ಇತ್ತೀಚಿನ ಸುದ್ದಿ
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು. ಆರ್. ಅನಂತಮೂರ್ತಿ ಹೆಸರಿನಲ್ಲಿ ಪೀಠ ಸ್ಥಾಪನೆ
06/03/2026, 20:05
ಬೆಂಗಳೂರು(reporterkarnataka.com): ರಾಜ್ಯದ 17ನೇ ಬಜೆಟ್ (2026-27) ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಘೋಷಣೆ ಮಾಡಲಾಗಿದೆ.
ಪ್ರಸಿದ್ಧ ಸಾಹಿತಿ ಡಾ. ಯು. ಆರ್. ಅನಂತಮೂರ್ತಿ ಅವರ ಹೆಸರಿನಲ್ಲಿ ಪೀಠ ಸ್ಥಾಪನೆ ಮಾಡಲು ಘೋಷಿಸಲಾಗಿದೆ.
ಈ ಪೀಠವನ್ನು ಕುವೆಂಪು ವಿವಿಯಲ್ಲಿ ಸ್ಥಾಪಿಸಲಾಗುತ್ತದೆ.
ಕನ್ನಡ ಸಾಹಿತ್ಯ ಮತ್ತು ಚಿಂತನೆಯ ಅಧ್ಯಯನವನ್ನು ಉತ್ತೇಜಿಸುವುದು, ಅನಂತಮೂರ್ತಿ ಅವರ ಸಾಹಿತ್ಯ, ತತ್ವಚಿಂತನೆ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ಸಂಶೋಧನೆ ನಡೆಸುವುದು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವಿಶೇಷ ಅಧ್ಯಯನ ಕೇಂದ್ರ ಒದಗಿಸುವುದು.
ಕನ್ನಡ ಕಾದಂಬರಿಕಾರ ಯು ಆರ್ ಅನಂತಮೂರ್ತಿ ಮತ್ತು ಚಿಂತಕರು.ಅವರ ಪ್ರಸಿದ್ಧ ಕೃತಿ ಸಂಸ್ಕಾರ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಹೊಂದಿದೆ.
ಅವರು ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ವಿಜೇತರೂ ಆಗಿದ್ದರು.
17ನೇ ರಾಜ್ಯ ಬಜೆಟ್‌ನಲ್ಲಿ ಕುವೆಂಪು ವಿವಿಯಲ್ಲಿ ಯಲ್ಲಿ ಯು. ಆರ್ . ಅನಂತಮೂರ್ತಿ ಪೀಠ ಸ್ಥಾಪಿಸುವ ಮೂಲಕ ಕನ್ನಡ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಯೋಜನೆ ಘೋಷಿಸಲಾಗಿದೆ.












