ಇತ್ತೀಚಿನ ಸುದ್ದಿ
ಸಿರಿ ಮಹಾಕಾವ್ಯವು ಸ್ತ್ರೀ ಸಂವೇದನೆ, ಸ್ವಾತಂತ್ರ್ಯದ ಪ್ರತೀಕ: ಲಿಟ್ ಫೆಸ್ಟ್ ನಲ್ಲಿ ಡಾ ಗಾಯತ್ರಿ ನಾವಡ
21/01/2024, 20:56

ಮಂಗಳೂರು(reporterkarnataka.com):ಸಿರಿ ಮಹಾಕಾವ್ಯವು ಸ್ತ್ರೀ ಸಂವೇದನೆ, ಸ್ವಾತಂತ್ರ್ಯದ ಪ್ರತೀಕವಾಗಿದೆ. ಸಿರಿಯು ಸ್ಟ್ರೀತನಕ್ಕೆಆತ್ಮಶಕ್ತಿಯಾಗಿದ್ದಾಳೆ, ಮಾದರಿಯಾಗಿದ್ದಾಳೆ ಎಂದು ಡಾ ಗಾಯತ್ರಿ ನಾವಡ ಅಭಿಪ್ರಾಯಪಟ್ಟರು.
ನಗರದ ಟಿ.ಎಂ.ಎ. ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಮಂಗಳೂರು ಸಾಹಿತ್ಯೋತ್ಸವ ಲಿಟ್ ಫೆಸ್ಟ್ ನಲ್ಲಿ ತುಳು ಮಹಾಕಾವ್ಯ ಸಿರಿ ಆಧಾರಿತ ವಿಚಾರಗೋಷ್ಠಿ ಸಿರಿ ವೈಭವದಲ್ಲಿ ಡಾ ಗಾಯತ್ರಿ ನಾವಡ ಮಾತನಾಡಿದರು.
ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನ ಎದುರಿಸಿ ಹೆಣ್ಣು ನಮಗೆ ಮಾದರಿಯಾಗಿ, ಲಿಂಗರಾಜಕಾರಣದಿಂದ ಎದ್ದು ಬಂದ ಕಾರಣ ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಾಳೆ. ಸಿರಿಜಾತ್ರೆಯಲ್ಲಿ ನಾವು ಗಮನಿಸುವುದು ಸಿರಿಪಾತ್ರಧಾರಿಯಾದವರಿಗೆ ಅನುಭಾವಿಕ ಲೋಕವೊಂದು ಸೃಷ್ಟಿಯಾಗುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ಸ್ತ್ರೀವಾದದಲ್ಲಿ ನಮಗೆ ಕಾಣುವುದು ಸಂಪೂರ್ಣ ತದ್ವರುದ್ಧವಾದ ಆಲೋಚನೆಗಳು. ಭಾರತೀಯ ಕರಾವಳಿಯ ಸಂಸ್ಕೃತಿಯಲ್ಲಿ ಮಹಿಳೆ ಮಾತೃ ರೂಪಿಯಾಗಿ ಕಾಣಿಸುತ್ತಾಳೆ, ಇದುವೇ ನಮ್ಮ ವಿಶೇಷತೆ ಎಂದರು.
ಈಗಿರುವ ತುಳುನಾಡಿನ ಎಲ್ಲಾ ಆಚರಣೆಗಳು ಹಿರಿಯರ ಮಾರ್ಗದರ್ಶನದಿಂದಲೇ ನಡೆದುಕೊಂಡು ಬಂದಿದೆ. ಅದಕ್ಕೇ ನಮ್ಮ ಪ್ರಾಮುಖ್ಯತೆ. ಬೇರೆ ಯಾವ ದೈವಾರಾಧನೆಗೂ ಸಿರಿಯ ಆರಾಧನೆಗೂ ಸ್ಪಷ್ಟ ವ್ಯತ್ಯಾಸವಿದೆ. ತುಳುನಾಡಿನ ವಿವಿಧ ಪ್ರದೇಶಗಳಲ್ಲಿ ಸಿರಿ ಜಾತ್ರೆ, 7 ಸಿರಿಯರು ಮತ್ತು ಕುಮಾರನ ಆರಾಧನೆಗಳಲ್ಲಿ ಪ್ರತ್ಯೇಕತೆಗಳಿವೆ. ದಬ್ಬಾಳಿಕೆಗಳೆಲ್ಲವನ್ನು ಮೀರಿ ಸಿರಿ ಹೊರಬಂದಿರುವುದು ಒಂದು ಶಕ್ತಿ ಎಂದು ರವೀಶ್ ಪಡುಮಲೆ ಹೇಳಿದರು.
ವಿವೇಕಾದಿತ್ಯ ನಿರ್ವಹಿಸಿದರು.