ಇತ್ತೀಚಿನ ಸುದ್ದಿ
ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ನೀರು ಎರಚಿದ ಆರೋಪ: ಆರೋಪಿಗಳ ಬಂಧನ ಆಗ್ರಹಿಸಿ ಭಾರೀ ಪ್ರತಿಭಟನೆ; ನಂಜನಗೂಡು ಬಂದ್
04/01/2024, 16:54

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಶ್ರೀ ಶ್ರೀಕಂಟೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿ ಗಳ ಮೇಲೆ ನೀರು ಎರಚಿ ಅಪಮಾನ ಗೊಳಿಸಿದವರನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ಹಾಗೂ ಮಾಜಿ ಶಾಸಕ ಹರ್ಷವರ್ಧನ್ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ
ಬಂದ್ ಹಿನ್ನೆಲೆ ಇಂದು ಬೆಳಗ್ಗಿನಿಂದಲೇ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದ್ದು ಇಡೀ ನಂಜನಗೂಡು ಯಾವುದೇ ವ್ಯಾಪಾರ ವಹಿವಾಟುವಿಲ್ಲದೆ ಸ್ತಬ್ಧವಾಗಿತ್ತು. ಮೆಡಿಕಲ್, ಶಾಲಾ ಕಾಲೇಜು, ಬ್ಯಾಂಕ್, ಹಾಲಿನ ಕೇಂದ್ರಗಳನ್ನು ಹೊರತುಪಡಿಸಿದಂತೆ ಉಳಿದ ಎಲ್ಲಾ ವ್ಯವಹಾರ ಕೇಂದ್ರಗಳು ಮುಚ್ಚಲ್ಪಟ್ಟಿದ್ದವು
ಜಾತ್ಯತೀತ, ಪಕ್ಷಾತೀತ, ಹಾಗೂ ಧರ್ಮಾತೀತವಾಗಿ ಎಲ್ಲಾ ವರ್ಗದ ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪರೋಕ್ಷವಾಗಿ ಬೆಂಬಲ ಸೂಚಿಸಿದರು.
ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಬಿಜೆಪಿ ಮುಖಂಡರು ಸಹ ಈ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಡಿಸೆಂಬರ್ 26ರಂದು ದೇವಾಲಯದ ವತಿಯಿಂದ ಹಮ್ಮಿಕೊಂಡಿದ್ದ ಅಂಧಕಾಸುರನ ವಧೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಮಹಿಷಾಸುರನಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಮಹಿಷನ ಭಕ್ತರು ಕಾರ್ಯಕ್ರಮಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಕಾರ್ಯಕ್ರಮ ಮಾಡೇ ತಿರುವುದಾಗಿ ಹೇಳಿ ಕಾರ್ಯಕ್ರಮ ನಡೆಸಿತ್ತು.
ಇದರಿಂದಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟು ಕಾರ್ಯಕ್ರಮದ ವೇಳೆ ಕೆಲವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ನೀರು ಎರಚಿ ಅಪವಿತ್ರ ಗೊಳಿಸಿದ್ದಾರೆ ಎಂದು ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿತ್ತು.
ಅಂದಿನಿಂದ ಇಂದಿನವರೆಗೂ ಎರಡು ಗುಂಪುಗಳ ನಡುವೆ ಶೀತಲ ಸಮರವೇ ನಡೆಯುತ್ತಿದ್ದ ಹಿನ್ನೆಲೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ಹಾಗೂ ಮಾಜಿ ಶಾಸಕರು ಇಂದು ಬಂದ್ ಗೆ ಕರೆ ನೀಡಿದ್ದರು.
ಇದರ ಸೂಕ್ಷ್ಮತೆ ಅರಿತ ಜಿಲ್ಲಾ ಮತ್ತು ತಾಲೂಕ ಆಡಳಿತ ವತಿಯಿಂದ ಬುಧವಾರ ಎರಡು ಗುಂಪುಗಳ ನಡುವೆ ಶಾಂತಿ ಸಂದಾನ ಸಭೆ ನಡೆಸಿ ಬಂದ್ ಗೆ ಅನುಮತಿ ನೀಡುವುದಿಲ್ಲ ಕೈಬಿಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು.
ಇದಕ್ಕೆ ಒಪ್ಪದ ಶ್ರೀಕಂಠೇಶ್ವರಸ್ವಾಮಿ ಭಕ್ತ ಮಂಡಳಿ ಹಾಗೂ ಹಿಂದುಪರ ಸಂಘಟನೆಗಳು ಬಂದ್ ಯಶಸ್ವಿಗೊಳಿಸಲು ಸಫಲರಾಗಿದ್ದಾರೆ.