ಇತ್ತೀಚಿನ ಸುದ್ದಿ
ಸುರತ್ಕಲ್ ಟೋಲ್ ಚಲೋ ಪಾದಯಾತ್ರೆಗೆ ಭರದ ಸಿದ್ಧತೆ: ಮಾ. 15ರಂದು ಹೆಜಮಾಡಿಯಿಂದ ಚಾಲನೆ
09/03/2022, 13:53

ಮಂಗಳೂರು(reporterkarnataka.com): ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಮಾರ್ಚ್ 15ರಂದು ನಡೆಯಲಿರುವ ಪಾದಯಾತ್ರೆಗೆ ಭರದ ಸಿದ್ದತೆ ನಡೆಯುತ್ತಿದೆ.
ಟೋಲ್ ಚಲೋ ಪ್ರಚಾರದ ಭಾಗವಾಗಿ ಪೋಸ್ಟರ್ ಅಂಟಿಸುವ ಮತ್ತು ಕಟ್ಟುವ ಕೆಲಸ ನಡೆಯುತ್ತಿದೆ.
ಮಾರ್ಚ್ 15ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರಗೆ ಪಾದಯಾತ್ರೆ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಹೆಜಮಾಡಿಯಲ್ಲಿ ಚಾಲನೆ ನೀಡಲಾಗುವುದು. ಮಧ್ಯಾಹ್ನ 1 ಗಂಟೆಗೆ ಸುರತ್ಕಲ್ ನಲ್ಲಿ ಸಮಾರೋಪ ನಡೆಯಲಿದೆ.