10:57 PM Tuesday25 - March 2025
ಬ್ರೇಕಿಂಗ್ ನ್ಯೂಸ್
Karnataka v/s TN | ಮೇಕೆದಾಟು; ಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ… ಕ್ಷಯ ಮುಕ್ತ ಕರ್ನಾಟಕ; ಬಿಸಿಜಿ ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿ‌ನೇಶ್ ಗುಂಡೂರಾವ್… ಅಂಬೇಡ್ಕರ್‌ ಗೆ ಜೀವಮಾನವಿಡಿ ಕಾಂಗ್ರೆಸ್‌ ಅಪಮಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ Constitution | ಕಾಂಗ್ರೆಸ್ ದೇಶದ್ರೋಹಿಗಳ ಪಕ್ಷ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ… Delhi | ಸಂವಿಧಾನ ವಿರೋಧಿ ರಾಜ್ಯ ಸರಕಾರ ರಾಜೀನಾಮೆ ನೀಡಲಿ: ಮಾಜಿ ಸಿಎಂ… Honey Trap | ಬಿಜೆಪಿ ಬಳಿ ಸಿಡಿ‌ ಫ್ಯಾಕ್ಟರಿಯೇ ಇದೆ; ಅವರ ಕಾಲದಲ್ಲಿ… Speaker | ಅಶಿಸ್ತು, ಅಗೌರವ ತೋರಿಸಿದರೆ ಮುಂದಿನ ಅಧಿವೇಶನದಲ್ಲೂ ಸಸ್ಪೆಂಡ್ ಮಾಡುವೆ: ಸ್ಪೀಕರ್… ಚಿಕ್ಕಮಗಳೂರು: ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ದ ಮಹಿಳೆ ಸಾವು IndiGo6E | ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಕೇಂದ್ರ ಸಚಿವ ಪ್ರಹ್ಲಾದ್… FIR Against Madhwaraj | ಮಹಿಳೆಯ ಕಟ್ಟಿ ಹಾಕಿ ಹಲ್ಲೆ ಪ್ರಕರಣದ ಸಮರ್ಥನೆ?:…

ಇತ್ತೀಚಿನ ಸುದ್ದಿ

Speaker | ಅಶಿಸ್ತು, ಅಗೌರವ ತೋರಿಸಿದರೆ ಮುಂದಿನ ಅಧಿವೇಶನದಲ್ಲೂ ಸಸ್ಪೆಂಡ್ ಮಾಡುವೆ: ಸ್ಪೀಕರ್ ಯು.ಟಿ. ಖಾದರ್ ಎಚ್ಚರಿಕೆ

