2:01 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಸುಂದರಿಯರ ಸ್ಪರ್ಧೆ: ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ ಮುಡಿಗೆ ಮಿಸ್ ಯೂನಿವರ್ಸ್ ಕಿರೀಟ

19/11/2023, 13:12

ಸಾಲ್ವಡಾರ್‌(reporterkarnataka.com): ಸೆಂಟ್ರಲ್ ಅಮೆರಿಕದ ಸಾಲ್ವಡಾರ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರು 2023ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯ ಅಂತಿಮ ಸುತ್ತಿನ ಪ್ರದರ್ಶನದಲ್ಲಿ ಶೆಯ್‌ನ್ನಿಸ್‌ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು. 2022ರ ಮಿಸ್ ಯೂನಿವರ್ಸ್ ಬಾನಿ ಗಾಬ್ರಿಯೆಲ್‌ ಅವರು ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರಿಗೆ ಕಿರೀಟ ತೊಡಿಸಿದರು.
ಸ್ಪರ್ಧೆಯಲ್ಲಿ 90ಕ್ಕೂ ಹಚ್ಚು ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಸೆಂಟ್ರಲ್‌ ಅಮೆರಿಕದ ಅಲ್‌ ಸಾಲ್ವಡಾರ್‌ನಲ್ಲಿರುವ ಜೋಸ್‌ ಅಡೊಲ್ಫೊ ಪಿನಡೇ ಅರೇನಾದಲ್ಲಿ
ನಡೆದ 72ನೇ ಭುವನ ಸುಂದರಿ ಸ್ಪರ್ಧೆ ಇದಾಗಿದೆ.
ಈ ಬಾರಿಯ ಭುವನ ಸುಂದರಿ ಸ್ಪರ್ಧೆಯು ಹಲವು ವಿಶೇಷಗಳಿಂದ ಕೂಡಿತ್ತು. ಮೊದಲ ಬಾರಿಗೆ ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಸೌಂದರ್ಯ ಸ್ಪರ್ಧೆ ಅಂದ್ರೆ ತೆಳ್ಳಗೆ ಬಳಕುವ ಸುಂದರಿಯರು. ಆದರೆ ಈ ಬಾರಿ ಒಬ್ಬ ದಪ್ಪಗಿರುವ ನೇಪಾಳದ ಸುಂದರಿ ಜೇನ್‌ ದೀಪಿಕಾ ಗ್ಯಾರೆಟ್‌ ಅವರು ಕೂಡ ಭಾಗವಹಿಸಿದ್ದರು.
2022ರ ಮಿಸ್ ಯೂನಿವರ್ಸ್ ಬಾನಿ ಗಾಬ್ರಿಯೆಲ್‌ ಅವರು ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರಿಗೆ ಕಿರೀಟ ತೊಡಿಸಿದರು. ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರು ಭುವನ ಸುಂದರಿ ಪಟ್ಟ ಅಲಂಕರಿಸಿದ ನಿಕಾರಗುವಾದ ಮೊದಲ ರೂಪದರ್ಶಿ ಎಂಬ
ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು