ಇತ್ತೀಚಿನ ಸುದ್ದಿ
ಜಗದ್ವಿಖ್ಯಾತ ಶೃಂಗೇರಿ ಶಾರದಾ ಪೀಠದಲ್ಲಿ ವಸ್ತ್ರಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆಗೆ ಮಾತ್ರ ಅವಕಾಶ
15/08/2024, 20:13
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿ ಬಂದಿದೆ. ಪಂಚೆ, ಶಲ್ಯ, ದೋತಿ, ಸೀರೆಯಲ್ಲಿ ಬಂದ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಇಂದು ದೇವಾಲಯ ಆವರಣ ಭಾರತೀಯ ಸಂಸ್ಕೃತಿಯ ತಾಣವಾಗಿತ್ತು. 20 ದಿನದ ಹಿಂದೆ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು.
ದೇವರು, ಗುರುಗಳ ದರ್ಶನಕ್ಕೆ ಬರುವವರು ಸಾಂಪ್ರಾದಾಯಿಕ ಉಡುಗೊರೆಯಲ್ಲಿರುವಂತೆ ಸೂಚನೆ ನೀಡಲಾಗಿದೆ.
ಇಂದಿನಿಂದ ಅಧಿಕೃತವಾಗಿ ವಸ್ತ್ರ ಸಂಹಿತೆ ಪದ್ಧತಿ ಜಾರಿಗೆ ಬಂದಿದೆ. ದೇವಾಲಯದ ವಸ್ತ್ರ ಸಂಹಿತೆ ಪದ್ಧತಿಯನ್ನ ಭಕ್ತವೃಂದ ಸ್ವಾಗತಿಸಿದೆ.