24/03/2025, 19:50

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಸ್ಪೀಕರ್ ಪೀಠಕ್ಕೆ ಅವಮಾನ ಮಾಡಿದರೆ, ಸದನದ ಗೌರವಕ್ಕೆ ಚ್ಯುತಿ ತಂದರೆ ಮುಂದಿನ ಅಧಿವೇಶನದಲ್ಲಿ ಅಂತಹ ಶಾಸಕರನ್ನು ಅಮಾನತು ಮಾಡುತ್ತೇನೆಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮ ಜತೆ ಮಾತನಾಡಿದ ಅವರು ಅಶಿಸ್ತನ್ನು ಯು.ಟಿ. ಖಾದರ್ ಕ್ಷಮಿಸಬಹುದು. ಆದರೆ ಸ್ಪೀಕರ್ ಕ್ಷಮಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಶಾಸಕರು ಅಮಾನತನ್ನು ಶಿಕ್ಷೆ ಅಂತ ಭಾವಿಸುವುದು ಬೇಡ. ಶಾಸಕರು ಯಾವ ರೀತಿ ಉತ್ತಮ ಜನಪ್ರತಿನಿಧಿಯಾಗಬೇಕು ಅಂತ ಅರಿತುಕೊಳ್ಳಲು ನಾನು ತೆಗೆದುಕೊಂಡ ಕ್ರಮ ಇದಾಗಿದೆ. ಯಾವಾಗಲೂ ಎಲ್ಲ ಸರಿ ಅಂತ ಹೇಳಲು ಆಗುದಿಲ್ಲ, ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ಸ್ಪೀಕರ್ ನುಡಿದರು.
ಸದನದಲ್ಲಿ ನಡೆದ ಘಟನೆ ಅಸಹ್ಯ ಉಂಟು ಮಾಡಿದೆ.
ಇದರಿಂದ ರಾಜ್ಯದ ಘನತೆಗೆ ಕುಂದು ಉಂಟಾಗಿದೆ. ರಾಜಕೀಯದವರನ್ನು ಹೊರತು ಪಡಿಸಿ ಎಲ್ಲರೂ ನನ್ನ ತೀರ್ಮಾನವನ್ನು ಒಳ್ಳೆಯ ನಿರ್ಧಾರ ಅಂದಿದ್ದಾರೆ. ಧನ ವಿನಿಯೋಗ ಬಿಲ್‌ಗೆ ಯಾರು ವಿರೋಧ ಮಾಡುವುದಿಲ್ಲ. ಆದರೆ ಇವರು ಬಿಲ್ ಬರುವಾಗ ನಿಲ್ಲಿಸಿ ಬಿಡಬೇಕು ಅಂತ ಗದ್ದಲ ಮಾಡಿದ್ದಾರೆ. ತಪ್ಪು ಅವರಿಗೆ ಮೊದಲ ಅರ್ಥ ಆಗಬೇಕು,ರಾಜ್ಯದಲ್ಲಿ ಸದನಕ್ಕಿಂತ ದೊಡ್ಡದು ಇಲ್ಲ,‌ಸದನದ ಅಧ್ಯಕ್ಷರ ಪೀಠಕ್ಕಿಂತ ದೊಡ್ಡದು ಯಾವುದು ಇಲ್ಲ. ಇದನ್ನು ದಿನವೂ ಸಹಿಸಲು ಆಗುದಿಲ್ಲ.
ಹಿಂದೆ ಅವರ ಸರ್ಕಾರದಲ್ಲಿ ಕ್ರಮ ಕೈಗೊಳ್ಳದೇ ಇದ್ದರಿಂದ ಈ ಪರಿಸ್ಥಿತಿ ಬಂದಿದೆ. ಅವರಿಗೆ ಧೈರ್ಯ ಇರಲಿಲ್ಲ, ಹಾಗೆ ಮಾಡಲಿಲ್ಲ‌. ನನಗೆ ಧೈರ್ಯ ಇದೆ ನಾನು ಕ್ರಮ ಕೈಗೊಂಡಿದ್ದೇನೆ. ಇದರಲ್ಲಿ ಸಿಎಂ ಹಾಗೂ ಯಾರ ಒತ್ತಡವೂ ಇರಲಿಲ್ಲ ಎಂದರು.
ಘನತೆ ಗೌರವ ಉಳಿಸಲು ಕ್ರಮ ಕೈಗೊಂಡಿದ್ದೇನೆ.
ಪೀಠಕ್ಕೆ ಅವಮಾನ ಮಾಡುವಾಗ ಬೇರೆ ರಾಜ್ಯ, ಬೇರೆ ದೇಶ ನೋಡುವಾಗ ಅವಮಾನ ಆಗಬಾರದು.
ಸ್ಪೀಕರ್ ಅಸೆಂಬ್ಲಿಗೆ ಸುಪ್ರೀಂ.ನಾನೇನಾದ್ರೂ ಸ್ಪೀಕರ್ ಆಗಿದ್ರೆ ಪಕ್ಷಾಂತರ ಮಾಡ್ತಾರೆ ಎಂದು ಗೊತ್ತಾದ್ರೆ ಡಿಸ್ಮಿಸ್ ಮಾಡುತ್ತಿದೆ. ಪ್ಲೈಟ್ ಹತ್ತಿದ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೆ ಎಂದು ಹಿಂದಿನ ಸರಕಾರವನ್ನು ಪತನಗೊಳಿಸಿದನ್ನು ಉಲ್ಲೇಖಿಸಿ ಖಾದರ್ ನುಡಿದರು.
ಆ್ಯಕ್ಟ್ ಸ್ಟಾಂಗ್ ಇದ್ದಾಗ ನಾನು ಅದನ್ನು ಬಳಸದೇ ಇದ್ರೆ ನಾವು ವೀಕ್ ಆಗಲ್ವಾ? ಎಂದು ಪ್ರಶ್ನಿಸಿದ ಸ್ಪೀಕರ್ ಖಾದರ್,
ರಾಜಣ್ಣ ಆರೋಪ ಬಗ್ಗೆ ಒಂದು ದಿನದ ಮುಂದೆ ಅನುಮತಿ ‌ಕೇಳಿದಾಗ ಅರ್ಧ ಗಂಟೆ ಚರ್ಚೆ ಆಗಿದೆ. ಮರುದಿನ‌ ಫೈನಾನ್ಸ್ ಬಿಲ್ ಪಾಸ್ ಮಾಡುವಾಗ ಗಲಾಟೆ ಮಾಡಿದ್ದಾರೆ. ಪ್ರತಿಭಟನೆಗೆ ಒಂದು ನಿಯಮ ಇದೆ, ಆದ್ರೆ ಈ ರೀತಿಯಲ್ಲಿ ಗಲಾಟೆ ಮಾಡಿದ್ರೆ ಹೇಗೆ?
ಕೆಲವರು ಗೊತ್ತಿಲ್ಲದೇ ಬಂದಿದ್ದಾರೆ, ಮೇಲೆ ಬಂದು ಸುಮ್ಮನೆ ನಿಂತಿದ್ದಾರೆ.
ಕೆಲವರು ಬಾವಿಯಲ್ಲಿ ಇದ್ದು ಅದಕ್ಕಿಂತ ಹೆಚ್ಚು ಉಪದ್ರ ಮಾಡಿದ್ದಾರೆ. ನಾವು ಕ್ರಮ ಕೈಗೊಳ್ಳದೇ ಇದ್ರೆ ರಾಜ್ಯದ ಘನತೆ ಎಲ್ಲಿ ಹೋಗುತ್ತಿತ್ತು?
ರಾಜಕೀಯವಾಗಿ ನಾನು ಮಾತಾಡಲು ಹೋಗುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ನೋಡಿದ್ದಾರೆ. ರಾಜ್ಯದ ಜನತೆ ತೀರ್ಮಾನ ಮಾಡಲಿ, ನಾನು ಸಂವಿಧಾನ ಪ್ರಕಾರ ತೀರ್ಮಾನ ಮಾಡಿದ್ದೇನೆ. ನನ್ನ ಮುಖ್ಯ ಉದ್ದೇಶ ಮತ್ತೆ ಈ ರೀತಿಯ ಘಟನೆ ಪುನರಾವರ್ತನೆ ಆಗಬಾರದು ಎನ್ನುವುದು ಆಗಿದೆ ಎಂದು ಖಾದರ್ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು