8:34 AM Saturday7 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ ಕರಾಡ ಬ್ರಾಹ್ಮಣ ಸುಧಾರಕ ಸಂಘ: ಪತ್ರಕರ್ತ ಮಂದಾರ ರಾಜೇಶ್ ಭಟ್ ಸಹಿತ 11 ಮಂದಿಗೆ ಸನ್ಮಾನ

06/11/2022, 19:48

ಮೂಡಬಿದ್ರೆ(reporterkarnataka.com): ಕರಾಡ ಬ್ರಾಹ್ಮಣ ಸುಧಾರಕ ಸಂಘ ಕೊಡ ಮಾಡುವ ಪ್ರತಿಷ್ಠಿತ ಸನ್ಮಾನ ಪತ್ರಕರ್ತ ಮಂದಾರ ರಾಜೇಶ್ ಭಟ್ ಸಹಿತ 11 ಮಂದಿಗೆ ಲಭಿಸಿದೆ.

ಮೂಡಬಿದ್ರೆ ತಾಲೂಕಿನ ಪುತ್ತಿಗೆ ಗ್ರಾಮದ ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ 76ನೇ ಭಜನಾ ಸಪ್ತಾಹದ ಅಂಗವಾಗಿ ಭಾನುವಾರ ಭಜನಾ ಕಾರ್ಯಕ್ರಮದೊಂದಿಗೆ ಗುಂಡ್ಯಡ್ಕ ಶ್ರೀನಿವಾಸಪುರ ಕರಾಡ ಬ್ರಾಹ್ಮಣ ಸುಧಾರಕ ಸಂಘದ 54ನೇ ವಾರ್ಷಿಕ ಮಹಾಸಭೆಯನ್ನು ದೇವಸ್ಥಾನದ ಆವರಣದ ಸಭಾಂಗಣದಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಕರಾಡ ಬ್ರಾಹ್ಮಣ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹರಿ ಭಟ್ ಕೇಮಾರು, ಸರೋಜಾ ಪಂಡಿತ್ ಈರಂದೋಡಿ, ಲೀಲಾ ಅಂಬೇಕರ್ ಗುಂಡ್ಯಡ್ಕ, ರಾಧಾ ಜಿ ಭಟ್ ಕುಂಡೇಲು ಉಡುಪಿ, ಶಕುಂತಲಾ ಭಟ್ ಕಾಯರ್ಗುಡ್ಡೆ, ರಾಮಕೃಷ್ಣ ಭಟ್ ತಲ್ವಳ್ಕರ್ ಉಡುಪಿ, ಪ್ರಭಾಕರ ಭಟ್ ಕಾರ್ಕಳ, ಚಂದ್ರಮೋಹನ್ ಭಟ್ ಮಂಗಳೂರು ಇವರುಗಳನ್ನು ಗೌರವಿಸಲಾಯಿತು.
ನಂತರದಲ್ಲಿ ವೇದಮೂರ್ತಿ ಸುಬ್ರಮಣ್ಯ ಭಟ್ ಪರಾಡ್ಕರ್, ದಯಾನಂದ ಪಂಡಿತ್ ಮೂಡಬಿದಿರೆ ಹಾಗೂ ಮಂದಾರ ರಾಜೇಶ್ ಭಟ್ ಅವರುಗಳಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಸಮಾಜ ಸುಧಾರಕ ಸಂಘದ ಗೌರವ ಕಾರ್ಯಾಧ್ಯಕ್ಷರಾದ ಗಿರಿಧರ ಭಟ್ಟ ಪರಾಡ್ಕರ್ ಮಂಗಳೂರು, ಅಧ್ಯಕ್ಷರಾದ ಕೆ ರಾಮಚಂದ್ರ ಭಟ್ ನಾಟೇಕರ್ ಕುಕ್ಕುಡೆಲು, ಉಪಾಧ್ಯಕ್ಷರಾದ ರಾಮಚಂದ್ರ ಪಂಡಿತ್ ಕಾಂತಾವರ ಹಾಗೂ ಸರಸ್ವತಿ ಚಿಂಚಳ್ಕರ್ ಕೊಪ್ಪನ್ದಡ್ಕ, ಕಾರ್ಯದರ್ಶಿ ಚಂದ್ರಶೇಖರ್ ಭಟ್ ಕಟೀಲು, ಜೊತೆ ಕಾರ್ಯದರ್ಶಿ ಸದಾನಂದ ಚಿಂಚಲ್ಕರ್ ಕೊಪ್ಪಂದಡ್ಕ, ಕೋಶಾಧಿಕಾರಿ ಪ್ರಭಾಕರ್ ಬಾಟೆ ಗುಂಡಿಡ್ಕ ಹಾಗೂ ಉಡುಪಿ ವಲಯ ಜಿಲ್ಲಾಧ್ಯಕ್ಷರಾದ ಪಾಂಡುರಂಗ ಲಾಗ್ವನ್ಕರ್ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮಂದಾರ ರಾಜೇಶ್ ಭಟ್ಟರು ತಾನು ಬೆಳೆದು ಬಂದ ಹಾದಿ ಮಂದಾರ ತ್ಯಾಜ್ಯ ದುರಂತ ಸಂದರ್ಭದಲ್ಲಿ ಪಟ್ಟ ಬವಣೆ, ತಾನು ನೀಡುತ್ತಿರುವ ದಾನ ಧರ್ಮಗಳ ಪ್ರಮಾಣ ಮತ್ತು ಕಾರಣ, ತ್ಯಾಜ್ಯ ದುರಂತ ಸಂದರ್ಭದಲ್ಲಿ ತಾನು ಸಂಪೂರ್ಣವನ್ನು ಕಳೆದುಕೊಂಡು ಸಮಾಜದ ಮುಂದೆ ಕೈಚಾಚಿ ಕಳೆದ ದಿನಗಳು, ತನಗೆ ಇದುವರೆಗೆ ಬಂದ ಪ್ರಶಸ್ತಿಗಳ ವಿವರ ಕೊನೆಯಲ್ಲಿ ತನಗೆ ಗೌರವ ಡಾಕ್ಟರೇಟ್ ಬಂದ ಬಗೆ ಎಲ್ಲಾ ವಿವರಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಂದ ಕರಾಡ ಸಮಾಜದ ಬಂಧುಗಳಿಗೆ ವಿವರಿಸಿದರು.

