8:53 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಸುತ್ತೂರು ಜಾತ್ರಾ ಮಹೋತ್ಸವದ 2ನೇ ದಿ‌ನ ಬೃಹತ್ ಸಾಮೂಹಿಕ ವಿವಾಹ: 155 ಜೋಡಿಗಳಿಗೆ ಕಂಕಣಭಾಗ್ಯ

27/01/2025, 23:12

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಸುತ್ತೂರು ಜಾತ್ರಾ ಮಹೋತ್ಸವದ ಎರಡನೇ ದಿ‌ನವಾದ ಇಂದು ಬೃಹತ್ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಂತರ್ಜಾತಿಗಳ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಪಾಲ್ಗೊಂಡರು.


ಇಂದು ನಡೆದ ಸಾಮೂಹಿಕ ವಿವಾಹದಲ್ಲಿ ವೀರಶೈವ ಲಿಂಗಾಯತ ಸಮುದಾಯದ 3 ಜೋಡಿ, ಪರಿಶಿಷ್ಟ ಜಾತಿಯ 84 ಜೋಡಿ, ಪರಿಶಿಷ್ಟ ಪಂಗಡದ 22 ಜೋಡಿ, ಹಿಂದುಳಿದ ವರ್ಗದ 22 ಜೋಡಿ, ಅಂತರಜಾತಿಯ 23 ಜೋಡಿ, ಅಂತರಧರ್ಮದ 1 ಒಂದು ಜೋಡಿ ಸೇರಿದಂತೆ ಒಟ್ಟು 155 ಜೋಡಿ ಸತಿ-ಪತಿಗಳಾಗುವ ಮೂಲಕ ದಾಂಪತ್ಯ ಜೀವನ ಪ್ರವೇಶಿಸಿದವು. ಈ ಪೈಕಿ 3 ವಿಶೇಷ ಚೇತನರ ಜೋಡಿಗಳಿದ್ದರೆ, ಒಂದು ಜೋಡಿ ಮರು ಮದುವೆಯಾಗಿದೆ. ಒಟ್ಟು 155 ಜೋಡಿಗಳಲ್ಲಿ ಮೈಸೂರು ಜಿಲ್ಲೆಗೆ ಸೇರಿದ 79 ಜೋಡಿಗಳಿದ್ದರೆ, ಚಾಮರಾಜನಗರ ಜಿಲ್ಲೆಯ 43 ಜೋಡಿ, ಮಂಡ್ಯ ಜಿಲ್ಲೆಯ 6, ಬೆಂಗಳೂರಿನ 1, ರಾಮನಗರ ಜಿಲ್ಲೆಯ 4, ಚಿಕ್ಕಬಳ್ಳಾಪುರ ಜಿಲ್ಲೆಯ 1, ಗದಗ ಜಿಲ್ಲೆಯ 1, ಹಾವೇರಿ ಜಿಲ್ಲೆಯ 2, ಹಾಸನದ 1, ನೆರೆಯ ತಮಿಳುನಾಡಿನ ಈರೋಡ್ ಜಿಲ್ಲೆಯ 15, ಕೊಯಮತ್ತೂರಿನ 1, ನೀಲಗಿರಿಯ1 ಜೋಡಿಗಳು ಸೇರಿವೆ. ಈ ಮೊದಲೇ ವಿವಾಹಗಳ‌ ನೋಂದಾವಣಿಯಾಗಿದ್ದು, ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗು ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್ ಗಳನ್ನು ನೀಡಲಾಯಿತು. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ವಧು-ವರರು ವಿವಾಹದ ದೃಢೀಕರಣ ಪತ್ರ ಹಾಗೂ ನೋಂದಣಿ ಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು