ಇತ್ತೀಚಿನ ಸುದ್ದಿ
Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್ ಖಾದರ್ ಏನು ಹೇಳಿದ್ರು?
29/03/2025, 10:27

ಬೆಂಗಳೂರು(reporterkarnataka.com): ವಿಧಾನ ಸೌಧಕ್ಕೆ ನೂತನವಾಗಿ ಅಳವಡಿಸಿರುವ ಆಕರ್ಷಣೆಯ ವರ್ಣರಂಜಿತ ದೀಪಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ.
*ಸ್ಪೀಕರ್ ಯು.ಟಿ. ಖಾದರ್ ಏನು ಹೇಳಿದ್ರು?*
ವಿಧಾನಸೌದ ಪ್ರಜಾಪ್ರಭುತ್ವದ ದೇಗುಲ.ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಕರ್ಷಣೆಯ ಕೇಂದ್ರ ಆಗಿದೆ. ಆಡಳಿತ ಸೌಧಕ್ಕೆ ಜನಾಕರ್ಷಣೆ ಮಾಡುವ ಗುರಿಯಿಂದ ಸರ್ಕಾರಕ್ಕೆ ಮನವಿ ಮಾಡಿದ್ದೆ.
ಶನಿವಾರ, ಭಾನುವಾರ ಬೆಳಗಾವಿಯಲ್ಲಿ ದೀಪಾಲಂಕಾರ ಆಕರ್ಷಣೆ ಆಗ್ತಿದೆ. ಈಗ ವಿಧಾನಸೌಧದಲ್ಲಿ ಅದೇ ರೀತಿ ಮಾಡಲಾಗ್ತಿದೆ.
ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ದೀಪಾಲಂಕಾರ ಇರುತ್ತದೆ. ವಿಶೇಷ ದಿನಗಳಲ್ಲಿ ಲೈಟ್ ಹಾಕೊದಕ್ಕೆ ಹೆಚ್ಚು ಹಣ ಖರ್ಚಾಗುತ್ತಿತ್ತು. ಈಗ ಪರ್ಮನೆಂಟ್ ಆಗಿದೆ. ಎಲ್ ಇ ಡಿ ಲೈಟ್ ಬಳಕೆಯಾಗಿದೆ.
ಏ. 6ರಂದು ಸಿಎಂ ಉದ್ಘಾಟನೆ ಮಾಡ್ತಾರೆ. ಶನಿವಾರ ಭಾನುವಾರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕೊಡೊದಕ್ಕೆ ಮನವಿ ಮಾಡಿದ್ದೇವೆ. ಇದರ ಬಗ್ಗೆ ಚೀಫ್ ಸೆಕ್ರೆಟರಿ ಜೊತೆ ಚರ್ಚೆ ಮಾಡ್ತಿನಿ. 6ರಂದು ಸಾರ್ವಜನಿಕರಿಗೆ ಅವಕಾಶ ಕೊಡ್ತಿವಿ.
ಭಾನುವಾರ ಪೊಲೀಸ್ ಬ್ಯಾಂಡ್ ಒಂದೊಂದು ದಿನ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತೆ.
ಸಾರ್ವಜನಿಕರ ವಿಧಾನಸೌದ ಪ್ರವೇಶ ಹಾಗೂ ಭದ್ರತೆ ವಿಚಾರವಾಗಿ ಸರ್ಕಾರಕ್ಕೆ ಸಲಹೆ ಸೂಚನೆ ಕೊಟ್ಟಿದ್ದೇನೆ.
ಬ್ಯಾಗ್ ಜೊತೆ ಬರಬಾರದು, ಆಧಾರ್ ಕಾರ್ಡ್ ತರುವಂತೆ ಜಾಗೃತಿ ಮೂಡಿಸಬೇಕು.
ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಬೇಕು. ಬಂದೋಬಸ್ತ್ ಮಾಡೋದು ನಮ್ಮ ಕರ್ತವ್ಯ
ಸಿಎಂ ಇದಕ್ಕೆ ಒಪ್ಪಿಗೆ ಕೊಡ್ತಾರೆ ಎಂಬ ಭರವಸೆ ಇದೆ.ಶನಿವಾರ ಬಾನುವಾರ ಲೈಟಿಂಗ್ ವ್ಯವಸ್ಥೆ ಇರುತ್ತದೆ.