8:48 PM Friday2 - January 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ…

ಇತ್ತೀಚಿನ ಸುದ್ದಿ

ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಬಹುಭಾಷಾ ಕವಿಗೋಷ್ಠಿ; ಪ್ರಕೃತಿಯ ವಿಸ್ಮಯಗಳು ಕವನ ರಚನೆಗೆ ಪ್ರೇರಕ ಎಂದ ಸಾಹಿತಿ ಪ್ರೊ. ರಾಜಮಣಿ ರಾಮಕುಂಜ

20/06/2024, 18:48

ಬಂಟ್ವಾಳ(reporterkarnataka.com): ಪ್ರಕೃತಿಯ ವಿಚಾರಗಳಿಂದ ನಾವು ವಿಸ್ಮಿತರಾಗುತ್ತೇವೆ. ವಿಸ್ಮಯಗಳು ಪ್ರಚೋದಿಸಿ ಹೃದಯದ ಭಾಷೆಯಾಗಿ ಕವನ ರೂಪದಲ್ಲಿ ಹೊರಹೊಮ್ಮುತ್ತದೆ. ಕವನ ಬುದ್ದಿಯ ಭಾಷೆ ಅಲ್ಲ, ಅದು ಹೃದಯದ ಭಾಷೆ . ಕವನವನ್ನು ಓದಿದಾಗ , ಹಾಡಿದಾಗ ಪ್ರಭಾವಿಸುತ್ತದೆ ಎಂದು ಸಾಹಿತಿ ಪ್ರೊ. ರಾಜಮಣಿ ರಾಮಕುಂಜ ಹೇಳಿದರು.


ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ ಮತ್ತು ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪರಿಸರ ಸಂಬಂಧಿತ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ವೈಷ್ಣವಿ ಕಲ್ಲಡ್ಕ ನಿರೂಪಿಸಿದರು.
ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಯವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರಗಿತು. ಕವಯಿತ್ರಿ ಅಪೂರ್ವ ಕಾರಂತ್ ಪುತ್ತೂರು ನಿರೂಪಿಸಿದರು.
ಕವಿಗಳಾದ ಡಾ. ಸುರೇಶ ನೆಗಳಗುಳಿ, ರೆಮಂಡ್ ಡಿಕುನ್ಹಾ ತಾಕೊಡೆ, ಪಂಕಜಾ ಮುಡಿಪು , ಶಾಂತಾ ಪುತ್ತೂರು, ಜಯಶ್ರೀ ಶೆಣೈ ಬಂಟ್ವಾಳ , ಸೋನಿತಾ ನೇರಳಕಟ್ಟೆ , ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ಋತ್ವಿಕ್ ಮೊಳೆಯಾರ, ವಿಶ್ವನಾಥ ಮಿತ್ತೂರು ಸ್ವರಚಿತ ಪರಿಸರ ಸಂಬಂಧಿತ ಕವನ ವಾಚಿಸಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳ ಕವಿಗೋಷ್ಠಿಯು ಕವಯಿತ್ರಿ ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ವೈಷ್ಣವಿ ಕಡ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಸಿದ್ಧ ಕವಿಗಳ ಪರಿಸರ ಗೀತೆಗಳನ್ನು ಹಾಡಿದರು.
ವೇದಕೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ,ಮುಖ್ಯ ಶಿಕ್ಷಕ ಗೋಪಾಲ, ಹಿರಿಯ ಸಾಹಿತಿ ಗಣರಾಜ ಕುಂಬ್ಳೆ,ಉದ್ಯಮಿ ನಾಗೇಶ ಕಲ್ಲಡ್ಕ ಉಪಸ್ಥಿತರಿದ್ದರು. ಕವಯಿತ್ರಿ ಮಧುರ ಕಡ್ಯ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು