9:44 PM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ ಪುರಸಭೆ: ಜೆಡಿಎಸ್ ಗೆ ಸಂಖ್ಯಾಬಲವಿದ್ದರೂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ!

24/08/2024, 17:57

ಶಬ್ಬೀರ್ ಅಹಮ್ಮದ್ ನಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಭಾಸ್ಕರ್ ಅಧ್ಯಕ್ಷರಾಗುವ ಮೂಲಕ ಬಹುಮತ ಹೊಂದಿರುವ ಜನತಾ ದಳಕ್ಕೆ ತೀವ್ರ ಮುಖಭಂಗವಾಗಿದೆ‌.


ಜೆಡಿಎಸ್‌ಗೆ ಸಂಖ್ಯಾ ಬಲವಿದ್ದರೂ ಸಹ ಅಧ್ಯಕ್ಷ ಸ್ಥಾನವು ಕಾಂಗ್ರೆಸ್ ಪಾಲಾಗಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗು ಸಂಸದ ಮಲ್ಲೇಶ್‌ಬಾಬು ಅವರಿಗೆ ಇರಿಸುಮುರಿಸು ಉಂಟಾಗಿದೆ.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ತಹಶೀಲ್ದಾ‌ರ್ ಜಿ.ಎನ್.ಸುಧೀಂದ್ರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ, ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆ, ಕಾಂಗ್ರೇಸ್ 11 ಸದಸ್ಯರು ಜೆಡಿಎಸ್ 12 ಸದಸ್ಯರು, ಹಾಲಿ ಜೆಡಿಎಸ್‌ ಶಾಸಕ ಹಾಗೂ ಸಂಸದ ಸೇರಿ 14 ಸದಸ್ಯ ಸಂಖ್ಯಾ ಬಲ ಹೊಂದಿದೆ. ಜೆಡಿಎಸ್ ನಿಂದ ಬಿ.ವೆಂಕಟರೆಡ್ಡಿ, ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಭಾಸ್ಕರ್, ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದಿಂದ ಸುನಿತಾ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಭಾಸ್ಕರ್ 11 ಮತಗಳು ಪಡೆದು ಜಯಶೀಲರಾದರೆ, ಜೆಡಿಎಸ್ ಬೆಂಬಲಿತ ಬಿ.ವೆಂಕಟರೆಡ್ಡಿ ರವರಿಗೆ ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಹಾಗು ಸಂಸದ ಮಲ್ಲೇಶ್‌ಬಾಬು ರವರು ಮತ ಚಲಾಯಿಸಿದರೂ ಸಹ 9 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಸುನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಎನ್.ಸುಧೀಂದ್ರ ಮಾಹಿತಿ ನೀಡಿದರು.
