3:33 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಶ್ರೀ ಗಡ್ಡಿ ಗದ್ದೇಮ್ಮ ದೇವಿಯ ಜಾತ್ರೆಯಲ್ಲಿ ಮದ್ಯದ ಹೊಳೆ: ಕ್ರಮ ಕೈಗೊಳ್ಳದ ಅಬಕಾರಿ, ಪೊಲೀಸ್ ಇಲಾಖೆ

15/01/2025, 14:48

ಶಿವು ರಾಠೋಡ ಹುಣಸಗಿ ನಾರಾಯಣಪುರ

info.reporterkarnataka@gmail.com

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಪೋಲಿಸ ಠಾಣೆಯ ವ್ಯಾಪ್ತಿಯ ದೇವರಗಡ್ಡಿ ಶ್ರೀ ಗಡ್ಡಿ ಗದ್ದೇಮ್ಮ ದೇವಿಯ ಜಾತ್ರೆಯಲ್ಲಿ ಬಹಿರಂಗವಾಗಿ ನಕಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಡಿಯೋ ಸಾಕ್ಷಿ ಸಮೇತ ವರದಿ ಮಾಡಿದರೂ ಮದ್ಯ ಮಾರಾಟಗಾರರ ಮೇಲೆ ಕಠಿಣ ಕಾನೂನು ಕ್ರಮಕೈಬೇಕಾದ ಅಬಕಾರಿ ಇಲಾಖೆ ಹಾಗೂ ನಾರಾಯಣಪುರ ಪೋಲಿಸರು ತೆಪ್ಪಗಿ ಕುಳಿತ್ತಿದ್ದಾರೆ.
ಜಾತ್ರೆಯ ರಥೋತ್ಸವದಲ್ಲೂ ಪೋಲಿಸರು ನಕಲಿ‌ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಜಾತ್ರೆಯ ಬಂದೋಬಸ್ತ್ ಗೆ ನಾರಾಯಣಪುರ ಠಾಣಾ ಪೋಲಿಸ್ ಸಿಬ್ಬಂದಿ ಅಲ್ಲದೆ ಹುಣಸಗಿ ತಾಲ್ಲೂಕಿನ ವಿವಿಧ ಪೋಲಿಸ್ ಠಾಣಾ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿತ್ತು.
ಆದರೆ ಜಾತ್ರೆಯಲ್ಲಿ ನಕಲಿ ಮದ್ಯ ಹಾಗೂ ಅಕ್ರಮ ದಂಧೆಕೋರ ಮೇಲೆ ಎಫ್ ಐಆರ್ ದಾಖಲಿಸದೆ ತಾವೇ ಸ್ವತಃ ಅಕ್ರಮ ಮದ್ಯ ಮಾರಾಟಗಾರಿಗೆ ಜಾತ್ರೆಯಲ್ಲಿ ರಾಜಾರೋಷವಾಗಿ ನಕಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ. ಪೋಲಿಸ್ ಇಲಾಖೆ ಅಕ್ರಮ ತಡೆಗೆ ಇದೆಯೋ ಅಥವಾ ಅಕ್ರಮ ಮಾಡುವವರ ಪರ ಇದೆಯೋ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜಾತ್ರೆಗೆ ಬಂದ ಭಕ್ತಾಧಿಗಳಂತು ಪೋಲಿಸರದ್ದು ಇಲ್ಲಿ ಏನು‌ ನೆಡಯುವುದಿಲ್ಲ ಎಂದು ಮಾತಾಡಿಕೋಳುತ್ತಿದ್ದಾರೆ. ಹಣ ಯಾರು ಕೋಡುತ್ತಾರೆ ಅವರ ಪರ ಪೋಲಿಸರು ಕೆಲಸ ಮಾಡುತ್ತಾರೆ. ಹಣ ನೀಡಿ ಎಲ್ಲ ಅಕ್ರಮ ದಂಧೆ ಮಾಡಬಹುದು ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಕಲಿ‌ ಸಾರಾಯಿ ಮಾರಾಟಗಾರ ಬಗ್ಗೆ ಜೀವದ ಹಂಗಿಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ವರದಿ ಬಿತ್ತರಿಸಿದರೂ ಕಾನೂನು ಕ್ರಮಕೈಗೋಳದೆ ಅಕ್ರಮಕ್ಕೆ ಸಾಥ್ ನೀಡುತ್ತಾರೆ ಎಂದರೆ ಯಾವ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಯಾದಗಿರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳೆ ನಾರಾಯಣಪುರ ಠಾಣೆಯಲ್ಲಿ ಅಕ್ರಮಕ್ಕೆ ಸಾಥ್ ನೀಡುತ್ತಿರುವವರ ಮೇಲೆ ಕ್ರಮಗೋಳುತ್ತಿರಾ ಅಥವಾ ನಿವು ಅಕ್ರಮಕ್ಕೆ ಸಾಥ್ ನೀಡಿದ ನಾರಾಯಣಪುರ ಪೋಲಿಸ ಠಾಣಾ ಸಿಬ್ಬಂದಿಗೆ ಸಾಥ್ ನೀಡುತ್ತಿರಾ. ತಾವು ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು‌ ಪೋಲಿಸ್ ಇಲಾಖೆಯಲ್ಲಿ ಮಾತಾಡಿಕೋಳುತ್ತಾರೆ. ಈ ಪ್ರಕರಣದಲ್ಲಿ ಸಾಕ್ಷಿ ಸಮೇತವಾಗಿ ವರದಿ ನೀಡಿದ್ದೇವೆ. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಠಣ ಕ್ರಮಕೈಗೊಳ್ಳಿ ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು