ಇತ್ತೀಚಿನ ಸುದ್ದಿ
ಎಸ್ಸೆಸ್ಸೆಲ್ಸಿ ಪರೀಕ್ಷೆ: 607 ಅಂಕ ಪಡೆದ ಕಾವೂರು ಬಿಜಿಎಸ್ ವಿದ್ಯಾರ್ಥಿ ಮಹಿತ್ ಕುಮಾರ್
09/05/2024, 22:28
ಮಂಗಳೂರು(reporterkarnataka.com): ನಗರದ ಕಾವೂರಿನ ಬಿಜಿಎಸ್ ಹೈಸ್ಕೂಲ್ ವಿದ್ಯಾರ್ಥಿ ಮಹಿತ್ ಕುಮಾರ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 607 ಅಂಕ ಪಡೆದು 97.12 % ದಾಖಲೆಯ ಸಾಧನೆ ಮಾಡಿದ್ದಾನೆ.
ಬಿಜಿಎಸ್ ಶಾಲೆಯ ಗರಿಷ್ಠ ಅಂಕ ಪಡೆದ ಟಾಪರ್ ವಿದ್ಯಾರ್ಥಿಯಾಗಿರುವ ಮಹಿತ್ ಕುಮಾರ್ ಅವರು ಭಾಸ್ಕರ್ ಗಟ್ಟಿ ಕೌಡೂರು ಹಾಗೂ ಸೌಮ್ಯ ಗಟ್ಟಿ ನಡಾರ್ ಅವರ ಪುತ್ರ.ಗರಿಷ್ಠ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದಸಾಧನೆ ಮಾಡಿದ ಮಹಿತ್ ಅವರನ್ನು ಶಾಲಾಡಳಿತ ಮಂಡಳಿ ಅಭಿನಂದಿಸಿದೆ.