10:41 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಗೃಹಿಣಿ ಅನುಮಾನಾಸ್ಪದ ಸಾವು: ಮರ್ಯಾದಾ ಹತ್ಯೆ ಶಂಕೆ; ಸಮಗ್ರ ತನಿಖೆಗೆ ಗ್ರಾಮಸ್ಥರ ಆಗ್ರಹ

22/02/2025, 18:12

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದುಗ್ಗಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಕೂಗೊಂದು ತಡವಾಗಿ ಕೇಳಿ ಬರುತ್ತಿದೆ. ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪತಿ ಹಾಗೂ ಆಕೆಯ ತಮ್ಮ ಸೇರಿ ಹತ್ಯೆ ಮಾಡಿರಬಹುದೆಂಬ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಹುಲ್ಲಹಳ್ಳಿ ಠಾಣೆ ಪೊಲೀಸರು ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಬೇಕಿದೆ.
ದುಗ್ಗಹಳ್ಳಿ ಗ್ರಾಮದ ಸುಚಿತ್ರಾ(38) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ಈಕೆಯ ಪತಿ ರವಿ ಹಾಗೂ ಈಕೆಯ ತಮ್ಮ ಸತೀಶ ಸೇರಿ ಕೊಲೆ ಮಾಡಿ ಪ್ರಕರಣವನ್ನ ಮುಚ್ಚಿಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
5 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸುಚಿತ್ರಾ ಸಾವನ್ನಪ್ಪಿದ ಬಗ್ಗೆ ಅನುಮಾನದ ಹುತ್ತ ಎದ್ದಿದೆ.
ಸುಮಾರು 15 ವರ್ಷಗಳ ಹಿಂದೆ ದುಗ್ಗಹಳ್ಳಿ ಗ್ರಾಮದ ಸುಚಿತ್ರಾಳನ್ನ ಏಚಗುಂಡ್ಲ ಗ್ರಾಮದ ಸೋದರ ಮಾವ ರವಿ ಜೊತೆ ಅದ್ದೂರಿಯಾಗಿ ವಿವಾಹ ಮಾಡಿಕಕೊಡಲಾಗಿತ್ತು.
ದಂಪತಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಸುಚಿತ್ರಾ ನಡತೆಯ ಬಗ್ಗೆ ಪತಿ ರವಿಗೆ ಅನುಮಾನ ಬಂದಿದ್ದು ಪಕ್ಕದ ಬಡಾವಣೆಯ ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ಪತಿ ರವಿಗೆ ತಿಳಿದು ಬಂದಿದೆ.
ಈ ವಿಚಾರವನ್ನ ರವಿ ತನ್ನ ಭಾವಮೈದ ಸತೀಶ್ ಜೊತೆ ಹೇಳಿಕೊಂಡಿದ್ದಾನೆ. ಕೆಲವು ದಿನಗಳ ಕಾಲ ಸುಚಿತ್ರಾಳನ್ನ ಫಾಲೋ ಮಾಡಿದ ಪತಿ ಹಾಗೂ ತಮ್ಮನಿಗೆ ಅನ್ಯಕೋಮಿನ ಪುರುಷನ ಜೊತೆ ಸಂಪರ್ಕ ಇರುವುದು ಖಚಿತವಾಗಿದೆ. ಈ ಕಾರಣಕ್ಕಾಗಿ ರವಿ ತನ್ನ ಪತ್ನಿ ಸುಚಿತ್ರ ಹಾಗೂ ಮಕ್ಕಳನ್ನ ಭಾವಮೈದ ಸತೀಶನ ಮನೆ ದುಗ್ಗಹಳ್ಳಿಗೆ ಕರೆದುಕೊಂಡು ಹೋಗಿದ್ದಾನೆ
.22-07-2024 ರಂದು ಸತೀಶ ಹೊಸದಾಗಿ ನಿರ್ಮಿಸಿರುವ ಕೋಳಿಫಾರಂ ನಲ್ಲಿ ಸುಚಿತ್ರ ಅನುಮಾನಾಸ್ಪದವಾಗಿ ಸಾವನ್ನಪ್ಪಿರುತ್ತಾಳೆ .
ಈ ವಿಚಾರವನ್ನ ಪೊಲೀಸರಿಗೂ ತಿಳಿಸದೆ ಗ್ರಾಮಸ್ಥರ ಗಮನಕ್ಕೂ ತರದೆ ಏಕಾ ಏಕಿ ಮೃತದೇಹವನ್ನ ಏಚಗುಂಡ್ಲ ಗ್ರಾಮಕ್ಕೆ ಕೊಂಡೊಯ್ದು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಿ ಕೈತೊಳೆದುಕೊಂಡಿದ್ದಾರೆ.
ಆರಂಭದಲ್ಲಿ ಕಿಂಚಿತ್ತು ಸುಳಿವು ನೀಡದ ಸತೀಶ ಕೆಲವು ದಿನಗಳ ನಂತರ ರಾಜಾರೋಷವಾಗಿ ನಾನೆ ಸಾಯಿಸಿದ್ದೀನಿ ಎಂದು ಹೇಳಿಕೊಂಡು ತಿರುಗಾಡುತ್ತಿರುವುದು ಗ್ರಾಮದ ಜನರ ಕಿವಿಗೆ ಬಿದ್ದಿದೆ.
ಸುಚಿತ್ರಾ ಆರೋಗ್ಯವಾಗಿದ್ದರೂ ಸಾವನ್ನಪ್ಪಿದ್ದು ಹೇಗೆ ? ಎಂಬ ಪ್ರಶ್ನೆ ಈಗ ಸ್ಥಳೀಯರದಾಗಿದ್ದು.ಆತ್ಮಹತ್ಯೆ ಆಗಿದ್ದಲ್ಲಿ ಪೊಲೀಸರಿಗೂ ತಿಳಿಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಏಕೆ..? ಗ್ರಾಮದ ಜನತೆಯನ್ನ ದೂರವಿರಿಸಿ ಮೃತದೇಹವನ್ನ ಸುಟ್ಟು ಹಾಕಿರುವುದು ಏಕೆ ಎಂಬ ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ.
ಈ ಸಾವಿಗೆ ಹೆತ್ತ ಪೋಷಕರಾದ ಶಿವರಾಜಪ್ಪ,ಪ್ರೇಮ ರವರ ಪಾತ್ರವೂ ಇದೆ ಎಂದು ಹೇಳಲಾಗುತ್ತಿದೆ.

ಅನ್ಯಕೋಮಿನ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಬೆಳೆಸಿದ್ದೇ ಸುಚಿತ್ರ ಸಾವಿಗೆ ಕಾರಣವಾಯ್ತೇ…? ತರಾತುರಿಯಲ್ಲಿ ಅಂತ್ಯೆಕ್ರಿಯೆ ನಡೆಸಿದ್ದಾದರೂ ಏಕೆ..?ರಾಜಾರೋಷವಾಗಿ ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿರುವ ಸತೀಶನ ಇಂಗಿತವಾದರೂ ಏನು…? ಇವೆಲ್ಲಾ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.


ಆದಷ್ಟೂ ಶೀಘ್ರದಲ್ಲಿ ಮೃತಳ ತಮ್ಮ ಸತೀಶ ಹಾಗೂ ಪತಿ ರವಿಯನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರೆ ಹತ್ಯೆಯ ಪ್ರಕರಣ ಬೆಳಕಿಗೆ ಬರುತ್ತದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ …
……………………………………….

ಇತ್ತೀಚಿನ ಸುದ್ದಿ

ಜಾಹೀರಾತು