ಇತ್ತೀಚಿನ ಸುದ್ದಿ
ಸುಳ್ಯ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ
01/07/2022, 21:12
ಸುಳ್ಯ(reporterkarnataka.com): 17ರ ಹರೆಯದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಎಸಗಿ ಗರ್ಭಿಣಿಯಾದ ಘಟನೆಯೊಂದು ನಡೆದಿದೆ.
ಬಾಲಕಿಯ ಚಟುವಟಿಕೆ ಬಗ್ಗೆ ಆಕೆಯ ಅಕ್ಕ ಅನುಮಾನಗೊಂಡು ಜೂನ್ 22 ರಂದು ಹತ್ತಿರದ ಆಸ್ಪತ್ರೆಗೆ ಸ್ಕ್ಯಾನ್ ಮಾಡಲು ಕರೆದೊಯ್ದರು. ಆ ವೇಳೆ ಅಪ್ರಾಪ್ತ ಬಾಲಕಿ ಗರ್ಭಿಣಿ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಅತ್ಯಾಚಾರವೆಸಗಿದ ಆರೋಪಿಯನ್ನು ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.