2:01 PM Friday20 - September 2024
ಬ್ರೇಕಿಂಗ್ ನ್ಯೂಸ್
ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

ಇತ್ತೀಚಿನ ಸುದ್ದಿ

ಸ್ಪರ್ಧೆ ಅಂದ್ರೆ ಏನು?: ಗೆಲುವಿನ ಆನಂದವೇ ? ಅಲ್ಲ, ಸೋಲಿನ ನೋವೇ?

11/12/2021, 23:51

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಎಂಬ ಪದಕ್ಕೆ ವಿವರಣೆಯ ಅಗತ್ಯವಿಲ್ಲ. ಸ್ಪರ್ಧೆ ಎಂದರೆ ನಮ್ಮ ಸ್ನೇಹಿತರ, ಎದುರಾಳಿಗಳ ಅಥವಾ ಸಂಬಂಧಿಗಳ ವಿರುದ್ಧ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಧಾನ.

 ಸ್ಪರ್ಧೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿರುತ್ತದೆ . ಕ್ರೀಡೆ, ಶಿಕ್ಷಣ, ಉದ್ಯೋಗದ ಆಯ್ಕೆ ರಾಜಕೀಯ, ಸಾಮಾಜಿಕ ,ವೃತ್ತಿ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸ್ಪರ್ಧೆ ಏರ್ಪಡುತ್ತದೆ. ಸ್ಪರ್ಧೆ ಎಂಬ ಅಂಶ ನಮ್ಮಲ್ಲಿ ಬಹಳ ಚಿಕ್ಕಂದಿನಿಂದಲೂ ಹುಟ್ಟಿಕೊಂಡಿದೆ. ನಾವು ಶಾಲೆಯ ಮೆಟ್ಟಿಲನ್ನು ಏರಿದಾಗಿನಿಂದ ಹುಟ್ಟಿಕೊಂಡ ಸ್ಪರ್ಧೆ ಶಿಕ್ಷಣದ ಕೊನೆಯ ಹಂತದವರೆಗೂ ನಮ್ಮ ಜೊತೆಯಲ್ಲಿಯೇ ಸಾಗುತ್ತಾ ಬಂದಿದೆ. ನಾವು ಶಿಕ್ಷಣವನ್ನು ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಸ್ಪರ್ಧೆ ಮತ್ತೆ ನಮ್ಮ ಜೊತೆ ಸೇರುತ್ತದೆ

ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಎಂಬುದರ ಬಗ್ಗೆ ಚರ್ಚಿಸೋಣ . ನಮ್ಮ ಮಕ್ಕಳು ಎಲ್ಲರಿಗಿಂತಲೂ ಮುಂದಿನ ಶ್ರೇಣಿಯಲ್ಲಿ ಇರಬೇಕು ಎಂಬುದು ಪ್ರತಿಯೊಬ್ಬ ಹೆತ್ತವರ ಕನಸಾಗಿದೆ. ಬಾಲ್ಯದಲ್ಲಿ ಹೆತ್ತವರ ನಿರ್ದೇಶನದಂತೆ ಮಗು ಪ್ರತಿಯೊಂದು ವಿಭಾಗದಲ್ಲಿ ಸ್ಪರ್ಧೆ ನೀಡಿದರೆ ಬೆಳೆಯುತ್ತಾ ನಾನು ಎಲ್ಲರಿಗಿಂತಲೂ ಮೇಲೆಂಬ ಮನೋಭಾವ ಬೆಳೆಯುತ್ತದೆ ಆಟ-ಪಾಠ ಕಲೆ-ಸಾಹಿತ್ಯ ಮುಂತಾದ ಚಟುವಟಿಕೆಗಳಲ್ಲಿ ನಾನು  ಎಲ್ಲರಿಂದಲೂ ಪ್ರಶಂಸಿಸಬೇಕು ಎಂಬ ಉತ್ಕ ಆಸೆ ಚಿಗುರೊಡೆಯುತ್ತದೆ. ಇದೇ ಮುಂದೆ ಕವಲೊಡೆಯುತ್ತಾ ತೀವ್ರ ಸ್ಪರ್ಧೆಗೆ ಕಾರಣವಾಗುತ್ತದೆ. ವಿವಿಧ ಚಟುವಟಿಕೆಗಳಲ್ಲಿ ಸ್ಪರ್ಧಿಸಿ ವಿಜಯಿ ಆದಾಗ ಸಿಗುವ ಆನಂದ ಬಣ್ಣಿಸಲು ಅಸಾಧ್ಯ. ಅದೇ ರೀತಿ ಸ್ಪರ್ಧಿಸಿ ಸೋತಾಗ ಆಗುವ ನೋವು ಸಹಿಸಲು ಕಷ್ಟ.    ಶಿಕ್ಷಣರಂಗದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯವಾದರೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರುವುದು  ಅಷ್ಟೇ ಅಗತ್ಯ .

ಶಿಕ್ಷಣವನ್ನು ಪಡೆದು ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟಾಗ ಮತ್ತೆ ಸ್ಪರ್ಧೆಯ ಮನೋಭಾವ ನಮ್ಮಲ್ಲಿ ಮೂಡುತ್ತದೆ ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯಲು , ಗರಿಷ್ಠ ಸಂಬಳ ಪಡೆಯಲು, ತಾನು ಶ್ರೇಷ್ಠ ಎನ್ನುವ ಮನೋಭಾವನೆ ಇತ್ಯಾದಿ ಕಾರಣದಿಂದ ಸ್ಪರ್ಧೆಗೆ ಅನುವು ಮಾಡಿಕೊಡುತ್ತದೆ. ತನ್ನ ಮೇಲಾಧಿಕಾರಿಯಿಂದ ಶಬಾಸ್ ಗಿರಿಯನ್ನು ಪಡೆಯಲು, ಪ್ರಶಸ್ತಿಯನ್ನು ಪಡೆಯಲು, ಎಲ್ಲರೂ ತನ್ನನ್ನು ಗುರುತಿಸಬೇಕೆಂಬ ಮಹದಾಸೆಯಿಂದ ಸಹೋದ್ಯೋಗಿ ಮಿತ್ರರಲ್ಲಿ ಸ್ಪರ್ಧೆ ಏರ್ಪಡುವುದು ಸಹಜ.