ಜೆಡಿಎಸ್‌ ಬೆಂಬಲಿತ ಐವರು ಸದಸ್ಯರು ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಬಹುಮತವಿದ್ದರೂ ಸಹ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಶಾಸಕರಿಗೆ ಹಾಗೂ ಸಂಸದರಿಗೆ ಬಾರಿ ಮುಖಭಂಗವಾದ್ದಂತಿದೆ. ಇದೇ ಸಮಯದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಮಾತನಾಡಿ ಈ ಚುನಾವಣೆಯು ನಮಗೆ ಲೆಕ್ಕಕ್ಕೆ ಇಲ್ಲ. ನಾನು ಹಾಗೂ ಸಂಸದರು ಕ್ಷೇತ್ರಾದ್ಯಾಂತ ನಾಳೆಯಿಂದಲೇ ಅಭಿವೃದ್ಧಿಗೆ ಬೇಕಾದ ರೂಪರೇಷಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಚುನಾವಣೆಗೆ ಗೈರು ಹಾಜರಾಗಿರುವ ಸದಸ್ಯರನ್ನು ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಪುರಸಭೆ ನೂತನ ಅಧ್ಯಕ್ಷ ಭಾಸ್ಕ‌ರ್ ಮಾತನಾಡಿ, ಮೊದಲನೇಯದಾಗಿ ನನ್ನನ್ನು ಪುರಸಭೆ ಸದಸ್ಯನನ್ನಾಗಿ ಆಯ್ಕೆ ಮಾಡಿರುವ ಕಟ್ಟೆಕೆಳಗಿನ ಪಾಳ್ಯದ ಮತದಾರರಿಗೆ ಕೃತಜ್ಞನತೆ ಸಲ್ಲಿಸುತ್ತೇನೆ ಹಲವು ಶ್ರೀನಿವಾಸಪುರ ಜನತೆಗೆ, ಕಾಂಗ್ರೆಸ್‌ ಪಕ್ಷಕ್ಕೆ ಧನ್ಯವಾರಗಳನ್ನ ಸಲ್ಲಿಸುತ್ತೇನೆ ಎಂದರು.
ನಮಗೆ ಬೇಕಾಗಿರುವುದು ಕೇವಲ 10 ಓಟುಗಳು. ಕಾಂಗ್ರೆಸ್ ಪಕ್ಷದ ಇನ್ನೊಬ್ಬರು ಬಂದು ಓಟು ಹಾಕಿ ಹೋಗಿದ್ದಾರೆ ನಮಗೆ ಆ ಓಟು ಲೆಕ್ಕಕ್ಕೆ ಇಲ್ಲ. ಇನ್ನು ಅಭಿವೃದ್ಧಿ ವಿಚಾರದಲ್ಲಿ ಕೆಳೆದ ಮೂರು ವರ್ಷಗಳಿಂದ ಪಟ್ಟಣ ಹದಗೆಟ್ಟು ಹೋಗಿದೆ, ಎರಡು ರ್ವಗಳಿಂದ ಕ್ಯಾಟಗರಿ ಬಂದಿಲ್ಲ. ಪುರಸಭೆಗೆ ಆಯ್ಕೆಯಾಗಿರುವುದು ಬಹುತೇಕ ಯುವಕರಾದ್ದರಿಂದ ಇನ್ನು ಮುಂದೆ ಖಾತೆಗೆ ಇಪ್ಪತ್ತು ಸಾವಿರ ಮೂವತ್ತು ಸಾವಿರ ರೂಗಳು ಕೊಟ್ಟಿದ್ದೇವೆ ಎಂದು ಯಾರು ಹೇಳಿಕೂಡದು. ಖಾತೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.
ಇನ್ನು ಮುಂದೆ ಪುರಸಭೆಗೆ ಎಲ್ಲಾ ಲಿಗಾ ಕಾಟವಿಲ್ಲ. ನೇರವಾಗಿ ಫಲಾನುಭವಿಗಳು ಅಧಿಕಾರಿಗಳ ಕಡೆಯಿಂದ ತಮ್ಮ ಕೆಲಸವನ್ನು ಮಾಡಿಕೊಳ್ಳವ ವ್ಯವಸ್ಥೆ ಮಾಡಲಾಗುವುದು ಹಾಗು ಪಟ್ಟಣವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.
ಪುರಸಭೆಯ 100 ಮೀಟರ್ ಸುತ್ತ ಮುತ್ತಲು ಎಲ್ಲಾ ಅಂಗಡಿ ಮುಗ್ಗಟ್ಟಗಳನ್ನು ಮುಚ್ಚಲಾಗಿತ್ತು. ಚುನಾವಣೆಯನ್ನು ಅಡಿಷನಲ್‌ ಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಪೊಲೀಸ್‌ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಪಿಎಸ್‌ಐ ಜಯರಾಮ್ ನೇತೃತ್ವದಲ್ಲಿ ಬಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪುರಸಭೆ ಎದುರು ಕಾಂಗ್ರೆಸ್ ಕಾರ್ಯಕರ್ತರ ತಮ್ಮ ಪಕ್ಷದ ಅಭ್ಯರ್ಥಿ ಭಾಸ್ಕ‌ರ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು