಾ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರಾಮ ಮುಗ್ರೋಡಿ, ಮಂಡಲ ಕಾರ್ಯಕಾರಿಣಿ ಸದಸ್ಯೆ ಲತಾ ರೈ, ಸೂಯೆಜ್ ಕಂಪೆನಿ ಅಧಿಕಾರಿಗಳಾದ ರಮೇಶ್ ಪಾಟೀಲ್, ಡಾ.ರೇಷ್ಮಾ ಉಳ್ಳಾಲ್, ರಾಕೇಶ್ ಶೆಟ್ಟಿ, ಸನೂಪ್ ವಿಟ್ಟಿಲ್ ಆಶ್ರಯ ರಂಗ ಮಂದಿರದ ಅಧ್ಯಕ್ಷರಾದ ಸೆಲ್ವ ಕುಮಾರ್, ನಿಕಟ ಪೂರ್ವ ಆಧ್ಯಕ್ಷರಾದ ರಮಾ, ಪದಾಧಿಕಾರಿಗಳಾದ ಅಶೋಕ್ ಆಚಾರ್ಯ, ಪುರಂದರ, ಆರ್ ಕೆ ಶೆಟ್ಟಿ, ಮಮತಾ, ಗಣ್ಯರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.