ಇತ್ತೀಚಿನ ಸುದ್ದಿ
ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ
22/06/2021, 15:43
ವಿಜಯನಗರ(reporterkarnataka news): ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರದಲ್ಲಿ ವರ್ಷಕ್ಕೊಮ್ಮೆ ಇಡೀ ವರ್ಷದ ಭವಿಷ್ಯ ಹೇಳುವ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಮಂಗಳವಾರ ಮುಂಜಾನೆ ನಿಧನರಾದರು.
31 ವರ್ಷ ಕಾಲ ಕಾರ್ಣಿಕ ನುಡಿದಿದ್ದ ಮಾಲತೇಶಪ್ಪ ಅವರು ಕೆಲ ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಸಂಕಷ್ಟದಲ್ಲಿದ್ದ ಗೊರವಯ್ಯ ಮಾಲತೇಶಪ್ಪ ಅವರಿಗೆ ಮನೆ ನಿರ್ಮಿಸಿಕೊಡಲು ನಾಡಿನ ಜನರು ಸಹಾಯಹಸ್ತ ಚಾಚಿದ್ದರು. ಆದರೆ ಮನೆ ನಿರ್ಮಾಣ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.