11:08 AM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಸ್ತ್ರೀ ಸ್ತನ್ಯಪಾನ, ಮುಟ್ಟು ಹಾಗೂ ರಕ್ತಹೀನತೆ:ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ನಿಂದ ಎಂವುಕಾಲ್‍ ಅಭಿಯಾನ

11/05/2022, 16:01

ಈ ಉಪಕ್ರಮವು ಭಾರತಾದ್ಯಂತ 9 ಭಾಷೆಗಳಲ್ಲಿ 8000 ಕ್ಲಿನಿಕ್‍ಗಳಲ್ಲಿ 1 ಕೋಟಿ ಮಹಿಳೆಯರನ್ನು ತಲುಪಿಸುವ ಗುರಿ ಹೊಂದಿದೆ

ಬೆಂಗಳೂರು(reporterkarnataka.com): ಮಹಿಳೆಯರಲ್ಲಿ ಕಂಡು ಬರುವ ರಕ್ತಹೀನತೆ, ಸ್ತನ್ಯಪಾನ ಮತ್ತು ಮುಟ್ಟಿನ ಸಮಸ್ಯೆ ಕುರಿತ ಜಾಗೃತಿ ಅಭಿಯಾನ ಆರಂಭವಾಗಿದೆ. ಪ್ರಮುಖ ಔಷಧ ಕಂಪೆನಿಯಾದ ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಎಂಬ ಸಂಸ್ಥೆಯು ಎಂವುಕಾಲ್(EmWocal) ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆರಂಭಿಸಿದೆ. 

ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಒಕ್ಕೂಟ (FOGSI)ದ ಸಹಯೋಗದಲ್ಲಿ ಈ ಜಾಗೃತಿ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಅಗ್ಮೆಂಟೆಡ್‍ರಿಯಾಲಿಟಿ(AR) ಅಂದರೆ ವರ್ಧಿತ ನೈಜತೆ ಮತ್ತು ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್‍ನಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಈ ಉಪಕ್ರಮವು ಭಾರತದಾದ್ಯಂತ 1 ಕೋಟಿ ಮಹಿಳೆಯರನ್ನು ತಲುಪುವಗುರಿ ಹೊಂದಿದೆ. ವಿಶೇಷವೆಂದರೆ, ಎಂವುಕಾಲ್ ಅಭಿಯಾನವು ದೇಶದ ಒಂಬತ್ತು ಭಾಷೆಗಳಲ್ಲಿ (ಹಿಂದಿ, ಇಂಗ್ಲಿಷ್, ಒಡಿಶಾ, ಮರಾಠಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬೆಂಗಾಳಿ) ಪ್ರಸಾರವಾಗಲಿದೆ. 

EmWocal ಅಭಿಯಾನದ ಪ್ರಮುಖ ಭಾಗವಾಗಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಲ್ಲಿ ವೇಯ್ಟಿಂಗ್ ಏರಿಯಾಗಳಲ್ಲಿ ಚಿಂತನಾಶೀಲವುಳ್ಳ ಬರಹಗಳು ಮತ್ತು ಕ್ಯೂಆರ್ ಕೋಡ್‍ಗಳು ಇರುವ ಸ್ಮಾರ್ಟ್ ಕಿಯೋಸ್ಕ್‍ಗಳನ್ನು ಅಳವಡಿಸಲಾಗುತ್ತದೆ. ಇದು ವೈದ್ಯರನ್ನು ನೋಡಲು ಬರುವ ರೋಗಿಗಳು ತಮ್ಮನ್ನು ತಾವು ಸುಶಿಕ್ಷಿತರಾಗಿಸಿಕೊಳ್ಳಲು ಅನುಕೂಲವಾಗಲಿದೆ. 

ಕಿಯೋಸ್ಕ್‍ನಲ್ಲಿ ಕಾಣುವ ಕ್ಯೂಆರ್ ಕೋಡ್‍ಗಳನ್ನು ಮಹಿಳೆ ಸ್ಕ್ಯಾನ್ ಮಾಡಿದರೆ ಸಾಕು ಆಗ್ಮೆಂಟೆಡ್‍ರಿಯಾಲಿಟಿ ವಿಡಿಯೋ(AR) ಮೂಲಕ ಮಾರ್ಗದರ್ಶನ ಸಿಗಲಿದೆ. ಜೊತೆಗೆ ವೈಯಕ್ತಿಕ ಡಿಜಿಟಲ್ ಸಹಾಯಕರೊಂದಿಗೆ ಚಾಟಿಂಗ್ ಮತ್ತು ಪ್ರಶ್ನೆಗಳನ್ನು ಕೇಳಬಹುದಾಗಿದೆ.

