ಇತ್ತೀಚಿನ ಸುದ್ದಿ
ಶೂಟಿಂಗ್ ವೇಳೆ ಬಿದ್ದು ಪ್ರಸಿದ್ಧ ನಟ ಪ್ರಕಾಶ್ ರೈ ಕೈಗೆ ಏಟು: ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲು
10/08/2021, 19:35
ಹೈದರಾಬಾದ್(reporterkarnataka.com): ಕರಾವಳಿ ಮೂಲದ ಪ್ರಸಿದ್ಧ ನಟ ಪ್ರಕಾಶ್ ರೈ ಅವರು ಸಿನಿಮಾ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದಾರೆ.
ತಮಿಳು ಸಿನಿಮಾ ‘ತಿರುಚಿತ್ರಾಂಬರಂ’ ದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಅವರ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಿಸಲಾಗಿದೆ. ತಮಿಳು ನಟ ಧನುಷ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿಯಿಸುತ್ತಿದ್ದಾರೆ.
ಪ್ರಕಾಶ್ ರೈ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಶೂಟಿಂಗ್ ವೇಳೆ ಬಿದ್ದು ಕೈಗೆ ಸಣ್ಣ ಪೆಟ್ಟಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ನನ್ನ ಸ್ನೇಹಿತ ಡಾ.ಗುರುವಾರೆಡ್ದಿ ಅವರ ಆಸ್ಪತ್ರೆಗೆ ತೆರಳುತ್ತಿದ್ದೇನೆ. ಬೇಗನೇ ಗುಣಮುಖನಾಗುತ್ತೇನೆ, ಆತಂಕ ಬೇಡ ಎಂದು ತಿಳಿಸಿದ್ದಾರೆ.