ಇತ್ತೀಚಿನ ಸುದ್ದಿ
ಕ್ಷೇತ್ರದ ಪ್ರತಿ ಗ್ರಾಮಕ್ಕೂ ಸಮಾನವಾಗಿ ಅನುದಾನ ಒದಗಿಸಿದ ತೃಪ್ತಿ ಇದೆ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್
24/03/2023, 11:10
ಬಂಟ್ವಾಳ(reporterkarnataka.com):
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಸಮಾನವಾದ ಅನುದಾನಗಳನ್ನು ಒದಗಿಸಿ ಕ್ಷೇತ್ರದ ಜನರ ಬೇಡಿಕೆಗಳನ್ನು ಪೂರೈಸಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ.
ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಕುಕ್ಕಿಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ 6 .69 ಕೋಟಿ ವೆಚ್ಚದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷ ಸಂಘಟನಾತ್ಮಕವಾಗಿ ಬೆಳೆದಾಗ ಕಾರ್ಯಕರ್ತ ಬೆಳೆಯಲು ಕಾರಣವಾಗುತ್ತದೆ. ಪಕ್ಷ ನೀಡಿದ ಪ್ರತಿ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತೇನೆ, ಪಕ್ಷದ ತತ್ವ ಸಿದ್ದಾಂತದ ಆಧಾರದ ಮೇಲೆ ನಾನು ಕೆಲಸ ಮಾಡುತ್ತೇನೆ.ಅವರು ಹೇಳಿಸಿದರು.
ಶಕ್ತಿ ಕೇಂದ್ರದ ಆದ್ಯಕ್ಷ ಮಾಜಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಗ್ರಾಮದ ಅಭಿವೃದ್ಧಿ ಜೊತೆಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ರಾಜೇಶ್ ಅವರ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರನ್ನು ಶಾಸಕರಾಗಿ ಆಯ್ಕೆ ಮಾಡುವಂತೆ ಅವರು ಮನವಿ ಮಾಡಿದರು.






ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯರಾದ ಲಿಂಗಪ್ಪ ಪೂಜಾರಿ ,ಪುಷ್ಪ, ಶೇಖರ್ ಶೆಟ್ಟಿ ಎಲಿಯನಗೂಡು, ಪೂರ್ಣಿಮಾ ಕುಕ್ಕಿಪಾಡಿ, ಶೋಭಾ, ಬೇಬಿ , ಚಂದ್ರ ಪೂಜಾರಿ, ಗೀತಾ,ಪ್ರತಿಮಾ ಪ್ರಮುಖರಾದ ಹರೀಶ್ ಪೂಜಾರಿ, ಕೋಟ್ಯಾಪ್ಪ ಪೂಜಾರಿ, ಹರೀಶ್ ಪೂಜಾರಿ , ಶಿವಾನಂದ, ಗಂಗಾದರ ಗೌಡ ಮತ್ತಿತರರು ಉಪಸ್ಥಿತರಿದ್ದರು.