ಜೀವನಶೈಲಿ ಮತ್ತು ಆರೋಗ್ಯ ಕುರಿತು ಡಿಜಿಟಲ್ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ರೋಗಿಗಳನ್ನು ಕೇಳಲಾಗುತ್ತದೆ. ವೈದ್ಯರ ಜೊತೆ ತಮ್ಮ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದರಿಂದ ಸಮಾಲೋಚನೆಯ ವೈಯಕ್ತಿಕ ಆರೋಗ್ಯ ಸಹಾಯವೂ ದೊರೆಯಲಿದೆ ಮತ್ತು ಉತ್ತಮ ಮಾಹಿತಿಯುಳ್ಳ ರೋಗಿಗಳನ್ನು ಹೊಂದಲು ವೈದ್ಯರಿಗೆ ಸಹಕಾರಿಯಾಗಲಿದೆ. 

ಭಾರತದ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-2021) ಪ್ರಕಾರ, 15-19 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣವು ಶೇ.59.1ರಷ್ಟಿದ್ದರೆ, 49 ವರ್ಷ ವಯಸ್ಸಿನ ಗರ್ಭಿಣಿಯರಲ್ಲಿ ಶೇ.52.2ರಷ್ಟಿದೆ. ಹೀಗಾಗಿ ರಕ್ತಹೀನ ಕುರಿತಂತೆ ಎಂವುಕಾಲ್ ಅಭಿಯಾನ, ಡಿಜಿಟಲ್ ವಿಡಿಯೋಗಳ ಮೂಲಕ ತಿಳಿವಳಿಕೆ ಮತ್ತು ಮಾಹಿತಿ ನೀಡಿಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ ಇದನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿ ಹೇಳಲಾಗುತ್ತದೆ. ಇನ್ನು ಮಗುವಿಗೆ ಹಾಲುಣಿಸುವುದರಿಂದ ಆಗುವ ಅನುಕೂಲ ಕುರಿತು ಸುದೀರ್ಘವಾಗಿ ಚರ್ಚಿಸಲಾಗುತ್ತದೆ. 

ಎಂವುಕಾಲ್ ಅಭಿಯಾನವು ತಾಯಿಯ ಆರೋಗ್ಯದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ತಿಳಿವಳಿಕೆ ನೀಡುತ್ತದೆ. EmWocalನ 3ನೇ ಜಾಗೃತಿ ವಿಷಯವೆಂದರೆ ಮುಟ್ಟಿನ ಆರೋಗ್ಯ.  ಭಾರತದಲ್ಲಿ ಮುಟ್ಟನ್ನು ಇನ್ನೂ ಒಂದು ನಿಷೇಧವೆಂದು ವಿವಿಧ ರೀತಿಯಲ್ಲಿ ನೋಡುತ್ತಿರುವತಪ್ಪು ಕಲ್ಪನೆಗಳನ್ನು ಬದಲಾಯಿಸಬೇಕಿದೆ. 

ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ಇಂಡಿಯಾ ಬ್ಯುಸಿನೆಸ್ ಅಧ್ಯಕ್ಷರಾದ ಪ್ರತಿನೆ ವೆಟೆ, “ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ವಿಚಾರಹೀನ ನಿಷೇಧಗಳನ್ನು ಹೊಂದಿವೆ. ಇದು ಅರಿವಿನ ಕೊರತೆಗೆ ಕಾರಣವಾಗುವುದರ ಜೊತೆಗೆ ಹೆಚ್ಚಿನ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ EmWocal ಅಭಿಯಾನ ಆರಂಭಿಸಿರುವುದು ತೃಪ್ತಿ ತಂದಿದೆ. ಮಹಿಳೆಯರು ಸುಲಭವಾಗಿ ಲಭ್ಯವಿರುವ ಮತ್ತು ವೈದ್ಯಕೀಯವಾಗಿ ಪರಿಶೀಲಿಸಿದ ಮಾಹಿತಿಯ ಮೂಲಕ ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡಲು ದೀರ್ಘ ಸಮಯ ಹಿಡಿಯಲಿದೆ. ಈ ಕಾರ್ಯಕ್ರಮದ ಉತ್ತಮ ವಿಷಯವೆಂದರೆ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿ ಅವರಿಂದ ಸಲಹೆ, ಸಊಚನೆ ಮತ್ತು ಪರಿಹಾರಗಳನ್ನು ಪಡೆಯುತ್ತಿದ್ದಾರೆ. 

ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ನಮಿತಾಥಾಪರ್, ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಶಿಕ್ಷಣ ಹೆಚ್ಚಿಸುವ ನಿಟ್ಟಿನಲ್ಲಿ ಬಲವಾದ ಬದ್ಧತೆ ಹೊಂದಿದ್ದಾರೆ. ಇದಕ್ಕಾಗಿ ಅವರು ಈ ದಿಕ್ಕಿನಲ್ಲಿ ಸಕ್ರಿಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇದರೆ ಮೊದಲ ಹೆಜ್ಜೆಯಾಗಿ “ಅನ್‍ಕಂಡೀಷನ್ ಯುವರ್ ಸೆಲ್ಫ್ ವಿತ್ ನಿಮಿತಾ’ ಎಂಬ ಅವರಯೂ ಟ್ಯೂಬ್‍ಟಾಕ್ ಶೋ ಮೊದಲ ಬಾರಿಗೆ ಗಮನ ಸೆಳೆದಿತ್ತು. ಈ ಕಾರ್ಯಕ್ರಮದಲಿ ್ಲಥಾಪರ್ ಅವರು ರೋಗಿಗಳು, ತಜ್ಞರು ಮತ್ತು ವೈದ್ಯರೊಂದಿಗೆ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಎಂಕ್ಯೂರ್ ಮಹಿಳೆಯರ ಆರೋಗ್ಯದ ಕುರಿತಾದ ಮಾತುಗಳನ್ನು ಮುಂದುವರಿಸುತ್ತಾ, ಭಾರತೀಯ ಮಹಿಳಾ ಆರೋಗ್ಯ ವರದಿ 2021ನ್ನು ಮಂಡಿಸಿದ್ದಾರೆ. ಆ ಪ್ರಕಾರ ಶೇ.84 ಕೆಲಸ ಮಾಡುವ ಮಹಿಳೆಯರು ಮುಟ್ಟಿನ ಸಮಯದಲ್ಲಿ ಪವಿತ್ರ ಸ್ಥಳಗಳ ಬಳಿ ಹೋಗದಂತೆ ಹಾಗೂ ಪೂರ್ವಗ್ರಹ ತೀರ್ಪುಗಳನ್ನು ಎದುರಿಸಿದ್ದಾರೆ ಎಂದಿದ್ದು, ಶೇ.67ರಷ್ಟು ಮಹಿಳೆಯರು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಭಾರತೀಯ ಸಮಾಜದಲ್ಲಿ ಇನ್ನೂ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್‍ನ ಪೋರ್ಟ್ ಫೋಲಿಯೊ ಸ್ಟ್ರಾಟಜಿಯ ಹಿರಿಯ ನಿರ್ದೇಶಕ ಸೌರಭ್‍ಗಂಭೀರ್, “ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಹಿಂಜರಿಕೆ ಅನುಭವಿಸುತ್ತಾರೆ. ಇದರಿಂದ ಸೂಕ್ತವಾದ ಮಾಹಿತಿಯೊಂದಿಗೆ ಮಹಿಳೆಯರಿಗೆ ಅಧಿಕಾರ ನೀಡಲು ಮತ್ತು ಮಹಿಳೆಯರಿಗೆ ಅಧಿಕಾರ ನೀಡಲು ಮತ್ತು ಮಹಿಳೆಯರು ತಮ್ಮ ಸ್ವಂತ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಉತ್ತೇಜಿಸಲು ನಾವು EmWocal ಆಂದೋಲನವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಏಕೆಂದರೆ ಬೆಳೆಯುತ್ತಿರುವ ಆರ್ಥಿಕತೆ, ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ ಮತ್ತು ಅದರ ಬಗ್ಗೆ ಸಂಭಾಷಣೆಗಳು ಮುಖ್ಯವಾಹಿನಿಯಾಗಿರುತ್ತದೆ”.

ಇತ್ತೀಚಿನ ಸುದ್ದಿ

ಜಾಹೀರಾತು