ಇತ್ತೀಚಿನ ಸುದ್ದಿ
ಸುರತ್ಕಲ್ ಟೋಲ್ ವಿರುದ್ಧ ಅನಿರ್ದಿಷ್ಟ ಹಗಲು ರಾತ್ರಿ ಧರಣಿ 5ನೇ ದಿನಕ್ಕೆ: ಭಾರಿ ಜನ ಬೆಂಬಲ
01/11/2022, 21:43

ಸುರತ್ಕಲ್ (reporterkarnataka.com): ಅಕ್ರಮ ಟೋಲ್ ಸುಲಿಗೆಯ ವಿರುದ್ದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ 5ನೇ ದಿನ ಜನ ಸಾಗರಕ್ಕೆ ಸಾಕ್ಷಿಯಾಯಿತು.
ರಾತ್ರಿ ಗಂಟೆ 8 ದಾಟಿದ ಸಂದರ್ಭದಲ್ಲೂ ನೂರಾರು ಜನ ಧರಣಿ ವೇದಿಕೆಗೆ ಆಗಮಿಸುವ ಮೂಲಕ ಟೋಲ್ ಹೋರಾಟ ತುಳುನಾಡಿನ ಸಮಸ್ತ ಜನತೆಯ ಹೋರಾಟವಾಗಿ ಪರಿವರ್ತನೆಗೊಂಡಿರುವುದಕ್ಕೆ ಸಾಕ್ಷ್ಯ ಒದಗಿಸಿದರು. ಇನ್ನು ಈ ಹೋರಾಟವನ್ನು ಗೆಲುವು ಸಾಧಿಸದೆ ಯಾರಿಗೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಸರಕಾರ ಇದನ್ನು ಅರ್ಥ ಮಾಡಿಕೊಳ್ಳಲಿ.
ಮಾಜಿ ಸಚಿವ ಅಭಯಚಂದ್ರ ಜೈನ್ ಹಾಜರಿದ್ದರು.