ಇತ್ತೀಚಿನ ಸುದ್ದಿ
ಸೂರಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ
25/07/2021, 18:44
ಸುರತ್ಕಲ್(reporterkarnataka news): ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಕಾಟಿಪಳ್ಳ ,ಶಿರಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ, ಕೇಸರಿ ಬಳಗ ಸೂರಿಂಜೆ ಮತ್ತು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಸರಕಾರಿ ಪ್ರೌಢ ಶಾಲೆ ಕೋಟೆ ಸೂರಿಂಜೆಯಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೇಹದಲ್ಲಿ ಚೈತನ್ಯ ಇರುವಾಗಲೇ
ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು. ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ರಕ್ತದಾನದ ಮೂಲಕ ಒಬ್ಬರ ಪ್ರಾಣವನ್ನು ಉಳಿಸಲು ಸಾಧ್ಯ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಮಾಡಿರುವುದು ಶ್ಲಾಘನೀಯವೆಂದರು.
ಕಾರ್ಯಕ್ರಮದಲ್ಲಿ ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೀತೆಂದ್ರ ಶೆಟ್ಟಿ, ಸೂರಿಂಜೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಬೈಲಗುತ್ತು, ಉದ್ಯಮಿ ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು, ಅಭ್ಯುದಯ ಸೇವಾ ಟ್ರಸ್ಟನ ವಸಂತ ರಾವ್, ಕೇಸರಿ ಬಳಗದ ನವೀನ್, ಸುರೇಶ್ ಶೆಟ್ಟಿ, ಶಿರಿಡಿ ಸಾಯಿ ಫ್ರೆಂಡ್ಸ್ ನ ಭೋಜರಾಜ್ ಶೆಟ್ಟಿ ಸೂರಿಂಜೆ, ಸುಧಾಕರ ಬಂಗೇರ, ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಇನ್ ಚಾರ್ಜ್ ಡಾ. ಅಶೋಕ್, ಮೆಡಿಕಲ್ ಸುಪೀರಿಯಡೆಂಟ್ ಡಾ.ಕಿರಣ್ ಉಪಸ್ಥಿತರಿದ್ದರು.