2:02 AM Wednesday25 - June 2025
ಬ್ರೇಕಿಂಗ್ ನ್ಯೂಸ್
ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಅತ್ಯಾಧುನಿಕ ಭೂಗತ ರಸ್ತೆ ಜಾಲ, ಪೆರಿಫೆರಲ್ ರಿಂಗ್ ರಸ್ತೆ: ಹೆದ್ದಾರಿ ಸಚಿವ… ಎನ್.ಆರ್.ಪುರ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು;… Chikkamagaluru | ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಡಿಕ್ಕಿ: ಸವಾರ… ಬಾಣಸವಾಡಿ, ಕಸ್ತೂರಿನಗರ ಅರಣ್ಯ ಪ್ರದೇಶಕ್ಕೆ ಸಚಿವ ಖಂಡ್ರೆ ಭೇಟಿ: ಬೆಂಗಳೂರಿನಲ್ಲಿ ಶ್ವಾಸತಾಣಗಳ ಸಂರಕ್ಷಣೆ… HDK | ವಸತಿ ಇಲಾಖೆ ಅಕ್ರಮ ಮರೆಮಾಚಲು ಎಚ್.ಕೆ. ಪಾಟೀಲ್ ಪತ್ರ ತೇಲಿ… ಕಾಂಗ್ರೆಸ್ ಸರ್ಕಾರದಲ್ಲಿ ಕಮೀಶನ್ ದಂಧೆ 224 ಶಾಸಕರಿಗೂ ಗೊತ್ತಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಚಾಲಕರ ವಿರುದ್ಧ ಕಠಿಣ ಕ್ರಮ: ಸಾರಿಗೆ ಸಚಿವ ರಾಮಲಿಂಗಾ… Bagalkote | ಪಟ್ಟದಕಲ್ಲು ವಿಶ್ವ ಪರಂಪರೆ ತಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… Udupi | ನೈತಿಕ ಪಾಠ ಶಾಸಕ ಸುನಿಲ್ ಕುಮಾರ್ ಹೇಳಿ ಕೊಡಬೇಕಿಲ್ಲ: ಸಚಿವೆ…

