1:27 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ ಸರಕಾರಿ ಆಸ್ಪತ್ರೆಗೆ ಸಿವಿಲ್ ನ್ಯಾಯಾಧೀಶರ ಭೇಟಿ; ಪರಿಶೀಲನೆ

14/12/2022, 19:19

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporter Karnataka@gmail.com

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು . ಆಸ್ಪತ್ರೆಯ ವಿವಿಧ ಘಟಕಗಳು ಹಾಗೂ ಒಳ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು , ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು. ರೋಗಿಗಳಿಗೆ ಚೆನ್ನಾಗಿ ಶುಚಿಗೊಳಿಸಿದ ಬಟ್ಟೆಗಳನ್ನು ನೀಡಬೇಕು ಎಂದು ಹೇಳಿದರು.

ಆಸ್ಪತ್ರೆ ಶುಚಿತ್ವ , ನಿರ್ವಹಣೆ ಮತ್ತು ಸಿಬ್ಬಂದಿಯ ವೈದ್ಯಕೀಯ ಸೇವೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು, ಆಸ್ಪತ್ರೆ ಮುಂದೆ ವಾಹನಗಳ ನಿಲುಗಡೆ ಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ . ಆದ್ದರಿಂದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡಲು ಪೊಲೀಸ್ ಇಲಾಖೆ ನೆರವು ಪಡೆಯುಂತೆ ಸೂಚಿಸಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ . ಕುಡಿಯುವ ನೀರಿನ ಸಮಸ್ಯೆ ಇದೆ.

ಐಸಿಯು ಘಟಕ ಇದೆಯಾದರೂ , ತಜ್ಞ ವೈದ್ಯರಿಲ್ಲ ಎಂದು ವೈದ್ಯರು ನ್ಯಾಯಾಧೀಶರಿಗೆ ತಿಳಿಸಿದರು . ಅದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು .
ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಡಾ . ಉಮಾಶಂಕರ್‌ , ಡಾ . ದಿವಾಕರ್ , ಡಾ . ಕಮಲಮ್ಮ , ಡಾ . ನಿರಂಜನ್ , ಸಿಬ್ಬಂದಿ ಪ್ರಕಾಶ್ , ಲೀಡಿಯಾ , ಔಷಧಿಕಾರ ಮೊಹಮ್ಮದ್ ಅಲಿ , ಸೈಯದ್ , ಉಷಾ , ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು