ಇತ್ತೀಚಿನ ಸುದ್ದಿ
Sports | ಪುತ್ತೂರು: ಜನವರಿ 4ರಂದು ಅಂತರ್ ಜಿಲ್ಲಾ ಬಲ್ಯಾಯ ಕ್ರೀಡೋತ್ಸವ 2026
22/12/2025, 12:37
ಪುತ್ತೂರು(reporterkarnataka.com): ಕಣಿಯಾನ್ ಸಮಾಜ ಸೇವಾ ಸಂಘ ಮಂಗಳೂರು( ರಿ )ಪುತ್ತೂರು ಹಾಗೂ ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು, ದ.ಕ. ಇದರ ಸಹ ಯೋಗದಲ್ಲಿ ದ.ಕ,ಉಡುಪಿ, ಕಾಸರಗೋಡು, ಜಿಲ್ಲಾ ಮಟ್ಟದ ಸ್ವ ಜಾತಿ ಬಾಂಧವರ ಕಣಿಯನ್ ಕ್ರೀಡೋತ್ಸವ 2026 ಇದೆ ಬರುವ ಜನವರಿ 4ರಂದು ಪುತ್ತೂರಿನ ಟೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಾಟಿ ವೈದ್ಯ ದೇವಸ್ಯ ನಾರಾಯಣ ಬಲ್ಯಾಯ ಉದ್ಘಾಟಿಸಲಿದ್ದಾರೆ.



ಮುಖ್ಯ ಅತಿಥಿಗಳಾಗಿ ಬಲ್ಯಾಯ ಸಂಘ ಮಂಗಳೂರು ಅಧ್ಯಕ್ಷೆ ಉಮಾಲಕ್ಷ್ಮಿ ಕುಡುಪು, ಕಣಿಯನ್ ಸಮಾಜ ಸಂಘ ಪುತ್ತೂರು ಅಧ್ಯಕ್ಷ ಸತೀಶ್ ಬಲ್ಯಾಯ ಕೆಮ್ಮಯಿ, ಮಂಗಳೂರು ಕೃಷಿ ಇಲಾಖೆಯ ಶಶಿಕಲಾ ಧನಂಜಯ ಅರ್ಕುಳ, ಪ್ರಗತಿ ಪರ ಕೃಷಿಕ ಆರ್ಯಾಪು ರಮಾನಂದ ಎನ್. ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು ಪ್ರಸಾದ್ ಬಲ್ಯಾಯ ದೊಡ್ಡಡ್ಕ ವಹಿಸಲಿದ್ದಾರೆ.
ಕ್ರೀಡೋತ್ಸವದಲ್ಲಿ ಸ್ವ ಜಾತಿ ಸಮಾಜ ಬಾಂಧವರಿಗೆ ಕಿರಿಯರಿಂದ ಹಿರಿಯರ ವರೆಗೂ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ.
*ಸ್ಪರ್ಧೆ ಗಳ ವಿವರ:*
ಸ್ವ ಜಾತಿ ವಿದ್ಯಾರ್ಥಿಗಳಿಗೆ
1 ರಿಂದ 4ನೇ ತರಗತಿಯ ವರೆಗೆ : ಕಪ್ಪೆ ಜಿಗಿತ, ಪಾಸಿಂಗ್ ಬಾಲ್
5 ರಿಂದ 8ನೇ ತರಗತಿಯ ವರೆಗೆ : 100 ಮೀಟರ್ ಓಟ, ಸಂಗೀತ ಕುರ್ಚಿ,ಲಿಂಬೆ ಚಮಚ ಓಟ.
*ಸ್ವಜಾತಿ ಬಾಂಧವರಿಗೆ
ಪುರುಷರಿಗೆ:* ಕ್ರಿಕೆಟ್,ಕಬ್ಬಡಿ ವಾಲಿಬಾಲ್, ಹಗ್ಗಜಗ್ಗಾಟ,ಶಟ್ಲ್ ಬ್ಯಾಡ್ಮಿಂಟನ್.
*ಮಹಿಳೆಯರಿಗೆ:* ತ್ರೋಬಾಲ್, ಹಗ್ಗಜಗ್ಗಾಟ, ಮಡಕೆ ಒಡೆಯುವುದು. ಸಂಗೀತ ಕುರ್ಚಿ.
ಸಂಜೆ 5.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,ಸ್ಪರ್ಧಾ ವಿಜೇತ ರಿಗೆ ತಿಂಕಿಲ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಭಾಸ್ಕರ ಬಲ್ಯಾಯ ಕಾವು ಬಹುಮಾನ ವಿತರಿಸಲಿದ್ದಾರೆ.
ಅತಿಥಿಗಳಾಗಿ ಅಲಂಗಾರು ಶ್ರೀಧರ ಬಲ್ಯಾಯ, ಆರ್ಲ ಪದವು ಸ್ವಸ್ತಿಕ್ ಜ್ಯೋತಿಷ್ಯಾ ಲಯ ಜ್ಯೋತಿಷಿ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಮಂಗಳೂರು ಬಲ್ಯಾಯ ಸಂಘ ಯುವ ವೇದಿಕೆ ಸಂಚಾಲಕ ಅರವಿಂದ ಪೆರ್ಮಂಕಿ, ಎಲೆ ಕಲಾವಿದ ಶಶಿ ಅಡ್ಕಾರ್ , ಪುತ್ತೂರು ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ, ಜ್ಯೋತಿಷಿ ಜಯರಾಮ ಬಲ್ಯಾ ಯ ಪರ್ಲಡ್ಕ ಉಪಸ್ಥಿತರಿರುವರು.