ಇತ್ತೀಚಿನ ಸುದ್ದಿ

ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ

25/06/2025, 19:35

ಬೆಂಗಳೂರು(reporterkarnataka.com): ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದ ಸರ್ಕಾರ ರಾಜ್ಯದಲ್ಲಿ ನಡೆದಿದೆ‌. ಇದರಿಂದ ಜನ ಬೇಸತ್ತಿದ್ದಾರೆ‌. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಣ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ತಮಾಷೆಗಾಗಿಯಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ದುಡ್ಡು ಇಲ್ಲಾ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಈಗ ತಮಾಷೆಗಾಗಿ ಹೇಳಿದ್ದೆ ಎಂದು ಹೇಳುತ್ತಿದ್ದಾರೆ. ತಮಾಷೆಗಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ದ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಶಾಸಕರಿಗೆ ಯಾವುದೇ ಅನುದಾನ ಇಲ್ಲ. ಕೆಲಸ ಮಾಡಲು ಆಗಿಲ್ಲ. ಹೀಗೆ ಆದರೆ, ಇನ್ನೆರಡುವರೆ ವರ್ಷದಲ್ಲಿ ಜನರ ಬಳಿ ಹೋಗಲು ಆಗುವುದಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಕೆಲಸ ಮಾಡಲು ಪ್ರತಿಯೊಂದಕ್ಕೂ ಭ್ರಷ್ಟಾಚಾರ, ಎಷ್ಟಿಮೇಟ್ ಗೂ ಭ್ರಷ್ಟಾಚಾರ, ವರ್ಕ್ ಆರ್ಡರ್ ತೆಗೆದುಕೊಳ್ಳಲು ಭ್ರಷ್ಟಾಚಾರ. ಕಾಂಗ್ರೆಸ್ ನ ನೀತಿಯಿಂದಾಗಿ ಜನರು ತಮ್ಮ ದುಡಿಮೆಯ ಹಣವನ್ನು ಭ್ರಷ್ಟಾಚಾರಕ್ಕೆ ಕೊಡುವ ಪರಿಸ್ಥಿತಿ ಬಂದಿದೆ. ಸ್ಮಾರ್ಟ್ ಮೀಟರ್ ದರ 500-600 ಇದ್ದದ್ದು ಆರೇಳು ಸಾವಿರ ಮಾಡಿದ್ದಾರೆ. ಅದನ್ನು ಸರ್ಕಾರ ಕೊಡುವುದಿಲ್ಲ ಜನರಿಂದ ಕೊಡಿಸುತ್ತಾರೆ‌. ಜನ ಕೊಡುವ ದುಡ್ಡಿನಿಂದ ಭ್ರಷ್ಟಾಚಾರ ಮಾಡುತ್ತಿದ್ದಾರೆ. ರೈತರ ಹಾಲಿನ ಪ್ರೋತ್ಸಾಹ ಧನ 750 ಕೋಟಿ ರೂ. ಕೊಟ್ಟಿಲ್ಲ. ಹಾಲು ಉತ್ಪಾದಕ ಮಂಡಳಿಗಳಿಗೆ ಹಾಲಿನ ದರ ಏರಿಸಲು ಹೇಳಿದರು. ಅದನ್ನು ಜನರ ಮೇಲೆ ಹಾಕಿದರು. ಅಬಕಾರಿ ಇಲಾಖೆಯಲ್ಲಿ ಬಡವರು ಕುಡಿಯುವ ಸಾರಾಯಿ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದಾರೆ. ಅಬಕಾರಿ ಡೀಲರ್ಸ್ ಪ್ರತಿಭಟನೆ ಮಾಡಿದರು. ಪಿಡಬ್ಲ್ಯುಡಿ ಗುತ್ತಿಗೆದಾರರು, ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆ ಮಾಡಿದರು. ಆದರೂ ಸರ್ಕಾರದವರು ತುಟಿ ಪಿಟಕ್ ಅನ್ನಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರದ ವಿರುದ್ದ ದೊಡ್ಡ ಹಂಗಾಮ ಮಾಡಿದ್ದರು. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದೆ ನಡೆದಿದೆ‌ ಇದರಿಂದ ಜನ ಬೇಸತ್ತಿದ್ದಾರೆ‌ ಎಂದು ಆರೋಪಿಸಿದರು.

*ಡಬಲ್ ಸ್ಟ್ಯಾಂಡರ್ಡ್‌:*
ಕಾನೂನು ಸಚಿವ ಎಚ್ ಕೆ ಪಾಟೀಲರು ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ, ಅದನ್ನು ಅವರಿಗೆ ನೇರವಾಗಿಯೇ ಹೇಳಬಹುದಿತ್ತು. ಅವರ ಮಾತು ಸಿಎಂ ಕೇಳುತ್ತಿರಲಿಲ್ಲವೆ. ಪ್ರತಿಪಕ್ಷದವರ ರೀತಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಗಣಿ ಹರಾಜು ಹಾಕಲು ಕಾನೂನು ಮಾಡಿತ್ತು ಅದಕ್ಕೂ ಮೊದಲಿನ ದಿನ ರಾಜ್ಯ ಸರ್ಕಾರ ಗಣಿ ಹರಾಜು ಹಾಕಿದ್ದರು. ಈ ಹಿಂದೆ ನಮ್ಮ ಅಧಿಕಾರದಲ್ಲಿ ಜಿಂದಾಲ್ ಗೆ ಜಮೀನು ನೀಡಬಾರದು ಎಂದು ಎಚ್. ಕೆ. ಪಾಟೀಲರು ಪತ್ರ ಬರೆದಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಜಿಂದಾಲ್ ಗೆ ಜಮೀನು ನೀಡಿದರು. ಈ ರೀತಿಯ ಡಬಲ್ ಸ್ಟ್ಯಾಂಡರ್ಡ್ ಯಾಕೆ ಎಂದು ಪ್ರಶ್ನಿಸಿದರು.

*ರಾಜಕೀಯ ಪ್ರೇರಿತ:*
ನಮ್ಮ ಸರ್ಕಾರದ ಅವಧಿಯಲ್ಲಿ ನಮ್ಮ ವಿರುದ್ದ ಮಾಡಿದ್ದ ಭ್ರಷ್ಟಾಚಾರದ ಆರೋಪ ರಾಜಕೀಯ ಪ್ರೇರಿತ ಆಗಿತ್ತು. ನಾನು ಆಗಲೇ ದಾಖಲೆ ಕೊಡುವಂತೆ ಹೇಳಿದ್ದೆ. ಯಾರೂ ದಾಖಲೆ ನೀಡಲಿಲ್ಲ. ಈಗ ಅದೇ ಗುತ್ತಿಗೆದಾರ ಸಂಘ ಈ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ‌ ಎಂದರು.
ಶಾಸಕ ಬಿ.ಆರ್ ಪಾಟಿಲರು ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವುದು ಇದೇನು ಮೊದಲ ಸಲ ಅಲ್ಲ. ಈ ಹಿಂದೆ ಮೂರು ಬಾರಿ ಆರೋಪ ಮಾಡಿದ್ದರು. ಆಗ ಅವರನ್ನು ಸಮಾಧಾನ ಮಾಡಲು ಯೋಜನಾ ಆಯೊಗದ ಉಪಾಧ್ಯಕ್ಷನ್ನಾಗಿ ಮಾಡಿದ್ಸರು. ಈಗ ಸಮಾಧಾನ ಮಾಡಲು ಸಂಪುಟ ಸ್ಥಾನ ಕೊಡಬಹುದು ಎಂದು ಅವರು ನುಡಿದರು.

*ಬಿಜೆಪಿ ಹೋರಾಟ:*
ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡಲು ನಾವೆಲ್ಲ ಸಭೆ ಸೇರಿ ಚರ್ಚೆ ಮಾಡಿ ಆಯಾ ಪ್ರದೇಶದ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕ್ರೀಯರಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಅವರು ಹೋರಾಟಕ್ಕೆ ಬಂದಾಗ ಸ್ಪೂರ್ತಿ ಬರುತ್ತದೆ. ಅವರು ದೊಡ್ಡ ನಾಯಕರು. ಅವರು ಪ್ರವಾಸ ಮಾಡಿದಾಗಲೆಲ್ಲಾ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಈಗ ಸ್ವಯಂಪ್ರೇರಿತರಾಗಿ ಪಕ್ಷದ ಸಂಘಟನೆಗೆ ಬಂದಿದ್ದಾರೆ. ಅವರಿಂದ ಪಕ್ಷಕ್ಕೆ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

*ತುರ್ತು ಪರಿಸ್ಥಿತಿ ತಪ್ಪು ಒಪ್ಪಿಕೊಳ್ಳಬೇಕು:*
ತುರ್ತು ಪರಿಸ್ಥಿತಿಯ ವಿರುದ್ದ 50 ವರ್ಷಾಚರಣೆ ಮಾಡುತ್ತಿರುವ ಕುರಿತು ಗೃಹ ಸಚಿವ ಪರಮೇಶ್ವರ ಅವರು, ಬಿಜೆಪಿಯವರು ಮುಂದೆ ಹೋಗುವ ಬದಲು ಹಿಂದೆ ಹೋಗುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ ಅವರು ತಮಗೆ ಏನು ಅನಕೂಲ ಇದೆ ಅದನ್ನು ತೆಗೆದುಕೊಳ್ಳುತ್ತಾರೆ‌. ರಾಹುಲ್ ಗಾಂಧಿ, ಖರ್ಗೆಯವರ ವಿಚಾರದಲ್ಲಿ ಹಿಂದೆ ಮಾಡಿರುವುದನ್ನು ಹೇಳುತ್ತಾರೆ. ಅನುಕೂಲ ಸಿಂಧುವಾಗಿ ವಾದ ಮಾಡುತ್ತಾರೆ. ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ದೊಡ್ಡ ಅನಾಹುತ. ಅದು ಇದ್ದಿದ್ದರೆ ನಾವೂ ಇರುತ್ತಿರಲಿಲ್ಲ. ಪರಮೇಶ್ವರ ಅವರೂ ಇರುತ್ತಿರಲಿಲ್ಲ. ಅವರು ಮಾಡಿರುವ ತಪ್ಪು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು