ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಧ್ಯಾಹ್ನ 1 ಗಂಟೆಗೆ ವಿಧಾನಸೌಧ ಖಾಲಿ ಮಾಡುತ್ತಿದ್ದರು: ಮಾಜಿ ಸಿಎಂ ಕುಮಾರಸ್ವಾಮಿ ಗರಂ
01/03/2023, 13:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಸಿದ್ದರಾಮಯ್ಯ ಅವರೆ, ಪದೇ-ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡ್ಬೇಡಿ. ರಾಜ್ಯದ ಆರ್ಥಿಕ ಪರಿಸ್ಥಿರಿ ಎಲ್ಲಿಗೆ ತಂದಿದ್ದೀರಾ? ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಲು ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಇನ್ನೋರ್ವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಚುನಾವಣೆಗೆ ಹೋಗೋ ಮುನ್ನ ಯೋಜನೆ ಜಾರಿ ಮಾಡಿದ್ರಿ, ಆದರೆ ದುಡ್ಡು ಇಟ್ಟಿರಲಿಲ್ಲ. ನಿಮ್ಮ ತಪ್ಪನ್ನ ಸರಿಪಡಿಸಲು ಆಗದಂತಹಾ ವಾತಾವರಣ ನಿರ್ಮಿಸಿದ್ದೀರಾ ಎಂದರು.
ನನಗೆ ತಾಜ್ ವೆಸ್ಟ್ ಎಂಡ್ ಹೊಟೆಲ್ ನಲ್ಲಿ ಕಾಲ ಕಳೆಯುತ್ತಿದ್ದರು ಎಂದಿದ್ದೀರಾ. ಇಡೀ ದಿನ ಜನರ ಸಂಪರ್ಕದಲ್ಲಿ ಇರುತ್ತಿದ್ದೆ, ದಿನಕ್ಕೆ10-15 ಸಭೆ ಮಾಡ್ತಿದ್ದೆ. ನೀವು ಸಿಎಂ ಆದಾಗ ಮಧ್ಯಾಹ್ನ 1ಕ್ಕೆ ವಿಧಾನಸೌಧ ಖಾಲಿ ಮಾಡ್ತಿದ್ರಿ, ಎಲ್ಲಿ ಹೋಗ್ತಿದ್ರಿ..
ನನಗೆ ಒಂದು ಮನೆ ಕೊಡಲಿಲ್ಲ, ಜನ ತಿರಸ್ಕಾರ ಮಾಡಿದ್ರು ಮನೆ ಬಳಸಿಕೊಂಡ್ರಿ.ಕುಮಾರಕೃಪವನ್ನ ಹೇಗೆ ಬಳಸಿಕೊಂಡ್ರಿ ನನಗೆ ಗೊತ್ತಿದೆ, ನಾನು ಎಲ್ಲಿ ಇರಬೇಕಿತ್ತು? ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಹಣ ನೀಡಿದ್ದೇನೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ಧ. ನಾನು ನಿಮ್ಮಿಂದ ಆಡಳಿತ ಕಲಿಯಬೇಕಾಗಿಲ್ಲ. ಕೊಟ್ಟ ಕುದರೆ, ಕುದರೆ… ಯಾವ ಕೊಟ್ಟ ಕುದರೆ, ಕಾಲು ಕಟ್ ಮಾಡಿ ಓಡಿಸು ಅಂದ್ರೆ ಹೇಗೆ ಓಡ್ಸೋದು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜನ ಯಾರ ಆಡಳಿತ ಹೇಗೆ ಅಂತ ನೋಡಿದ್ದಾರೆ
ಅಧಿಕಾರ ಇರಲಿ, ಇಲ್ಲದಿರಲಿ ನನ್ನಷ್ಟು ಜನರನ್ನ ಯಾರೂ ನೋಡಿಲ್ಲ ಎಂದು ಅವರು ನುಡಿದರು.