ಸ್ವರ್ಧೆ  ಎಂಬುದು ಹುಟ್ಟಿದಾಗಿನಿಂದ ಜೀವನದ ಕೊನೆಯವರೆಗೂ ನಮ್ಮ ಜೊತೆ ಇರುತ್ತದೆ.ಹಾಗಿದ್ದರೆ ಸ್ಪರ್ಧೆಯಿಂದಾಗುವ ಪ್ರಯೋಜನ ಏನು ಎಂಬುದರ ಬಗ್ಗೆ ತಿಳಿಯೋಣ . ಸ್ಪರ್ಧೆ ನಮ್ಮನ್ನು ಮುನ್ನಡೆಸುತ್ತದೆ. ನಮ್ಮಲ್ಲಿ ಶ್ರಮ ,ಛಲ ,ಕಠಿಣ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತದೆ. ಸ್ಪರ್ಧೆಯಲ್ಲಿ ವಿಜಯಶೀಲರಾಗ ಬೇಕೆಂದು ಕಠಿಣ ಶ್ರಮದಿಂದ ಪೂರ್ವ ತಯಾರಿ ಮಾಡಿಕೊಂಡು ಕೆಲಸ ಮಾಡುತ್ತೇವೆ. ಇದರಿಂದ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯ. ನಾವು ಮಾಡುವ ಅಧ್ಯಯನದಲ್ಲಿ, ವೃತ್ತಿಯಲ್ಲಿ ಸ್ಪರ್ಧೆ ಇದ್ದಾಗ ನಾವು ಅವಿರತ ಶ್ರಮ ಪಟ್ಟು ನಮ್ಮ ಕಾರ್ಯದಲ್ಲಿಯೂ ಗುರಿ 

ಮುಟ್ಟುತ್ತೇವೆ. ವ್ಯಾಪಾರ ಕ್ಷೇತ್ರದಲ್ಲಿ ಕೂಡ ಸ್ಪರ್ಧೆ ಏರ್ಪಡುತ್ತದೆ. ಪ್ರತಿಯೊಂದು ವಸ್ತುವಿನ ಗುಣಮಟ್ಟ ,ಅದರ ಮೌಲ್ಯಗಳು ನಿರ್ಧಾರವಾಗುವುದು ಸ್ಪರ್ಧೆಯಿಂದ. ಮಾರುಕಟ್ಟೆ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ವಸ್ತುಗಳ ಗುಣಮಟ್ಟ ವೃದ್ಧಿ ಆಗುತ್ತದೆ, ಬೆಲೆ ಕಡಿಮೆಯಾಗುತ್ತದೆ. ಸ್ಪರ್ಧೆಯಿಲ್ಲದೇ  ಇದ್ದಲ್ಲಿ ಯಾವುದೇ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆರೋಗ್ಯಕರ ಸ್ಪರ್ಧೆ ಅಭಿವೃದ್ಧಿಯ ,ಪ್ರಗತಿಯ ಸಂಕೇತ.

ಅನಾರೋಗ್ಯಕರ ಸ್ಪರ್ಧೆಯಿಂದ ಹಲವಾರು ಅನಾಹುತಗಳು ಸಂಭವಿಸುತ್ತವೆ. ನಮ್ಮ ಸ್ಪರ್ಧಾ ಮನೋಭಾವ ಅತಿಯಾದರೆ ಅಸೂಯೆ ,ದ್ವೇಷ ಗಳಂತಹ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದ ಖಂಡಿತ   ಒಳಿತಾಗುವುದಿಲ್ಲ .ಅದು ಅದಃಪತನಕ್ಕೆ ನಾಂದಿ ಮಾಡುತ್ತದೆ. ಅತಿಯಾದ ಸ್ಪರ್ಧೆ ಮಾನಸಿಕ ಹಾಗೂ ಶಾರೀರಿಕ ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಹಲವಾರು ರೀತಿಯ ಅವಘಡಗಳು ಉಂಟಾಗಬಹುದು.

ಆರೋಗ್ಯಕರ ಸ್ಪರ್ಧೆ ನಮ್ಮ ಶ್ರೇಯಸ್ಸಿಗೆ ಅಗತ್ಯ. ಸ್ಪರ್ಧೆಯಿಂದ ನಮ್ಮಲ್ಲಿ ಆತ್ಮಾಭಿಮಾನ ಹೆಚ್ಚಬೇಕೆ ಹೊರತು ದುರಭಿಮಾನ ಮೂಡಬಾರದು. ಅನಾರೋಗ್ಯಕರ ಸ್ಪರ್ಧೆಯಿಂದ ನಮ್ಮ ನಾಶವಾಗುತ್ತದೆ ಎಂಬ ಸತ್ಯವನ್ನು ನಾವು ಅರಿತಿರಬೇಕು.

✍️

ಇತ್ತೀಚಿನ ಸುದ್ದಿ

ಜಾಹೀರಾತು