ಇತ್ತೀಚಿನ ಸುದ್ದಿ
ಸುಭದ್ರ, ಬಲಿಷ್ಠ ಭಾರತ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದ್ದು: ಕ್ಯಾಪ್ಟನ್ ಬೃಜೇಶ್ ಚೌಟ
02/04/2024, 20:00

ಮಂಗಳೂರು(reporterkarnataka.com): ಸುಭದ್ರ ಮತ್ತು ಸಮೃದ್ಧ ದೇಶವನ್ನು ಕಟ್ಟುವಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಲಿಷ್ಠ, ವಿಕಸಿತ ಭಾರತವನ್ನು ಕಟ್ಟಲು ವಕೀಲರ ಸಮುದಾಯ ಮಹತ್ವದ ಯೋಗದಾನ ನೀಡಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ಅವರು ಬಿಜೆಪಿಯ ಜಿಲ್ಲಾ ಚುನಾವಣೆ ಕಾರ್ಯಾಲಯದಲ್ಲಿ ಸೋಮವಾರ ನಡೆದ ವಕೀಲರ ಪರಿಷತ್ ಸಭೆಯಲ್ಲಿ ಮಾತನಾಡಿದರು.
ವಕೀಲರು ಸಮಾಜದಲ್ಲಿ ಅತ್ಯಂತ ಗೌರವ ಮತ್ತು ಪ್ರತಿಷ್ಠೆಯನ್ನು ಹೊಂದಿದವರು. ಅವರ ಮಾತುಗಳನ್ನು ಯಾರೂ ಮೀರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಲ್ಲಿ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ವಕೀಲರ ಸಮುದಾಯ ಕೈಜೋಡಿಸಬೇಕು ಎಂದು ಅವರು ಕರೆ ನಿಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕ ಡಿ ವೇದವ್ಯಾಸ ಕಾಮತ್, ಹಿರಿಯರಾದ ಮೋನಪ್ಪ ಭಂಡಾರಿ, ಶಂಭು ಶರ್ಮಾ, ಸುಧಾಕರ ಜೋಶಿ, ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ಪ್ರಸನ್ನ ದರ್ಭೆ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.