“ವೈದಿಕ ಸಾಮ್ರಾಟ್ ” ಬಿರುದಾಂಕಿತ ಏರ್ಪಲೆ ಸುಬ್ರಮಣ್ಯ ಭಟ್ ಮಾತನಾಡಿ ಪೂಜೆ ಪುನಸ್ಕಾರಗಳ ಮಹತ್ವ, ತಂದೆ ತಾಯಿಗಳ ಮಹತ್ವ, ಮನಮುಟ್ಟುವಂತೆ ವಿವರಿಸಿದರು , ಸನ್ಮಾನಿತ ದಯಾನಂದ ಪಂಡಿತ ಮಾತನಾಡಿ ಕಾರ್ಯಕ್ರಮಗಳಲ್ಲಿ ಆಹಾರದ ಮಹತ್ವ, ಆಹಾರ ನಷ್ಟವಾಗದಂತೆ ಬದಲಾಗಬೇಕಾದ ವಿಧಿ ವಿಧಾನಗಳ ಬಗ್ಗೆ ಕಿವಿಮಾತುಗಳು, ಪರಿಸರ ಸಂರಕ್ಷಣೆ ಬಗ್ಗೆ ವಿವರಿಸಿದರು. ಚಂದ್ರಶೇಖರ್ ಭಟ್ ಕಟೀಲು ಹಾಗೂ ರಾಮಚಂದ್ರ ಪಂಡಿತ್ ಸಭಾ ಕಾರ್ಯಕ್ರಮ ನಿರೂಪಣೆ ಮತ್ತು ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು