6:27 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಜನಸಮೂಹದ ನಾಯಕ; ಎಲ್ಲಿ ನಿಲ್ಲಬೇಕೆಂಬುದನ್ನು

10/11/2022, 20:53

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಕ್ಷೇತ್ರದಲ್ಲಿ ಗುಂಪುಗಾರಿಕೆ ಇಲ್ಲ ಎಂದು ಹೇಳಲಾರೆ , ಸಿದ್ದರಾಮಯ್ಯ ಜನಸಮೂಹದ ನಾಯಕ , ಜನರ ನಾಡಿಮಿಡಿತ ಅರಿತವರು ಅವರು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಹೇಳಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಚುನಾವಣಾ ಪ್ರಚಾರ ಕೆಪಿಸಿಸಿಯಿಂದ ಅಧಿಕೃತವಾಗಿ ಘೋಷಣೆಯಾಗಿಲ್ಲ , ನ .೧೩ ರಂದು ಸಿದ್ದರಾಮಯ್ಯ ಸೀತಿ ಗ್ರಾಮಕ್ಕೆ ಭೇಟಿ ನೀಡಲಿದ್ದು , ಅವರು ದಿವಂಗತ ಬೈರೇಗೌಡರ ಜತೆಯಲ್ಲಿ ರಾಜಕಾರಣ ಮಾಡಿದವರಾಗಿದ್ದು , ಅವರ ಸಮಾದಿಗೂ ಪೂಜೆ ಸಲ್ಲಿಸಲಿದ್ದಾರೆ . ನಂತರ ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ ಎಂದರು . ಕೋಲಾರ ಕ್ಷೇತ್ರದಲ್ಲಿ ನಾನೂ ಆಕಾಂಕ್ಷಿಯೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨೦೧೪ , ೨೦೧೮ ರಲ್ಲಿ ನಾನೂ ಸ್ಪರ್ಧಿಸಲು ಬಯಸಿದ್ದೆ . ನಾನೂ ಟಿಕೆಟ್ ಆಕಾಂಕ್ಷಿಯೇ ಎಂದ ಸುದರ್ಶನ್ , ಸಿದ್ದರಾಮಯ್ಯ ಬರುವುದಾದರೆ ಸ್ವಾಗತ ಆದರೆ ಅದಕ್ಕೆ ಅವರೂ ಅರ್ಜಿ ಹಾಕಬೇಕು , ಚುನಾವಣಾ ಸಮಿತಿ ಅದನ್ನು ಕೆಪಿಸಿಸಿಗೆ ನೀಡಿ , ಅಲ್ಲಿಂದ ಎಐಸಿಸಿ ಹಂತದಲ್ಲಿ ಸ್ಟೀನಿಂಗ್ ಕಮಿಟಿ ಇದ್ದು , ನಂತರ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು . ಕೋಲಾರದಿಂದ ನಾನು ಸ್ಪರ್ಧಿಸಲು ಬಯಸಿರುವೆ , ಇಲ್ಲಿನ ಜನರು , ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವೂ ಇದೆ , ಸಿದ್ದರಾಮಯ್ಯ ಬರಲಿ ಇಲ್ಲವಾದಲ್ಲಿ ನನಗೂ ಅವಕಾಶ ನೀಡಲು ಪಕ್ಷವನ್ನು ಕೋರುವೆ ಎಂದರು . ರಾಜ್ಯ ದೇಶದಲ್ಲಿ ಆಳುತ್ತಿರುವ ಬಿಜೆಪಿ ವೈಫಲ್ಯಗಳ ವಿರುದ್ಧ ಜನಾಭಿಪ್ರಾಯವಿದೆ , ಜನ ಬದಲಾವಣೆ ಬಯಸಿದ್ದಾರೆ , ಸಿದ್ದರಾಮಯ್ಯ ಅಗಾಧ ಆಡಳಿತದ ಅನುಭವ ಹೊಂದಿದ್ದು , ಹಲವಾರು ಚುನಾವಣೆ ನೋಡಿದ್ದಾರೆ ಎಂದರು . ಜಾರಕಿಹೋಳಿ ಮಾತು ಮುಗಿದ ಅಧ್ಯಾಯ ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ವಿಷಯ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು , ಆದರೆ ಅವರು ಇದೀಗ ವಿಷಾದ ವ್ಯಕ್ತಪಡಿಸಿರುವುದರಿಂದ ಅದು ಮುಗಿದ ಅಧ್ಯಾಯ ಎ ೦ ದ ಸುದರ್ಶನ್ , ಅದನ್ನು ಮತ್ತೆ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು .

ಕೋಲಾರದ ಕಾಂಗ್ರೆಸ್ಸಿನಲ್ಲೂ ಕಣಕ್ಕಿಳಿಯಲು ಸಮರ್ಥರಿದ್ದಾರೆ ಎಂದ ಅವರು , ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಟೀಕೆಗಳನ್ನು ತಳ್ಳಿ ಹಾಕಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅವರನ್ನು ಸ್ಪರ್ಧಿಸಲು ಆಹ್ವಾನಿಸುತ್ತಿದ್ದಾರೆ ಅದು ಅವರ ಜನಪ್ರಿಯತೆಗೆ ಸಾಕ್ಷಿಯಲ್ಲವೇ ಎಂದು ಪ್ರಶ್ನಿಸಿದರು . ಸದಸ್ಯತ್ವ ಅಭಿಯಾನಕ್ಕಾಗಿ ನಾನು ಜಿಲ್ಲಾಧ್ಯಕ್ಷನಾಗಿದ್ದೆ . ಇದೀಗ ಬೇರೆಯವರನ್ನು ಪಕ್ಷ ಅತಿ ಶೀಘ್ರ ನೇಮಿಸುತ್ತದೆ ಎಂದು ತಿಳಿಸಿದರು .

ಇತ್ತೀಚಿನ ಸುದ್ದಿ

ಜಾಹೀರಾತು