ಇತ್ತೀಚಿನ ಸುದ್ದಿ
ಸ್ಟೇರಿಂಗ್ ಕಟ್ ಆಗಿ ಖಾಸಗಿ ಬಸ್ ಪಲ್ಟಿ: 5 ಮಂದಿಗೆ ಗಂಭೀರ ಗಾಯ
26/01/2025, 19:32
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸ್ಟೇರಿಂಗ್ ಕಟ್ ಆಗಿ ಖಾಸಗಿ ಬಸ್ ವೊಂದು ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಸ್ತೆ ಮಧ್ಯೆಯೇ ಡಿವೈಡರ್ ಗೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುವ ವೇಳೆ ಅವಘಡ ಸಂಭವಿಸಿದೆ. ಮೈಸೂರಿನಿಂದ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದ ಮೈಸೂರು ಅಪೋಲೋ ಸಿಬ್ಬಂದಿಗಳು ಬಸ್ಸಿನಲ್ಲಿದ್ದರು. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.