ಇತ್ತೀಚಿನ ಸುದ್ದಿ
ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ; ಕೊಲೆಗೆ ಬಳಸಿದ ಕಾರಿನ ಮಾಲೀಕ ಬಂಧನ
31/07/2022, 14:26
ಮಂಗಳೂರು(reporterkarnataka.com): ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಬಳಸಲಾದ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದುವರೆಗೆ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಕಾರು ಮಾಲೀಕನ ಬಂಧನದೊಂದಿಗೆ ಪೊಲೀಸ್ ವಶದಲ್ಲಿರುವವ ಸಂಖ್ಯೆ ಏರಿಕೆಯಾಗಿದೆ. ಕಾರು ಮಾಲೀಕನನ್ನು ಕೇರಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.