ಇತ್ತೀಚಿನ ಸುದ್ದಿ
ಸುಳ್ಯ: ಕೋವಿಯೊಂದಿಗೆ ಗುಡ್ಡಕ್ಕೆ ತೆರಳಿದ್ದ ಯುವಕನ ತಲೆಗೆ ಗುಂಡು ತಾಗಿ ಸಾವು; ಆತ್ಮಹತ್ಯೆಯೋ? ಕೊಲೆಯೋ?
28/06/2023, 12:08

ಸುಳ್ಯ(reporterkarnataka.com): ಇಲ್ಲಿಗೆ ಸಮೀಪದ ಉಬರಡ್ಕ ಎಂಬಲ್ಲಿ ಯುವಕನೊಬ್ಬನ ತಲೆಗೆ ಕೋವಿಯಿಂದ ಗುಂಡು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಅರಂತೋಡು ನಿವಾಸಿ ರವಿ(32)ಎಂದು ಗುರುತಿಸಲಾಗಿದೆ. ಉಬರಡ್ಕ ಗ್ರಾಮದ ಬೆಳ್ರಂಪಾಡಿಯಲ್ಲಿ ತೋಟದ ಕೆಲಸಕ್ಕೆ ಆಗಮಿಸಿದ್ದ ಯುವಕ ಮಂಗಳವಾರ ರಾತ್ರಿ ಕೋವಿಯನ್ನು ಗುಡ್ಡೆಗೆ ಹಿಡಿದುಕೊಂಡುವ ಹೋಗಿದ್ದರು. ಮುಂದಿನದ್ದು ಎಲ್ಲ ನಿಗೂಢ.
ಮೃತ ರವಿ ಅವರು ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.