ಇತ್ತೀಚಿನ ಸುದ್ದಿ
ಶೃಂಗೇರಿ: ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಕಾರು: ಪ್ರಯಾಣಿಕರು ಪವಾಡಸದೃಶ್ಯ ಪಾರು
07/09/2025, 13:43

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿ ತಾಲೂಕಿನ ಗುಲಗಂಜಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪ ನದಿಗೆ ಕಾರೊಂದು ಉರುಳಿ ಬಿದ್ದಿದ್ದು, ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಪವಾಡಸದೃಶ್ಯ ಪಾರಾಗಿದ್ದಾರೆ.
ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಕಾರು ಉಪನದಿಗೆ ಉರುಳಿ ಬಿದ್ದಿದೆ.
ಉಪನದಿಗಿದ್ದ ತಡೆ ಗೋಡೆ ಮುರಿದು ಕಾರು ನದಿಗೆ ಉರುಳಿದೆ. ಕಾರು ಕಾರ್ಕಳದಿಂದ ಶೃಂಗೇರಿಗೆ ತೆರಳುತ್ತಿತ್ತು. ಗುಲಗಂಜಿ ಗ್ರಾಮ
ಕುದುರೆಮುಖ ರಾಷ್ಟ್ರೀಯ ಉದ್ಯಾನವನವದ ವ್ಯಾಪ್ತಿಯಲ್ಲಿ ಬರುತ್ತದೆ.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.