1:07 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಸುರತ್ಕಲ್: ಬಿಜೆಪಿ ಯುವ ಮೋರ್ಚಾ ಉತ್ತರ ಮಂಡಲದಿಂದ ದೀಪಾವಳಿ, ಗೋಪೂಜೆ ಸಂಭ್ರಮ

13/11/2023, 19:03

ಸುರತ್ಕಲ್(reporterkarnataka.com): ಕೃಷಿ ಬದುಕಿನೊಂದಿಗೆ ಜೀವನ ನಡೆಸುತ್ತಿರುವ ಪ್ರತೀ ಕುಟುಂಬವೂ ಜನಪದೀಯವಾಗಿ ದೀಪಾವಳಿ ಆಚರಿಸುತ್ತಿತ್ತು. ಇದು ಪ್ರಕೃತಿ ರಕ್ಷಣೆಯ ದೀಪಾವಳಿಯೂ ಆಗಿದೆ. ಈ ನಿಟ್ಟಿನಲ್ಲಿ ಈಗಿನ ಸರಕಾರ ಪಟಾಕಿ ಸಿಡಿಸಿದರೆ ಮಾಲಿನ್ಯ ಆಗುತ್ತದೆ ಎಂಬ ಬಗ್ಗೆ ನಮಗೆ ಪಾಠ ಕಲಿಸುವ ಅವಶ್ಯಕತೆಯಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುರತ್ಕಲ್‍ನಲ್ಲಿ ಬಿಜೆಪಿ ಯುವ ಮೋರ್ಚಾ ಉತ್ತರ ಮಂಡಲವು ಸುರತ್ಕಲ್‍ನಲ್ಲಿ ಹಮ್ಮಿಕೊಂಡ ದೀಪಾವಳಿಯ ಕಾರ್ಯಕ್ರಮದ ಗೋ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ ಐತಿಹಾಸಿಕ ದೇವಾಲಯಗಳು ಪುನರ್ ಜೀರ್ಣೋದ್ಧಾರಗೊಳ್ಳುತ್ತಿದ್ದು ಇದರ ಆನಂತರದಲ್ಲಿ ದೀಪಾವಳಿ ಬೆಳಕಿನ ಹಬ್ಬ ವಿಶ್ವಕ್ಕೆ ಪಸರಿಸುತ್ತಿದೆ. ಜಗತ್ ವಂದೇ ಭಾರತ ನಿರ್ಮಾಣದ ಪರಿಕಲ್ಪನೆಯೂ ನಿಜವಾಗುತ್ತಾ ಸಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರು ಅಭಿವೃದ್ಧಿ ಹಾಗೂ ಹಿಂದೂ ಸಮಾಜದ ಒಗ್ಗಟ್ಟಿಗೆ ಹಾಗೂ ಜಾಗೃತ ಸಮಾಜವನ್ನು ನಿರ್ಮಿಸುವಲ್ಲಿ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ವಿದೇಶದಲ್ಲಿ ವಿವಿಧೆಡೆ ಯುದ್ದವು ಒಂದೇ ಸಮುದಾಯಗಳ ನಡುವೆ ನಡೆಯುತ್ತಿರುವ ಸಂದರ್ಭವು ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ನಮ್ಮ ಹಬ್ಬ ಆಚರಣೆಯ ವಿರುದ್ದ ಧ್ವನಿ ಎತ್ತಲಾಗುತ್ತಿದೆ. ಯಾರದೋ ಓಲೈಕೆಗಾಗಿ ಹಿಂದೂ ಹಬ್ಬವನ್ನು ನಿಯಂತ್ರಿಸುವ ಕಾನೂನು ಜಾರಿಗೆ ತರಲಾಗುತ್ತಿದೆ. ಇಂದು ಒಂದು ದಿನ ಮಾರಕವಾಗಬಹುದಾಗಿದೆ. ಹಿಂದೂ ಸಮಾಜದ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಾಗೂ ನಮ್ಮ ಸಮಾಜವನ್ನು ವಿಘಟನೆ ಮಾಡುವ ಕೋಮು ಶಕ್ತಿಗಳ ವಿರುದ್ದ ಒಂದಾಗಿ ಹೋರಾಟ ನಡೆಸಬೇಕಿದೆ ಎಂದರು.
ವೇದಿಕೆಯಲ್ಲಿ ಭಜನೆ, ಗೂಡು ದೀಪ ಸ್ಪರ್ಧೆ ವಿಜೇತರಿಗೆ ಹಾಗೂ ಒಂದು ಸಾವಿರ ಬಾಲಕ ಬಾಲಕಿಯರ ತಂಡಕ್ಕೆ ಬಹುಮಾನ ವಿತರಣೆ, ಗೌರವಾರ್ಪಣೆ ನೆರವೇರಿತು.

ಯುವಮೋರ್ಚಾ ಅಧ್ಯಕ್ಷ ಭರತ್‍ರಾಜ್ ಕೃಷ್ಣಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಮೇಯರ್ ಸುನಿತಾ, ಬಿಜೆಪಿ ಮುಖಂಡರಾದ ರೇಣುಕಾರಾಧ್ಯ, ಪೂಜಾ ಪೈ, ಪ್ರಭಾ ಮಾಲಿನಿ, ಸುದರ್ಶನ್, ರಾಜೇಶ್ ಕೊಠಾರಿ, ಸಂದೀಪ್ ಪಚ್ಚನಾಡಿ, ಮಹೇಶ್ ಮೂರ್ತಿ , ವಿಠಲ ಸಾಲಿಯಾನ್, ರಣ್‍ದೀಪ್ ಕಾಂಚನ್, ಸ್ಥಳೀಯ ಮನಪಾ ಸದಸ್ಯ ವರುಣ್ ಚೌಟ, ಸರಿತಾ ಶಶಿ, ಶೋಭಾ ರಾಜೇಶ್, ನಯನಾ ಆರ್. ಕೋಟ್ಯಾನ್, ಲಕ್ಷ್ಮೀ ಶೇಖರ್ ದೇವಾಡಿಗ, ಶ್ವೇತಾ ಎ., ಲೋಕೇಶ್ ಬೊಳ್ಳಾಜೆ, ಕಿರಣ್‍ಕುಮಾರ್ ಕೋಡಿಕಲ್, ಮನೋಜ್ ಕುಮಾರ್, ಲೋಹಿತ್ ಅಮೀನ್, ಗಾಯತ್ರಿ ರಾವ್, ವೇದಾವತಿ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸುಡುಮದ್ದು ಗಮನ ಸೆಳೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು