ಇತ್ತೀಚಿನ ಸುದ್ದಿ
Sub Jail | ಮಂಗಳೂರು ಜೈಲ್ ಒಳಗೆ 2 ಪೊಟ್ಟಣ ಎಸೆತ: ಮಾಜಿ ಮೇಯರ್ ಕವಿತಾ ಸನಿಲ್ ಅವರಿಂದ ಬಹಿರಂಗ; ಡ್ರಗ್ಸ್ ಸಪ್ಲೈ ಶಂಕೆ; ಚಾಹುಡಿ ಎಂದ ಜೈಲಾಧಿಕಾರಿ!
24/02/2025, 12:08

ಮಂಗಳೂರು(reporterkarnataka.com): ನಗರದ ಬಿಜೈ ಬಳಿಯಿರುವ ಸಬ್ ಜೈಲಿನ ಆವರಣದೊಳಗೆ ಸ್ಕೂಟರ್ ಸವಾರರು ಎರಡು ಪೊಟ್ಟಗಳನ್ನು ಎಸೆದ ಘಟನೆ ನಡೆದಿದ್ದು, ಮಾಜಿ ಮೇಯರ್ ಕವಿತಾ ಸನಿಲ್ ಇದನ್ನು ಬಹಿರಂಗ ಪಡಿಸಿದ್ದಾರೆ.
ಕವಿತಾ ಸನಿಲ್ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಜೈಲ್ ರೋಡ್ ಮೂಲಕ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕವಿತಾ ಸನಿಲ್ ಅವರ ಕಾರಿನ ಮುಂಭಾಗದಲ್ಲಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಎರಡು ಪೊಟ್ಟಗಳನ್ನು ಹೊರಗಡೆಯಿಂದ ಜೈಲಿನ ಕಂಪೌಂಡ್ ಒಳಗೆ ಎಸೆದಿದ್ದಾರೆ. ಒಮ್ಮೆ ಪೊಟ್ಟಣ ಹೊರಗೆ ಬಿದ್ದಾಗ, ಮತ್ತೆ ತೆಗೆದು ಅದನ್ನು ಒಳಗೆ ಎಸೆದಿದ್ದಾರೆ. ಒಟ್ಟು ಮೂರು ಬಾರಿ ಎಸೆದಿದ್ದಾರೆ. ಪೊಟ್ಟಣ ಸಾಧಾರಣ ಗಾತ್ರ ಹೊಂದಿತ್ತು. ಕವಿತಾ ಸನಿಲ್ ಅವರು ಸ್ಕೂಟರನ್ನು ಚೇಸ್ ಮಾಡಿಕೊಂಡು ಹೋದಾಗ ಅವರು ಓಣೆಯ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ. ಸ್ಕೂಟರ್ ನಲ್ಲಿ ನಂಬರ್ ಪ್ಲೇಟ್ ಮಾತ್ರ ಇತ್ತು. ನಂಬರ್ ಇರಲಿಲ್ಲ ಎಂದು ಮಾಜಿ ಮೇಯರ್ ಸ್ಪಷ್ಟಪಡಿಸಿದ್ದಾರೆ. ಇದೆಲ್ಲ ಕವಿತಾ ಸನಿಲ್ ಅವರ ಕಾರಿನ ಡ್ಯಾಸ್ ಬೋರ್ಡ್ ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಮೇಯರ್ ವೇದವ್ಯಾಸ ಕಾಮತ್ ಕೂಡ ಆಗಮಿಸಿ ಜೈಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜೈಲಾಧಿಕಾರಿ, ಪೊಟ್ಟಣ ಬಿಸಾಕಿದ್ದು ಹೌದು. ಅದನ್ನು ಜೈಲಿನೊಳಗಡೆ ರಫಿಕ್ ಎಂಬಾತ ಹೆಕ್ಕಿಕೊಂಡಿದ್ದಾನೆ. ಅದರಲ್ಲಿ ಸಿಗರೇಟ್ ಮತ್ತು ಚಾಹುಡಿ ಮಾತ್ರ ಇತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಮಂಗಳೂರು ಜೈಲ್, ಗ್ಯಾಂಗ್ ವಾರ್, ಮಾದಕ ವಸ್ತು ಸರಬರಾಜು, ಮೊಬೈಲ್ ಫೋನ್ ಬಳಕೆ ಇದಕ್ಕೆಲ್ಲ ಕುಖ್ಯಾತಿ ಪಡೆದಿದೆ.
ಇನ್ನು ಕವಿತಾ ಸನಿಲ್ ಅವರು ಮಂಗಳೂರು ಮೇಯರ್ ಆಗಿದ್ದರು. ಮೇಯರ್ ಆಗಿದ್ದಾಗ ಅವರು ಸ್ಕಿಲ್ ಗೇಮ್ಸ್, ಅನಧಿಕೃತ ಮಸಾಜ್ ಸೆಂಟರ್ ಗಳ ಮೇಲೆ ನಿರಂತರ ದಾಳಿ ನಡೆಸಿ ಪ್ರಖ್ಯಾತಿ ಪಡೆದಿದ್ದರು. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಕವಿತಾ ಸನಿಲ್ ಅವರು ಟ್ಯಾಂಕರ್ ಲಾರಿಯನ್ನು ಓಡಿಸಬಲ್ಲ ಗಟ್ಟಿಗಿತ್ತಿ.