ಇತ್ತೀಚಿನ ಸುದ್ದಿ
ಸಿದ್ದರಾಮಯ್ಯರೇ, ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲಿ ಇಲ್ಲ: ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ
04/01/2023, 21:31

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲಿ ಇಲ್ಲ. ನಾಯಿಯಂತೆ ಬಾಲ ಅಲ್ಲಾಡಿಸಿ ಕುಂಯಿ…ಕುಂಯಿ.. ಅಂತ ಬರೋದು ಕಾಂಗ್ರೆಸ್ ಕಲ್ಚರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ಸಿಗರು ಯಾವ ಪದ ಬಳಸಿದ್ದಾರೋ ಅದು ಕಾಂಗ್ರೆಸ್ಸಿಗೆ ಅನ್ವಯವಾಗುತ್ತೆ. ಕಾಂಗ್ರೆಸ್ಸಿನಲ್ಲಿ ಮಾತ್ರ ಮುಖ್ಯಮಂತ್ರಿಯನ್ನ ಆ ರೀತಿ ನಡೆಸಿಕೊಳ್ಳುವುದು ಎಂದು ಬಯಧವಾರ ಮಾಧ್ಯಮ ಜತೆ ಮಾತನಾಡಿದ ಅವರು ನುಡಿದರು.
ಮುಖ್ಯಮಂತ್ರಿಗಳನ್ನ ಬಾಲ ಅಲುಗಾಡಿಸುವಂತೆ ನೋಡಿಕೊಳ್ಳುತ್ತಿದ್ದದ್ದು ಕಾಂಗ್ರೆಸ್ ಮಾತ್ರ. ವೀರೇಂದ್ರ ಪಾಟೀಲ್ ರಾಜ್ಯ ಕಂಡ ಅಪರೂಪದ, ಪ್ರಭಾವಿ ನಾಯಕ. ಅವರು ಆಸ್ಪತ್ರೆಯಲ್ಲಿದ್ದಾಗ ನೋಡಿಕೊಂಡು ಹೋಗಿ ರಾಜೀವ್ ಗಾಂಧಿ ಏರ್‍ಪೋರ್ಟ್‍ನಲ್ಲಿ ಪದಚ್ಯುತಿಗೊಳಿಸಿದ್ದರು ಎಂದು ಸಿ.ಟಿ. ರವಿ ಖಾರವಾಗಿ ನುಡಿದರು.
ಮುಖ್ಯಮಂತ್ರಿ ಆಡಳಿತ ಪಾಲುದಾರರು ಎಂದು ಪ್ರಧಾನಿ ಭಾವಿಸುತ್ತಾರೆ. ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲಿದೆ ಎಂದು ಸಿದ್ದರಾಮಯ್ಯ ಭಾವಿಸಿರಬಹುದು, ಅದು ತಪ್ಪು ಕಲ್ಪನೆ ಎಂದು ಅವರು ನುಡಿದರು.