ಇತ್ತೀಚಿನ ಸುದ್ದಿ
ಸ್ಥಳೀಯರ ತೀವ್ರ ವಿರೋಧ: ವಾಮಂಜೂರು ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ; ಪ್ರತಿಭಟನಾಕಾರರು ಹರ್ಷ
11/06/2023, 12:11
ವಾಮಂಜೂರು(reporterkarnataka.com): ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ
ವಾಮಂಜೂರು ಅಣಬೆ ಫ್ಯಾಕ್ಟರಿ ಇಂದಿನಿಂದಲೇ ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಇಂದು ಸಂಜೆಯೊಳಗೆ ಫ್ಯಾಕ್ಟರಿಗೆ ಸೀಲ್ ಹಾಕಲಾಗುವುದು ಎಂದರು. ಇದು ವಾಮಂಜೂರು ನಾಗರಿಕರಿಗೆ ಸಿಕ್ಕ ಜಯ ಎಂದು ಪ್ರತಿಭಟನಾಕಾರರು ಜಯಕಾರ ಹಾಕಿದರು.
ವಾಮಂಜೂರು ಅಣಬೆ ಫ್ಯಾಕ್ಟರಿ ವಿರುದ್ಧ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ಶನಿವಾರ ಎಚ್ಚರಿಕೆ ನೀಡಿದ್ದರು.
ಅಣಬೆ ಫ್ಯಾಕ್ಟರಿಯಿಂದ ಸ್ಥಳೀಯ ಜನತೆ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಜನರು ಕಳೆದ ಮೂರು ದಿನಗ