12:06 PM Saturday7 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಸುರತ್ಕಲ್ ಜಂಕ್ಷನ್ ಗೆ ಹೊಸ ರೂಪ; ಸುಗಮ ವಾಹನ ಸಂಚಾರಕ್ಕೆ ಕ್ರಮ: ಶಾಸಕ ಡಾ. ಭರತ್ ಶೆಟ್ಟಿ

18/01/2023, 21:26

ಸುರತ್ಕಲ್(reporterkarnataka.com):
ಸುರತ್ಕಲ್ ಜಂಕ್ಷನ್ ಹೊಸ ರೂಪ ಪಡೆಯಲಿದ್ದು ವಾಹನ ಓಡಾಟ ಸುಗಮವಾಗಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಸುರತ್ಕಲ್‌ ಜಂಕ್ಷನ್‌ ಅಭಿವೃದ್ಧಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೊಟ್ಟಾರ ಜಂಕ್ಷನ್ 5 ಕೋಟಿ ರೂ., ಕುಳಾಯಿ ಜಂಕ್ಷನ್‌ 3.5 ಕೋಟಿ ರೂ. ಸುರತ್ಕಲ್‌ ಜಂಕ್ಷನ್ ಅಭಿವೃದ್ಧಿಗೆ ಈ ಪ್ರಿಮಿಯರ್ ಎಫ್‌ಎ ಆರ್ ನಿಂದ 5 ಕೋಟಿ ರೂ ಅನುದಾನ ಒದಗಿಸಲಾಗಿದೆ.

ಕುಳಾಯಿ ಸುರತ್ಕಲ್‌ನಲ್ಲಿ ಏಕ ಕಾಲದಲ್ಲಿ ಕಾಮಗಾರಿ ಕೈಗೊಂಡಲ್ಲಿ ವಾಹನ ಓಡಾಟಕ್ಕೆ ಅಡಚಣೆ ಆಗುವ ಹಿನ್ನಲೆಯಲ್ಲಿ ‌ಮೊದಲಿಗೆ ಸುರತ್ಕಲ್ ನಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಬಳಿಕ ವೃತ್ತ ನಿರ್ಮಾಣ ಮಾಡಲಾಗುವುದು. ಬಳಿಕ ಇತರ ಕಾಮಗಾರಿ ಆರಂಭಿಸಲಾಗುವುದು ಎಂದರು.

ಈಗಾಗಲೇ ಬೋಂದೆಲ್ ನಲ್ಲಿ ಸರ್ವಜ್ಞ ಸರ್ಕಲ್ ,ಸುರತ್ಕಲ್ ನಲ್ಲಿ ಪಾಲಿಕೆಯ ಅನುಮತಿಯೊಂದಿಗೆ ವೀರ ಸಾವರ್ಕರ್ ವೃತ್ತಕ್ಕೆ ಹೆಸರಿಡುವ
ಪ್ರಕ್ರಿಯೆ ಆರಂಭವಾಗಿದೆ. ಕೊಟ್ಟಾರದಲ್ಲಿ ವೀರ ಯೋಧರ ಸ್ಮರಣಾರ್ಥವಾಗಿ ವೃತ್ತ ನಿರ್ಮಿಸಲಾಗುವುದು ಎಂದರು.
ಕೊರೊನಾ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗದಂತೆ ಕ್ರಮ ಜರುಗಿಸಿದ್ದೇವೆ. ಮೂಲಸೌಕರ್ಯ ಕಾಮಗಾರಿ ಹಿಂದೆಂದು ಆಗದಷ್ಟು ನಡೆದಿದೆ. ಮೂರ್ನಾಲ್ಕು ವಾರಗಳಲ್ಲಿ ಅಂದಾಜು 60 ಕೋಟಿ
ಅನುದಾನ ಒದಗಿಸಲಾಗಿದೆ. ಮುಂದಿನ ಮೂರು ತಿ೦ಗಳ ಒಳಗಾಗಿ ಪೂರ್ಣಗೊಳಿಸಲಾಗುವುದು .

ಪರಿಸರ ಸಹ್ಯ ವಾತಾವರಣಕ್ಕಾಗಿ ಪಾರ್ಕ್ ನಿರ್ಮಾಣ, ಅಂತರ್ಜಲ ವೃದ್ದಿಗಾಗಿ ಕೆರೆ ಅಭಿವೃದ್ಧಿಯ ಅನುಷ್ಠಾನಗೊಳಿಸಲಾಗಿದೆ ಎಂದರು.
ಮೇಯರ್ ಜಯಾನಂದ ಅಂಚನ್, ಸ್ಥಳೀಯ ಮನಪಾ ಸದಸ್ಯರಾದ ವರುಣ್ ಚೌಟ, ಸರಿತ ಶಶಿಧರ್, ಶ್ವೇತ ಪೂಜಾರಿ, ನಯನ ಆರ್ ಕೋಟ್ಯಾನ್, ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ಸುನಿತಾ, ಸುಮಿತ್ರ ಕರಿಯ, ಮಾಜಿ ಮನಪಾ ಸದಸ್ಯ ಗುಣಶೇಖರ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್, ಸಮಾಜ ಸೇವಕ‌ ಮಹಾಬಲ ಪೂಜಾರಿ ಕಡಂಬೋಡಿ, ಬಿಜೆಪಿ ಮುಖಂಡರಾದ ಮಹೇಶ್ ಮೂರ್ತಿ ಸುರತ್ಕಲ್‌, ವಿಠ್ಠಲ್ ಸಾಲ್ಯಾನ್ , ದಿನಕರ್ ಇಡ್ಯಾ, ಸುನಿಲ್ ಕುಳಾಯಿ ಗಣೇಶ್ ಹೊಸಬೆಟ್ಟು, ಯೋಗೀಶ್ ಸನಿಲ್ ಕುಳಾಯಿ, ಭರತ್ ರಾಜ್ ಕೃಷ್ಣಾಪುರ , ರಾಘವೇಂದ್ರ ಶೆಣೈ,ಪ್ರಶಾಂತ್ ಆಚಾರ್ಯ, ಅಶೋಕ್ ಅಗರಮೇಲು, ಮನಿಶ್ ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ‌, ಜಯಂತ್ ಸಾಲಿಯಾನ್ , ಸುರೇಶ್, ಶಶಿಧರ್ ಕಟ್ಲ, ಗಣೇಶ್ ಅಗರಮೇಲು, ಪವಿತ್ರ ನಿರಂಜನ್‌, ಸುಲತ ಅಗರಮೇಲು ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಟೀಕೆಗೆ ಸಂಬಂಧಿಸಿದಂತೆ ಉತ್ತರಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್ ಮಾರುಕಟ್ಟೆ ವಿಚಾರದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಸಚಿವ ಬೈರತಿ ಬಸವರಾಜ್ ಅವರೇ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ಅರೆಬರೆ ಜಮೀನು ನೀಡಿ ನನ್ನ ಸಾಧನೆ ಎಂದು ಬಿಂಬಿಸಲು ಹೋಗಿ ನನಗೆ ಕಷ್ಟತಂದಿಟ್ಟಿದ್ದಾರೆ.
ಇದೀಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರ ಮಾರುಕಟ್ಟೆ ಸಂಕೀರ್ಣವನ್ನು ನಾನು ಪೂರ್ಣಗೊಳಿಸುತ್ತಿದ್ದೇನೆ. ಎರಡನೇ ಹಂತಕ್ಕೆ ಟೆಂಡರ್ ಕರೆಯಲಾಗಿದೆ ಎಂದು ನುಡಿದರು.
ಅಂತರ್ಜಲ ಹಾಗೂ ಒಳಚರಂಡಿ ವ್ಯವಸ್ಥೆ ಕುಲಗೆಡಿಸಿದ್ದೆ ಕಾಂಗ್ರೆಸ್ ಶಾಸಕರ ಸಾಧನೆಯಾಗಿದೆ.
ಸಾಧನೆ ಎಂದು ಬಿಂಬಿಸಲು ತುರ್ತಾಗಿ ಉದ್ಘಾಟಿಸಿ ಸಮಸ್ಯೆ ಸೃಷ್ಟಿಸಿ ಮಾಡಿ ಜನರಿಗೆ ಒಳಚರಂಡಿ ವ್ಯವಸ್ಥೆ ದೊರಕದಂತೆ ಮಾಡಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ನಾನೇ ಸ್ವತಃ ಒಳಚರಂಡಿ ದುರಸ್ತಿಗೆ ಎಡಿಬಿಯಿಂದ ಅನುದಾನ ತಂದಿದ್ದೇನೆ ಎಂದು ಉತ್ತರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು