ಇತ್ತೀಚಿನ ಸುದ್ದಿ
Sports | ರಾಷ್ಟ್ರಮಟ್ಟದ ಪ್ಯಾರಾ ಪಂಜ ಕುಸ್ತಿ ಪಂದ್ಯಾಟಕ್ಕೆ ಕೊಡಗಿನ ಕೆ.ಎಂ. ಹಸ್ಸನ್ ಆಯ್ಕೆ
13/04/2026, 20:49
ಮಂಗಳೂರು(reporterkarnataka.com): ರಾಷ್ಟ್ರಮಟ್ಟದ ಪ್ಯಾರಾ ಪಂಜ ಕುಸ್ತಿಗೆ ಕೊಡಗು ಜಿಲ್ಲೆಯ ಅರೆಕಾಡು ಗ್ರಾಮದ ವಿಶೇಷ ಚೇತನ ಕ್ರೀಡಾಪಟು ಕೆ.ಎಂ. ಹಸ್ಸನ್ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ನಡೆದ ಎರಡು ದಿನಗಳ ಕರ್ನಾಟಕ ರಾಜ್ಯ ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಎಡಗೈ ಮತ್ತು ಬಲಗೈ ವಿಭಾಗದಲ್ಲಿ 2 ಬೆಳ್ಳಿಯ ಪದಕ ಪಡೆಯುವ ಮೂಲಕ ಅವರು ಆಯ್ಕೆಯಾಗಿದ್ದಾರೆ. ಮೇ ತಿಂಗಳಲ್ಲಿ ಗುಜರಾತಿನ ಗಾಂಧಿನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪ್ಯಾರಾ ಪಂಜ ಕುಸ್ತಿಯಲ್ಲಿ ಕೆ.ಎಂ. ಹಸ್ಸನ್ ಅವರು ಭಾಗವಹಿಸಲಿದ್ದಾರೆ.
ಮಾಜಿ ಕಾರ್ಪೊರೇಟ್ ಗಳಾದ ಪ್ರವೀಣ್ ಚಂದ್ರ ಆಳ್ವ ಹಾಗೂ ಎ.ಸಿ. ವಿನಯರಾಜ್ ಅವರು ಪ್ರಮಾಣ ಪತ್ರ ನೀಡಿದರು.













